ಕಾಂಗ್ರೆಸ್ ಮುಖಂಡನಿಗೆ ಸೇರಿದ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ರಮ ಪಡಿತರ ದಾಸ್ತಾನು..

ದೇವದುರ್ಗ(ರಾಯಚೂರು):ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿರುವ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೀಮನ ಗೌಡ ನಾಗಡದಿನ್ನಿಗೆ ಸೇರಿದ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ರಮವಾಗಿ ಪಡಿತರ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಸುಮಾರು ವರ್ಷದಿಂದ ಕಟ್ಟಡ ತಕರಾರು ಇರುವ ಹಿನ್ನೆಲೆಯಲ್ಲಿ ಭೀಮನ ಗೌಡ ನಾಗಡದಿನ್ನಿ ತಮ್ಮ ನ್ಯಾಯಬೆಲೆ ಅಂಗಡಿಯನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿದ್ದಾರೆ.ಕಳೆದ ೨ ವರ್ಷದಿಂದ ಕಟ್ಟಡ ಮಾಲಿಕರು ಮತ್ತು ನ್ಯಾಯ ಬೆಲೆ ಅಂಗಡಿಯ ಮಾಲೀಕರು ವಾಜ್ಯ ಇರುವ ಹಿನ್ನಲೆಯಲ್ಲಿ ಇಬ್ಬರು ಅಂಗಡಿಗೆ ಕೀಲಿ ಹಾಕಿದ್ದಾರೆ,
ಹೀಗಾಗಿ ದಾಸ್ತಾನು ೧೪೦ ಪಡಿತರ ಚೀಟಿದಾರರಿಗೆ ಸಂಬAಧಿಸಿದ್ದು ಎಂದು ತನಿಖೆ ವೇಳೆ ತಿಳಿದು ಬಂದಿದೆ.ಜೊತೆಗೆ ಇಲಾಖೆ ಗಮನಕ್ಕೆ ತರದೇ ಪಡಿತರ ಚೀಟಿದಾರರನ್ನು ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ತಹಶೀಲ್ದಾರ್ ಮಧುರಾಜ್ ಯಾಳಗಿ ನೇತೃತ್ವದ ಅಧಿಕಾರಿಗಳ ತಂಡ ತನಿಖೆ ಕೈಗೊಂಡು
೨೦ ಕ್ವಿಂಟಲ್ ಅಕ್ಕಿ, ೧೪೦ ಲೀಟರ್ ಒಳ್ಳೆಣ್ಣೆ, ೬೨೫ ಉಪ್ಪಿನ ಚಿಲಗಳನ್ನು, ಜಪ್ತಿ ಮಾಡಿದೆ.
ಜೊತೆಗೆ ಪಡಿತರ ಧಾನ್ಯಗಳನ್ನು ಬಳಕೆ ಮಾಡದಂತೆ ಅಕ್ರಮವಾಗಿ ದಾಸ್ತಾನು ಮಾಡಿದಲ್ಲದೇ ಅಂಗಡಿ ಮಾಲೀಕರು ಪಡಿತರ ಗ್ರಾಹಕರಿಗೆ ವಂಚನೆ ಮಾಡಿದ್ದಾರೆನ್ನಲಾಗಿದೆ,
ಹೀಗಾಗಿ ಕರ್ನಾಟಕ ಅವಶ್ಯಕ ವಸ್ತುಗಳ ಲೈಸೆನ್ಸ್ ಆದೇಶ ೨೦೧೬ರ ಷರತ್ತು ೨ ಮತ್ತು ೪ರ ಸ್ಪಷ್ಟ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಪ್ರಾಧಿಕಾರ ಪತ್ರವನ್ನು ರದ್ದುಪಡಿಸಲು ತಹಶೀಲ್ದಾರ್ ಮಧುರಾಜ್ ಯಾಳಗಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment