16 ಮಂದಿ ವಲಸೆ ಕಾರ್ಮಿಕರ ದುರ್ಮರಣ..

ಮುಂಬಯಿ:೩೬ ಕಿ.ಮೀ ದೂರ ನಡೆದು ಸುಸ್ತಾಗಿ ಕೊನೆಗೆ ರೈಲ್ವೆ ಹಳಿಯ ಮೇಲೆ ಮಲಗಿದ್ದ ೧೬ ಜನ ಕೂಲಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ ಎಲ್ಲರೂ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದ ಕೂಲಿ ಕಾರ್ಮಿಕರು ರೈಲ್ವೆ ಹಳಿಗಳಲ್ಲಿ ನಿದ್ರೆಗೆ ಜಾರಿದಾಗ ಈ ಘಟನೆ ಸಂಭವಿಸಿದೆ. ೧೪ ಜನರು ಸ್ಥಳದಲ್ಲಿಯೇ. ಒಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರು ಮಧ್ಯಪ್ರದೇಶದ ಉಮರಿಯಾ ಮತ್ತು ಶಹ್ದೋಲ್ ನಿವಾಸಿಗರು. ಮಹಾರಾಷ್ಟ್ರದ ಜಲ್ನಾದ ಎಸ್‌ಆರ್‌ಜಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾದಿಂದಾಗಿ ತಮ್ಮ ಊರುಗಳಿಗೆ ಹೊರಡಲು ಸಿದ್ಧವಾಗಿದ್ದರು. ಖಾಲಿ ಪೆಟ್ರೋಲಿಯಂ ಟ್ಯಾಂಕರ್ ರೈಲು ತೆಲಂಗಾಣದ ಚೆರ್ಲಪಲ್ಲಿಯಿಂದ ಮಹಾರಾಷ್ಟ್ರದ ಮನ್ಮಾದ್ ಬಳಿಯ ಪಾನಿವಾಡಿಗೆ ಹೋಗುತ್ತಿತ್ತು. ಆದರೆ ಬದ್ನಾಪುರ ನಿಲ್ದಾಣದಿಂದ ಮುಂದೆ ಹೋಗುತ್ತಿದ್ದಾಗ ಕೆಲವು ಜನರು ರೈಲ್ವೇ ಹಳಿಯ ಮೇಲೆ ಮಲಗಿರುವುದನ್ನು ನೋಡಿ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದನು. ಅಲ್ಲದೇ ಹಾರನ್ ಕೂಡ ಮಾಡಿದ್ದಾನೆ. ಅಷ್ಟರಲ್ಲಿ ರೈಲು ಅವರ ಮೇಲೆ ಹರಿದಿದೆ ಎಂದು ರೈಲ್ವೆ ಅಧಿಕಾರಿ ರಾಕೇಶ್ ತಿಳಿಸಿದ್ದಾರೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ರೂ. ೫ ಲಕ್ಷ ಪರಿಹಾರ ಘೋಷಿಸಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಮಹಾರಾಷ್ಟ್ರ

Please follow and like us:

Related posts

Leave a Comment