ಧಾರವಾಡ: ಮಾವಿನಕಾಯಿ ಸಾಗಿಸಲು ಮುಂಬೈಗೆ ಹೋದವನು ಕೊರೊನಾ ಸೋಂಕಿನಾಗಿದ್ದ ಬೆನ್ನೆಲ್ಲೇ,ಇದೀಗ ಮಣಸಿನಕಾಯಿ ವ್ಯಾಪಾರಿಗೂ ಕೊರೊನಾ ವಕ್ಕರಿಸಿಕೊಂಡಿದೆ.
ಸದ್ಯ ಧಾರವಾಡದ ಕೊರೊನಾ ಪಾಸಿಟಿವ್(ಪಿ-೭೦೫)ಮೂಲತಃ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು,ಮೆಣಸಿನಕಾಯಿ ವ್ಯಾಪಾರದ ಜೊತೆಗೆ ಆಟೋ ಕೂಡ ನಡೆಸುತ್ತಿದ್ದ ಎನ್ನಲಾಗಿದೆ.
ಅಂದ ಹಾಗೇ ಧಾರವಾಡದ ಕೋಳಿಕೆರೆಯ ನಿವಾಸಿಯಾಗಿದ್ದ ಈತ ಲಾಕ್‌ಡೌನ್ ವೇಳೆ ಮದ್ಯ ಸಿಗದ ಕಾರಣಕ್ಕೆ ಅಸ್ವಸ್ಥನಾಗಿ ಕಳೆದ ೨೦ ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ.ಇನ್ನು ಕಿಮ್ಸ್ ಆಸ್ಪತ್ರೆಗೆ ಹೋಗುವ ಮುನ್ನ ಒಂದು ಖಾಸಗಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೂ ಭೇಟಿ ನೀಡಿದ್ದ ಎಂದು ತಿಳಿದು ಬಂದಿದೆ.
ಇದೇ ವೇಳೆ ಮೆಣಸಿನಕಾಯಿ ಖರೀದಿಸಿದವರಿಗೆ ಶುರುವಾಯ್ತು ಈಗ ಆತಂಕ ಶುರವಾಗಿದೆ.ಅಲ್ಲದೆ, ಈತನ ಸಂಪರ್ಕಕ್ಕೆ ಬಂದ ೨೮ ಜನರಿಗೆ ಕ್ವಾರೈಂಟನ್ ಮಾಡಲಾಗಿದ್ದು, ಮನೆಯವರು ಹಾಗೂ ಸುತ್ತಮುತ್ತಲಿನ ೨೮ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ.
ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ- ಧಾರವಾಡ