ರಾಜಧಾನಿಯಿಂದ ಹುಬ್ಬಳ್ಳಿಗೆ ಬಂದ ಕಾರ್ಮಿಕರು..

ಹುಬ್ಬಳ್ಳಿ:ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಸಿಲುಕಿಕೊಂಡಿದ್ದ ಜನರನ್ನು ಸಾರಿಗೆ ಸಂಸ್ಥೆಗಳ ಬಸ್ ಗಳ ಮೂಲಕ ಸೋಮವಾರ ಬೆಳಗಿನ ಜಾವದವರೆಗೆ ನಗರಕ್ಕೆ ಕರೆತರಲಾಯಿತು.
ಬೆಂಗಳೂರಿನಿAದ ನಗರಕ್ಕೆ ಒಟ್ಟು ೨೮ ಬಸ್ ಗಳಲ್ಲಿ ಸುಮಾರು ೬೧೮ ಜನರನ್ನು ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣಕ್ಕೆ ಬೆಳಗಿನ ಜಾವ ೫.೩೦ ರವರೆಗೆ ಕರೆತರಲಾಗಿದೆ. ಇನ್ನೂ ಇದಕ್ಕೂ ಮುನ್ನ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಮೊದಲ ಬಸ್ ರವಿವಾರ ರಾತ್ರಿ ೯.೫೦ ಕ್ಕೆ ಆಗಮಿಸಿತು.
ಇನ್ನೂ ಬೆಂಗಳೂರಿನಿAದ ಬಂದ ಪ್ರತಿಯೊಬ್ಬರನ್ನು ಪಿಪಿಇ ಕಿಟ್ ಧರಿಸಿದ್ದ ವೈದ್ಯಕೀಯ ಸಿಬ್ಬಂದಿ ಬಸ್ ನಿಲ್ದಾಣದಲ್ಲಿಯೇ ತಪಾಸಣೆ ಮಾಡಿ, ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿದರು. ಪ್ರತಿಯೊಬ್ಬರ ಸಂಪೂರ್ಣ ಮಾಹಿತಿ ಪಡೆದು ಹೋಮ್ ಕ್ವಾರಂಟೈನ್ ಸೀಲ್ ಹಾಕಲಾಯಿತು.ನಂತರ ಹೋಮ್ ಕ್ವಾರಂಟೈನ್ ಮುಗಿಯುವವರೆಗೂ ಹೊರಗಡೆ ಸಂಚಾರ ಮಾಡದಂತೆ ಸೂಚಿಸಲಾಯಿತು.ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಕಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಇದೇ ವೇಳೆ ಜಿಲ್ಲಾಡಳಿತದ ವತಿಯಿಂದ ಪ್ರಯಾಣಿಕರಿಗೆ ಶುದ್ದ ಕುಡಿಯುವ ನೀರು,ಆಹಾರ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸ ಲಾಗಿತ್ತು.ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನೂ ಗದಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಕೆಲ ಜನರು ಮಾಹಿತಿ ಕೊರತೆಯಿಂದ ನಗರಕ್ಕೆ ಬಂದಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿ ಸದ್ಯಕ್ಕೆ ಇಲ್ಲೇ ಉಳಿಸಿಕೊಂಡಿದ್ದು, ಜಿಲ್ಲಾಡಳಿತ ನಿರ್ದೇಶನ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ಶಾಸಕ ಅರವಿಂದ ಬೆಲ್ಲದ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಗುರುದ್ವಾರ ಫೌಂಡೇಶನ್ ವತಿಯಿಂದ ಪ್ರಯಾಣಿಕರಿಗೆ ಆಹಾರ ಪೊಟ್ಟಣ ವಿತರಣೆ ಮಾಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಹಾಗೂ ವಲಸೆ ಕಾರ್ಮಿಕ ನೋಡೆಲ್ ಅಧಿಕಾರಿ ಪುರುಷೋತ್ತಮ, ನಗರ ತಹಶಿಲ್ದಾರರ ಶಶಿಧರ ಮಾಡ್ಯಾಳ, ಡಿಡಿಪಿಐ ಹಂಚಾಟೆ, ವಾಯುವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ, ಪಾಲಿಕೆ ವೈದ್ಯಾಧಿಕಾರಿ ಡಾ.ಪ್ರಭು ಬಿರಾದಾರ ಸೇರಿದಂತೆ ಗೋಕುಲ ಠಾಣೆ ಪೋಲಿಸರು ಇದ್ದರು.

ರಾಜು ಮುದ್ಗಾಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment