ರಾಜ್ಯದಲ್ಲಿ ಭಾರೀ ಮಾಂಸ ದಂಧೆ ಬಯಲಿಗೆಳೆದ ಮೋದಿ(Exclusive news)

*ಪ್ರಧಾನಿ ಕಛೇರಿಯಿಂದ ಜಿಂಕೆ ಮಾಂಸ ದಂಧೆ ಬಗ್ಗೆ ಪತ್ರ* ನಿದ್ದೆಯಿಂದ ಎದ್ದ ಅರಣ್ಯ ಇಲಾಖೆ..
*ದಂಧೆಯಲ್ಲಿ ರಾಜಕೀಯ ಮುಖಂಡರ ಕೈವಾಡ? * ರಾಜ್ಯದ ಪ್ರತಿಷ್ಟಿತ ಹೋಟೆಲ್‌ಗಳಿಗೆ ಜಿಂಕೆ ಮಾಂಸ ರವಾನೆ

Exclusive news….

ಚಾಮರಾಜನಗರ: ರಾಜ್ಯದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವನ್ಯ ಜೀವಿಗಳ ಮಾಂಸ ದಂಧೆ ಭರ್ಜರಿಯಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ವಿಶೇಷ ಅಂದರೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಕಛೇರಿಯಿಂದಲೇ ಈ ಮಾಂಸ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿರುವುದು ಕೂಡ ಇದೀಗ ಬಯಲಾಗಿದೆ.ಅಷ್ಟರ ಮಟ್ಟಿಗೆ ರಾಜ್ಯ ಅರಣ್ಯ ಇಲಾಖೆ ರಾಜ್ಯದಲ್ಲಿ ನಿದ್ದೆಗೆ ಜಾರಿರುವುದು ಸ್ಪಷ್ಟವಾಗಿದೆ.
ಇನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಧಾನಿಯವರೇ ಅಧ್ಯಕ್ಷರಾಗಿದ್ದು,ಅವರ ಕಛೇರಿಯಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಬಂಡಿಪುರ ಅರಣ್ಯ ಇಲಾಖೆಗೆ ಪತ್ರ ಬಂದಿದೆ.
ಪತ್ರದಲ್ಲಿ ಸ್ಥಳೀಯವಾಗಿ ತಯಾರಿಸಿದ ನಾಡ ಬಂದೂಕಿನ ಗುಂಡೇಟಿಗೆ ವನ್ಯ ಜೀವಿಗಳು ಬಲಿಯಾಗುತ್ತಿದ್ದು, ಕಳ್ಳಬೇಟೆಗಾರರನ್ನ ಬೆನ್ನತ್ತುವಂತೆ, ಮಾಂಸ ದಂದೆಯ ದೊಡ್ಡ ಜಾಲವನ್ನ ಪತ್ತೆ ಹಚ್ಚುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ.
ಇದೇ ವೇಳೆ ಪ್ರಧಾನಿ ಕಛೇರಿಯಿಂದ ಪತ್ರ ಬಂದೊಡನೆ ತಕ್ಷಣ ನಿದ್ದೆಯಿಂದ ಎದ್ದ ಅರಣ್ಯ ಇಲಾಖೆ ಇದೀಗ ಕಳೆದ ಹದಿನೈದು ದಿನಗಳಿಂದ ಕಳ್ಳ ಬೇಟೆಗಾರರಿಂದ ನೂರಾರು ಕೆಜಿ ಜಿಂಕೆ ಮಾಂಸ, ಪುನುಗು ಬೆಕ್ಕು, ಕಡವೆ ಮಾಂಸ ವಶ ಪಡಿಸಿಕೊಂಡಿದೆ.
ಅಲ್ಲದೆ, ಇದುವರೆವಿಗೆ ಹದಿನಾಲ್ಕು ಕಳ್ಳಬೇಟೆಗಾರರ ಬಂಧನ ಮಾಡಲಾಗಿದ್ದು,ಬಂಧಿತರು ಲಾಕ್‌ಡೌನ್ ಸಮಯವನ್ನೆ ಲಾಭವನ್ನಾಗಿಸಿಕೊಂಡ ವಿಷಯ ಕೂಡ ಬಟ್ಟಬಯಲಾಗಿದೆ.
ಇದಕ್ಕಿಂತ ಪ್ರಮುಖ ವಿಷಯವೆಂದರೇ, ಮಾಂಸ ದಂಧೆಯಲ್ಲಿ ಜಿಲ್ಲಾ ಆದಿವಾಸಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ, ರಾಜ್ಯ ಆದಿವಾಸಿ ಸಂಘದ ಅಧ್ಯಕ್ಷ ಮುದ್ದಯ್ಯನ ಪುತ್ರ ಭಾಗಿಯಾಗಿದ್ದು,ಈತ ಬೇಟೆಯಾಡುವಾಗ ಸಿಕ್ಕಿಬಿದ್ದಿದಾನೆ.
ಇದಲ್ಲದೆ,ಜಿಂಕೆ ಮಾಂಸ ದಂಧೆಯಲ್ಲಿ ಬಾರಿ ಜಾಲ ಕೆಲಸ ನಿರ್ವಹಿಸುತ್ತಿದ್ದು, ಅಧಿಕಾರಿಗಳ, ರಾಜಕೀಯ ಮುಖಂಡರ ಕೈವಾಡದ ಶಂಕೆ ವ್ಯಕ್ತವಾಗಿದೆ.ಸದ್ಯ ಬಂಡಿಪುರದಿAದ ರಾಜ್ಯದ ವಿವಿಧ ನಗರಗಳ ಪ್ರತಿಷ್ಟಿತ ಹೋಟೆಲ್‌ಗಳಿಗೆ ಜಿಂಕೆ ಮಾಂಸ ರವಾನೆಯಾಗುತ್ತಿದೆ ಎನ್ನಲಾಗಿದ್ದು,ಬಂಧಿತರಿAದ ಒಂಬತ್ತು ನಾಡ ಬಂದೂಕು, ನೂರಾರು ಮದ್ದು ಗುಂಡುಗಳು, ಬೇಟೆಗೆ ಉಪಯೋಗಿಸುವ ಪರಿಕರಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.
ಈ ನಡುವೆ ಬಂಧಿತರ ವಿರುದ್ದ ಪ್ರಕರಣ ದಾಖಲಿಸಿ ಜೈಲಿಗಟ್ಟಿರುವ ಅರಣ್ಯ ಇಲಾಖೆ ಬಂಧಿತರು ನೀಡಿದ ಸುಳಿವಿನ ಮೇರೆಗೆ ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳಿಗೆ ಬಲೆ ಬೀಸಿದೆ.
ಜೊತೆಗೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮಾಂಸ ದಂಧೆ ನಿರಂತರವಾಗಿ ನಡೆಯುತ್ತಿದೆ ಎಂಬುದನ್ನ ಸ್ವತಃ ಕಳ್ಳ ಬೇಟೆಗಾರರು ಒಪ್ಪಿಕೊಂಡಿದ್ದಾರೆAದು ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ತಿಳಿಸಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment