ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಯತ್ನ

ಸಿಂದಗಿ(ವಿಜಯಪುರ):ಕೊರೊನಾ ಸಮೀಕ್ಷೆಗೆ ತೆರಳಿದ್ದ ಆಶಾ ಕಾರ್ಯಕರ್ತೆ ಮೇಲೆ ಮಹಿಳೆಯರು ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದಲ್ಲಿ ನಡೆದಿದೆ.
ಸಾವಿತ್ರಿ ಬಡಿಗೇರ್ ಆಶಾ ಕಾರ್ಯಕರ್ತೆ ಕೊರೊನಾ ಜಾಗೃತಿ ಮತ್ತು ಸಮೀಕ್ಷೆಗಾಗಿ ಹಚ್ಯಾಳ ಗ್ರಾಮಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಗ್ರಾಮದ ಕೆಲ ಮಹಿಳೆಯರು ಪದೇ ಪದೇ ನಮ್ಮ ಮನೆಗೆ ಹಾಗೂ ನಮ್ಮ ಕಾಲೋನಿಗೆ ಯಾಕೆ ಬರ್ತೀಯಾ ಎಂದು ಆಶಾ ಕಾರ್ಯಕರ್ತೆಗೆ ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.
ಮಹಿಳೆಯರು ಹಲ್ಲೆಗೆ ಯತ್ನಿಸುತ್ತಿದ್ದಂತೆ ಆತಂಕಗೊAಡ ಆಶಾ ಕಾರ್ಯಕರ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

ಎಸ್.ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂದಗಿ(ವಿಜಯಪುರ)

Please follow and like us:

Related posts

Leave a Comment