ಸಿಂಧನೂರು : ಮೂರು ಪಟ್ಟು ಬೆಲೆಗೆ ಅಕ್ರಮವಾಗಿ ತಂಬಾಕು ಉತ್ಪನ್ನ ಮಾರಾಟ..

ಸಿಂಧನೂರು(ರಾಯಚೂರು): ಗುಟ್ಕಾ-ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವ ಡೀಲರ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸಿಂಧನೂರು ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ ವಹಿಸಿರುವುದು ಬೆಳಕಿಗೆ ಬಂದಿದ್ದು, ಡೀಲರ್‌ಗಳು ತಂಬಾಕು ಉತ್ಪನ್ನಗಳನ್ನು ಮೂರು ಪಟ್ಟು ಅಧಿಕ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದು ಬಯಲಾಗಿದೆ.
ಅಂದ ಹಾಗೇ ಮಹಾಮಾರಿ ಕೋವಿಡ್-೧೯ ಹರಡದಂತೆ ತಡೆಗಟ್ಟುವ ಉದ್ದೇಶದಿಂದ ಲಾಕ್ ಡೌನ್ ಆಗಿದೆ.ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಡೀಲರ್‌ಗಳು ನಾಲ್ಕು ಪಟ್ಟು ಹೆಚ್ಚಿನ ಬೆಲೆಯಲ್ಲಿ ಗುಟ್ಕಾ-ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬAದಿದೆ.
ಇನ್ನೂ ಮಾಜಿ ಸಚಿವ ಶಾಸಕ ವೆಂಕಟರಾವ್ ನಾಡಗೌಡ ಮಹಾಮಾರಿ ಕೋವಿಡ್-೧೯ ಸಂಬAಧಿಸಿದAತೆ ಹಲವು ಬಾರಿ ನಗರ ಸಭೆಯ ಅಧಿಕಾರಿಗಳ ಹಾಗೂ ಪಿಡಿಓಗಳ ಸಭೆ ನಡೆಸಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರು ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು.ಆದರೂ ಸಹ ತಾಲೂಕು ಆಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ..
ಈ ಕುರಿತು ತಹಶೀಲ್ದಾರ ಮಂಜುನಾಥ ಭೋಗವತಿ ಅವರನ್ನು ಪ್ರಶ್ನಿಸಿದಾಗ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಧಿಕ ಬೆಲೆಯಲ್ಲಿ
ಮಾರಾಟ ಮಾಡುವವರ ಬಗ್ಗೆ ಸಾರ್ವಜನಿಕರು ದೂರ ನೀಡಿದರೆ,ಅವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಪಪಡಿಸಿದರು.
ಒಟ್ಟಾರೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಸ್ಥಳಗಳ ಮೇಲೆ ದಾಳಿ ಮಾಡಿ ಆ ಉತ್ಪನ್ನಗಳನ್ನು ವಶಪಡಿಸಿಕೊಂಡ ಡೀಲರ್‌ಗಳ ಪರವಾನಿಗೆ ರದ್ದು ಮಾಡಬೇಕಾದ ತಾಲೂಕು ಆಡಳಿತ ಹಾಗೂ ಜಿಲ್ಲಾ ತುಂಬಾ ನಿಯಂತ್ರಣ ಅಧಿಕಾರಿಗಳು ಮಾತ್ರ ನಿರ್ಲಕ್ಷ ಧೋರಣೆ ಅನುಸರಿಸಿರುವುದು ವಿಪರ್ಯಾಸವೇ ಸರಿ..

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment