ಬೆಂಗಳೂರಿನಲ್ಲಿ ಕುಡಿತ ಮತ್ತಿನಲ್ಲಿ ಯುವಕನ ಬರ್ಬರ ಕೊಲೆ

ಕೆ.ಆರ್.ಪುರಂ(ಬೆಂ.ನಗರ): ಕುಡಿದ ಅಮಲಿನಲ್ಲಿ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಬೆಂಗಳೂರು ಪೂರ್ವ ತಾಲೂಕು ಹಂಚರಹಳ್ಳಿ ಚರ್ಚ್ ಬಳಿ ನಡೆದಿದೆ.
ವಿನಯ್(೩೨)ಕೊಲೆಯಾದ ವ್ಯಕ್ತಿಯಾಗಿದ್ದಾನೆ.ಅಂದ ಹಾಗೇ ಹಂಚರಹಳ್ಳಿ ಚರ್ಚ್ ಬಳಿ ಕುಡಿಯುತ್ತಾ ಇಸ್ಪೀಟ್ ಆಡುವಾಗ ವಿನಯ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸದ್ಯ ದೇಹದ ನಾನಾ ಕಡೆ ಕೊಚ್ಚಿರುವ ಕಾರಣ ಅತೀವ ರಕ್ತಸ್ರಾವದಿಂದ ವಿನಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನು ಮದ್ಯಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನವೇ ಸಣ್ಣದಾಗಿ ಗಲಾಟೆ ನಡೆದಿತ್ತು. ಆದರೆ, ನಿನ್ನೆ ಕಂಠ ಪೂರ್ತಿ ಕುಡಿದ ನಂತರ ಜಗಳ ಮಾಡಿ, ಕೊಲೆಯಲ್ಲಿ ಅಂತ್ಯ ಕಂಡಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಇದೇ ವೇಳೆ ಅದೇ ಊರಿನ ರೌಡಿ ಶೀಟರ್ ಪ್ರಶಾಂತ್, ಮಧು, ಕಟ್ಟುಗೊಲ್ಲಹಳ್ಳಿಯ ರೌಡಿ ಶೀಟರ್ ರಾಜ್ ಕುಮಾರ್ ಎಂಬುವವರಿAದ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಹೀಗಾಗಿ ಆವಲಹಳ್ಳಿ ಪೊಲೀಸರು ಪ್ರಕರಣ ಸಂಬAಧ ದೂರು ದಾಖಲು ಮಾಡಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪರಿಸರ ಮಂಜುನಾಥ್ ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆಂ.ನಗರ)

Please follow and like us:

Related posts

Leave a Comment