ನೀವು ಸಾಲ ಮಾಡಿದ್ದು ನೆನಪಿಲ್ವಾ ಕಾಂಗ್ರೆಸ್ಸಿಗರೇ..?

ಮೈಸೂರು: ಹಣಕಾಸು ವ್ಯವಸ್ಥೆಯನ್ನ ಹಾಳು ಮಾಡಿದವರೇ ಇವತ್ತು ಹಣಕಾಸಿನ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ಮಾಜಿ ಸಚಿವ ಅಡಗೂರು ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಹಣಕಾಸಿನ ಮೂಲ ಹಾಳು ಮಾಡಿದ್ದೆ ಕಾಂಗ್ರೆಸ್.ಜೊತೆಗೆ ಕಾಂಗ್ರೆಸ್ ಕಾಲದಲ್ಲಿ ೧ ಲಕ್ಷದ ೬೮ ಸಾವಿರ ಕೋಟಿ ಸಾಲ ಮಾಡಿದ್ರಿ.ಈಗ ಅದು ೪ ಲಕ್ಷ ಕೋಟಿಗೆ ಬಂದಿದೆ.ನಾವು ೩೧ ಸಾವಿರ ಕೋಟಿಯನ್ನ ಬರಿ ಬಡ್ಡಿ ಕಟ್ಟುತ್ತಿದ್ದೇವೆ.೫೫ ಸಾವಿರ ಕೋಟಿ ಸಂಬಳ ಹಾಗೂ ಪಿಂಚಣೆ ಬೇಕಾಗಿದೆ. ನೀವೇನೂ ಕಡೆದು ಕಟ್ಟೆ ಹಾಕಿದ್ದೀರಾ ಹೇಳಿ ಕಾಂಗ್ರೆಸ್‌ನವರೇ? ಎಂದು ಖಾರವಾಗಿ ಟೀಕಿಸಿದರು.
ಅಲ್ಲದೆ, ಈ ರಾಜ್ಯದ ಹಣಕಾಸು ಸ್ಥಿತಿಯನ್ನ ಹಾಳು ಮಾಡಿದ್ದು ಯಾರು?ರಾಜ್ಯದ ಬೊಕ್ಕಸದಲ್ಲಿ ದುಡ್ಡೆಲ್ಲಿದೆ?.ನೀವು ಏನ್ ಮಾಡಿ ಹೋದ್ರಿ ಗೊತ್ತಾ?ಎಂದು ಪ್ರಶ್ನಿಸಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಮೈಸೂರು

Please follow and like us:

Related posts

Leave a Comment