ಮತ್ತೆ ಖಾಕಿ ರಿವಾಲ್ವರ್ ಸದ್ದು..ಕೊಲೆ ಆರೋಪಿಗೆ ಗುಂಡೇಟು..

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮತ್ತೆ ಖಾಕಿ ರಿವಾಲ್ವರ್ ಸದ್ದು ಮಾಡಿದ್ದು, ಬೆಳ್ಳಂಬೆಳಗ್ಗೆ ಕೊಲೆ ಆರೋಪಿ ಮೇಲೆ ಪೊಲೀಸರು ಶೂಟೌಟ್ ನಡೆಸಿದ್ದಾರೆ.
ಕೊಲೆ ಆರೋಪಿ ಪ್ರಭು ಗುಂಡೇಟು ತಿಂದ ಕೊಲೆ ಆರೋಪಿ.ಈತ ಮೇ ೪ರಂದು ಬೆಂಗಳೂರಿನ ಸಿಡೇದಹಳ್ಳಿಯಲ್ಲಿ ಹಾಡಹಗಲೇ ನಡುರಸ್ತೆಯಲ್ಲೇ ರೌಡಿಶೀಟರ್ ಕರಣ್ ಸಿಂಗ್ ಎಂಬಾತನನ್ನು ಹತ್ಯೆ ಮಾಡಿದ್ದ ಎನ್ನಲಾಗಿದೆ.
ಇದರ ಹಿನ್ನೆಲೆಯಲ್ಲಿ ಆರೋಪಿ ಇರುವ ಸ್ಥಳದ ಖಚಿತ ಮಾಹಿತಿ ಪಡೆದ ಬಾಗಲಗುಂಟೆ ಠಾಣಾ ಪಿಎಸ್‌ಐ ಶ್ರೀಕಂಠೇಗೌಡ ಮತ್ತವರ ತಂಡ ಬಂಧಿಸಲು ತೆರಳಿತ್ತು.ಆದರೆ ಆರೋಪಿ, ಕಾನ್ಸ್ಟೇಬಲ್ ಹಾಗೂ ಪಿಎಸ್‌ಐ ಶ್ರೀಕಂಠೇಗೌಡ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.
ತಕ್ಷಣ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಪಿಎಸ್‌ಐ ಸೂಚನೆ ನೀಡಿದ್ದಾರೆ. ಈ ವೇಳೆ ಆರೋಪಿ ಕೇಳದ ಕಾರಣ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಕಾನ್ಸ್ಟೇಬಲ್‌ಗೂ ಗಾಯಗಳಾಗಿವೆ.ಬಳಿಕ ಆರೋಪಿ ಹಾಗೂ ಗಾಯಾಳು ಕಾನ್ಸ್ಟೇಬಲ್‌ನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬ0ಧಿಸಿದ0ತೆ ಸದ್ಯ ತನಿಖೆ ವೇಳೆ ಶೂಟೌಟ್‌ಗೆ ಒಳಗಾದ ಆರೋಪಿ ಕೆಲ ವಿಚಾರ ಬಾಯಿ ಬಿಟ್ಟಿದ್ದಾನೆ.
ಮೇ ೪ರಂದು ಬಾಗಲಗುಂಟೆ ವ್ಯಾಪ್ತಿಯಲ್ಲಿ ಕೊಲೆಯಾದ ಕರಣ್ ಸಿಂಗ್, ಹಾಗೂ ಕರಣ್ ಸಿಂಗ್ ತಮ್ಮ ಅರ್ಜುನ್ ಸಿಂಗ್ ಪಬ್ಜಿ ಗೇಮ್ ನಲ್ಲಿ ನಿರತರಾಗಿದ್ದರು.ಈ ವೇಳೆ, ತಾನು ಕರಣ್ ಸಿಂಗ್ ಜೊತೆ ಬಾಗಲಗುಂಟೆ ವ್ಯಾಪ್ತಿಯಲ್ಲಿ ರೌಡಿಸಂ,ಹವಾ ಮೇಂಟೇನ್ ಮಾಡಬೇಕೆಂದು ಮಾತಾಡ್ತಿದ್ದೆ.ಆದರೆ ಅದನ್ನು ಕೇಳಿಸಿಕೊಳ್ಳದೇ ಕರಣ್‌ಸಿಂಗ್ ಹಾಗೂ ಅವನ ತಮ್ಮ ಅರ್ಜುನ್ ಸಿಂಗ್ ಪಬ್ಜಿ ಗೇಮ್‌ನಲ್ಲಿನಿರತರಾಗಿರುವುದನ್ನ ಕಂಡು ಕೋಪದಿಂದ ಮೊದಲು ಅರ್ಜುನ್‌ಸಿಂಗ್‌ಗೆ ಹೊಡೆದೆ.ನಂತ್ರ ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಕರಣ್ ಸಿಂಗ್‌ನನ್ನು ಚುಚ್ಚಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಇನ್ನು ಆರೋಪಿ ಪ್ರಭು ಮೇಲೆ ಎರಡು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈಗಾಗಲೇ ಆರೋಪಿ ಮೇಲೆ ಕೊಲೆಯತ್ನ ,ಡಕಾಯಿತಿ ,ರೇಪ್ ಸೇರಿದಂತೆ ಹಲವು ಪ್ರಕರಣಗಳಿವೆ.ಅಲ್ಲದೆ, ೨೦೧೭ರಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ಕೊಲೆಯಾದ ಕರಣ್ ಸಿಂಗ್ ಹಾಗೂ ಕೊಲೆ ಆರೋಪಿ ಪ್ರಭು ಬಾಗಲಗುಂಟೆ ಪೊಲೀಸ್ ಠಾಣೆಗೆ ಬೇಕಾಗಿದ್ದ ರೌಡಿಶೀಟರ್‌ಗಳಾಗಿದ್ದಾರೆ.
ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment