ಎಣ್ಣೆಗಾಗಿ ಕರ್ನಾಟಕಕ್ಕೆ ಬಂದ ತಮಿಳಿಗರು..!

ಆನೇಕಲ್(ಬೆಂ.ನಗರ): ಇವತ್ತೇಲ್ಲಾ ಎಲ್ಲಾ ವೈನ್ ಸ್ಟೋರ್‌ಗಳ ಮುಂದೆ ಕುಡುಕರ ಜಾತ್ರೆ ಜೋರಾಗಿದ್ದು,ಮದ್ಯ ಖರೀದಿಗೆ ಬೆಳಗಿನಿಂದಲೇ ಕುಡುಕರು ಸಾಲಲ್ಲಿ ನಿಂತಿದ್ದು ಎಲ್ಲೆಡೆ ಸಾಮಾನ್ಯವಾಗಿತ್ತಯ.
ಕಳೆದ ಒಂದೂವರೆ ತಿಂಗಳಿAದ ಮದ್ಯ ಸಿಗದೆ ಕಂಗಾಲಾಗಿರೋ ಕುಡುಕರಿಗೆ ಇಂದು ಬೆಳಿಗ್ಗೆ ವೈನ್‌ಸ್ಟೋರ್ ಓಪನ್ ಆಗಿದ್ದಂತೆ ಯುದ್ಧ ಗೆದ್ದಷ್ಟು ಸಂತಸವಾಗಿತ್ತು.ವಿಶೇಷವೆAದರೆ ಕುಡುಕರು ತಮ್ಮ ಗುರುತು ಸಿಗದಂತೆ ಮಾಸ್ಕ್ ಧರಿಸಿ ಸರತಿ ಸಾಲಲ್ಲಿ ನಿಂತಿದ್ದ ದೃಶ್ಯ ಕೂಡ ಕಂಡ ಬಂತು.
ಇದೇ ವೇಳೆ ತಮಿಳುನಾಡಿನಲ್ಲಿ ಮದ್ಯ ಮಾರಾಟಕ್ಕೆ ತಡೆ ನೀಡಲಾಗಿದೆ.ಹೀಗಾಗಿ ಕರ್ನಾಟಕದ ಗಡಿಯಾದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಗಡಿಗೆ ಎಂಆರ್‌ಪಿ ವೈನ್ಸ್ಗಳಿಗೆ ತಮಿಳು ನಾಡಿನ ಕುಡುಕರು ಆಗಮಿಸಿ ಮದ್ಯ ತೆಗೆದುಕೊಂಡು ಹೋಗುತ್ತಿದ್ದಾರೆ.
ಒಟ್ನಲ್ಲಿ ಕುಡುಕರ ಮುಖದಲ್ಲಿ ಸಂತಸದ ಹೊನ್ನಲು ಮೂಡಿದ್ದು, ಎಂಆರ್‌ಪಿ ವೈನ್ಸ್ಗಳ ಮುಂದೆ ಜನ ಜಾತ್ರೆ ಮಾತ್ರ ಕಡಿಮೆಯಾಗಿಲ್ಲ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment