ಆತ್ಮಹತ್ಯೆಗೆ ಶರಣಾದ ಕ್ಯಾಬ್ ಚಾಲಕ

ಕೊರಟಗೆರೆ(ತುಮಕೂರು):ಹಣಕಾಸಿನ ಸಮಸ್ಯೆಯಿಂದ ಧೃತಿಗೆಟ್ಟ ಯುವಕನೋರ್ವ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಮಾವತ್ತೂರು ಕೆರೆಯ ಸಮೀಪದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೋಡ್ಲಹಳ್ಳಿ ಗ್ರಾಮದ ನಂದೀಶಯ್ಯನ ಮಗನಾದ ಮಧು(೨೫) ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಯುವಕ.
ಬೆಂಗಳೂರು ನಗರದಲ್ಲಿ ಕಾರು ಚಾಲಕನಾಗಿದ್ದ ಮಧು, ಕೊರೊನಾ ಲಾಕ್ ಡೌನ್ ಹಿನ್ನಲೆ ಕಳೆದ ವಾರದ ಹಿಂದೆ ತನ್ನ ಸ್ವಗ್ರಾಮ ಕೋಡ್ಲಹಳ್ಳಿಗೆ ಬಂದಿದ್ದ. ಹಣಕಾಸಿನ ಸಮಸ್ಯೆಯಿಂದ ಮಾವತ್ತೂರು ಕೆರೆ ಸಮೀಪದ ಹುಣಸೆ ಮರಕ್ಕೆ ನೇಣು ಹಾಕಿಕೊಳ್ಳುವ ಮುನ್ನ ವಿಡಿಯೋ ಮಾಡಿ ತನ್ನ ಅಣ್ಣನಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಮೃತ ದೇಹವನ್ನು ಕೊರಟಗೆರೆ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಕೊರಟಗೆರೆ(ತುಮಕೂರು)

Please follow and like us:

Related posts

Leave a Comment