ಕೊರೊನಾ ವೈಸರ್ ತಡೆಗಟ್ಟಲು ಸರ್ಕಾರದಿಂದ ಸರ್ವ ಪ್ರಯತ್ನ

ಕೆಆರ್ ಪುರ(ಬೆಂ.ನಗರ):ಕೊರೊನಾ ಎಂಬ ಮಹಾಮಾರಿಯಿಂದ ಉಂಟಾಗಿರುವ ಲಾಕ್ ಡೌನ್ ಸಮಸ್ಯೆಗೆ ಬಡವರು ಕೂಲಿ ಕಾರ್ಮಿಕರು ತೊಂದರೆಗೆ ಸಿಲುಕಿ ಒಂದು ಹೊತ್ತು ಊಟಕ್ಕೂ ಪರದಾಡುವಂತಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.
ಕ್ಷೇತ್ರದ ಕ್ಯಾಲಸನಹಳ್ಳಿ, ಕೊತ್ತುನೂರು, ನಗರೇಶ್ವರ ನಗೇನಹಳ್ಳಿ, ನಾರಾಯಣಪುರ, ಗೆದ್ದಲಹಳ್ಳಿಯಲ್ಲಿ ಸಾವಿರಾರು ನಿರ್ಗತಿಕರಿಗೆ ತರಕಾರಿಗಳನ್ನು ವಿತರಿಸಿ ಮಾತನಾಡಿದ ಅವರು, ಬಡವರ,ಕೂಲಿ ಕಾರ್ಮಿಕರ ನೆರವಿಗೆ ಸಂಘ ಸಂಸ್ಥೆಗಳು ಆಸರೆಯಾಗಬೇಕು ಎಂದರು.
ದೇಶವೇ ಲಾಕ್ ಡೌನ್ ಅಗಿರುವ ಸಮಯದಲ್ಲಿ ಬಡವರಿಗೆ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ಇರುವ ಸಂದರ್ಭದಲ್ಲಿ ಯಾರು ಹಸಿವಿನಿಂದ ಬಳಲಬಾರದು ಎನ್ನುವ ದೃಷ್ಟಿಯಿಂದ ಬಡಜನರಿಗೆ ಅಗತ್ಯ ಪ್ರಮಾಣದ ದಿನಬಳಕೆಯ ವಸ್ತುಗಳಾದ ಅಕ್ಕಿ,ಗೋಧಿ, ಹಿಟ್ಟು, ಸಕ್ಕರೆ, ಎಣ್ಣೆ, ತರಕಾರಿ ಬೆಳೆಗಳು ಮುಂತಾದ ಹಲವಾರು ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಕೊರೊನಾ ವೈಸರ್ ತಡೆಗಟ್ಟಲು ಸರ್ಕಾರ ಸರ್ವ ರೀತಿಯ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಮನೆಯಲ್ಲಿಯೇ ಇದ್ದು,ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿದಾನಂದಮೂರ್ತಿ, ಸಚ್ಚಿದಾನಂದಮೂರ್ತಿ, ಬಾಕ್ಸರ್ ನಾಗರಾಜ್, ನಾಗೇನಹಳ್ಳಿ ಲೋಕೇಶ್, ಕಿರಣ್ ರೆಡ್ಡಿ ಮುಂತಾದವರು ಇದ್ದರು.

ಪರಿಸರ ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆಆರ್‌ಪುರ(ಬೆಂ.ನಗರ)

Please follow and like us:

Related posts

Leave a Comment