ಕೊರೊನಾ 3ನೇ ಹಂತದಲ್ಲಿದೆಯ0ತೆ, ಎಂಎಲ್‌ಸಿ ಅಪ್ಪಾಜಿಗೌಡ ಸ್ಫೋಟಕ ಮಾಹಿತಿ

ನಾಗಮಂಗಲ(ಮ0ಡ್ಯ):ಕೊರೊನಾ ಮಹಾಮಾರಿಯ ಅರ್ಭಟಕ್ಕೆ ತತ್ತರಿಸಿರುವ ಕಡುಬಡತನ ಎದುರಿಸುತ್ತಿರುವ ಕುಟುಂಬಗಳಿಗೆ ತಮ್ಮ ಶಕ್ತಾನುಸಾರ ಮಾಡುತ್ತಿರುವ ದಾನಿಗಳಿಗೆ ಪ್ರೋತ್ಸಾಹದ ಸಹಕಾರ ಅತ್ಯಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ ಅಭಿಪ್ರಾಯಪಟ್ಟಿದ್ದಾರೆ.
ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆಯಲ್ಲಿರುವ ನ್ಯಾಷನಲ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಮುತೀಬ್ ಉರ್ರಾ ರೆಹಮಾನ್ ಮತ್ತು ಶಾಲಾ ಆಡಳಿತ ಮಂಡಳಿಯ ಸಹಯೋಗದಲ್ಲಿ ೧ ಸಾವಿರ ಕಡು ಬಡವರಿಗೆ ಉಚಿತ ದಿನಸಿ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾದ ನಿಜ ಸ್ವರೂಪ ಈಗ ಪ್ರಾರಂಭವಾಗಿದೆ.ಇಲ್ಲಿಯವರೆಗೆ ನೋಡಿದ್ದು ಮತ್ತು ಕೇಳಿದ್ದು ಪ್ರಾಸ್ತವಿಕ ಪೀಠಿಕೆಯಷ್ಟೆ.ಸಮುದಾಯಕ್ಕೆ ತಗುಲುವ ಮೂಲಕ ಮೂರನೆ ಹಂತದಲ್ಲಿರುವ ಕೋವಿಡ್- ೧೯ ತಜ್ಞರ ಅಭಿಪ್ರಾಯದಂತೆ ಮುಂದಿನ ಎರಡು ತಿಂಗಳು ಉಗ್ರ ಸ್ವರೂಪ ಪಡೆಯಲಿದೆ ಎಂದರು.
ಅಲ್ಲದೆ,ಈ ನಿಟ್ಟಿನಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸಾಮಾಜಿಕ ಅಂತರವೊAದೇ ಮದ್ದು.ಇದೊಂದು ವಿಧದ ಸಬಲರ ಉಳಿವು-ದುರ್ಬಲರ ಅಳಿವಿನ ಸಂಕಲ್ಪ ಹೊತ್ತು ಬಂದಿರುವ ಮಹಾಮಾರಿ. ಆರೋಗ್ಯಕ್ಕೆ ಅತ್ಯವಶ್ಯಕವಾದ ರೋಗ ನಿರೋಧಕ ಶಕ್ತಿ ಹೆಚ್ಚಿಸವ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡಬೇಕಿದೆ.
ಅಲ್ಲದೆ,ಕಡು ಬಡತನ ಎದುರಿಸುತ್ತಿರುವ ಕುಟುಂಬಗಳಗೆ ಮಾನಸಿಕ ಆರೋಗ್ಯ ಸದೃಡಗೊಳಿಸುವ ಪ್ರಯತ್ನ ಆಗಬೇಕಿದೆ. ಜಾತಿವಾರು ಅಥವ ವೃತ್ತಿವಾರು ನೀಡುವ ಸಹಕಾರಕ್ಕಿಂತ ಆರ್ಥಿಕ ಸ್ಥಿತಿ-ಗತಿಯ ಆಧಾರದಲ್ಲಿ ಸರ್ಕಾರಗಳು ಸಹಕಾರ ನೀಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಜಾತ್ಯಾತೀತವಾಗಿ ದುರ್ಬಲ ಕುಟುಂಬಗಳಿಗೆ ಸಾಂಕೇತಿಕವಾಗಿ ದಿನಸಿ ಕಿಟ್ ವಿತರಿಸಲಾಯಿತು.ಶಾಲೆಯ ವ್ಯವಸ್ಥಾಪಕ ಜಾಕೀರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Please follow and like us:

Related posts

Leave a Comment