ಆರೋಗ್ಯ / HEALTH

ಬೆಂಗಳೂರಿನಲ್ಲಿ ಪ್ರಾಣವಾಯು ಯೋಜನೆಗೆ ಚಾಲನೆ

Published

on

ಬೆಂಗಳೂರು: ಕೋವಿಡ್-19 ಸಂಬ0ಧ ಬಿಬಿಎಂಪಿಯು “ಪ್ರಾಣವಾಯು” ಎಂಬ ಯೋಜನೆ ಜಾರಿ ತರಲಾಗುತ್ತಿದ್ದು,ಇಂದು ಪಾಲಿಕೆ ಕೇಂದ್ರ ಕಛೇರಿಯಲ್ಲಿ ಮೇಯರ್,ಆಯುಕ್ತರು ಯೋಜನೆಗೆ ಚಾಲನೆ ನೀಡಿದರು.
ಈ ವೇಳೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್,ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ವಿಶೇಷ ಆಯುಕ್ತರು(ಆರೋಗ್ಯ)ಡಾ.ರವಿಕುಮಾರ್ ಸುರಪುರ, ವಿಶೇಷ ಆಯುಕ್ತರು(ಘನತ್ಯಾಜ್ಯ)ಡಿ.ರಂದೀಪ್, ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ವಿಜೇಂದ್ರ, ಡಾ. ನಿರ್ಮಲಾ ಬುಗ್ಗಿ ಹಾಗೂ ಇತರೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು ಬಿಬಿಎಂಪಿ ವತಿಯಿಂದ ಪ್ರಾಣವಾಯು ಯೋಜನೆಗೆ ಇಂದು ಚಾಲನೆ ನೀಡಲಾಗಿದ್ದು, ಈ ಯೋಜನೆಯಡಿ ಒದಗಿಸಲಾದ ಪಲ್ಸ್ ಆಕ್ಸಿಮೀಟರ್ ಬಳಸಿ, ರೋಗಿಗಳ ಮೇಲೆ ನಿಗಾವಣೆಯ ಉಪಕ್ರಮವಹಿಸಲಾಗುತ್ತದೆ. ಜ್ವರ, ಕೆಮ್ಮು ಮತ್ತು ಇತರೆ ಸಾಂಕ್ರಾಮಿಕ ರೋಗಗಳಿಂದ ಸಮಸ್ಯೆ ಎದುರಿಸುತ್ತಿರುವವರನ್ನು ಗಮನಿಸಲು ಇದು ಸಹಾಯ ಮಾಡುತ್ತದೆ. ಪಾಲಿಕೆಯ ಎಲ್ಲ ಫೀವರ್ ಕೇಂದ್ರಗಳಲ್ಲಿ ಆಕ್ಸಿಮೀಟರ್ ಬಳಸಲಾಗುವುದು ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಇದಲ್ಲದೆ,ಆಕ್ಸಿಮೀಟರ್ ನಿಂದ, ರಕ್ತ ಮತ್ತು ಹೃದಯ ಬಡಿತದಲ್ಲಿ ಆಮ್ಲಜನಕದ ಶುದ್ಧತ ಅಳೆಯುವುದರಿಂದ, ತೀವ್ರವಾದ ಉಸಿರಾಟದ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಹಾಗೂ ಅಂತಹ ರೋಗಿಗಳು ಅಗತ್ಯ ಚಿಕಿತ್ಸೆ ಪಡೆಯಲು ನೆರವಾಗುತ್ತದೆ. ಇದು ಹಾಸಿಗೆ ಮತ್ತು ವೆಂಟಿಲೇಟರ್ ಮುಕ್ತವಾಗಿ ಕಾಯಿಲೆಯನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

 

Click to comment

Trending

Exit mobile version