ತುಮಕೂರಿನಲ್ಲಿ ಸೀಲ್ ಡೌನ್ ಉಲ್ಲಂಘಿಸಿ ಬೀದಿಗೆ ಬಂದ ಮಹಿಳೆಯರು

ತುಮಕೂರು:ಸೀಲ್ ಡೌನ್ ಆಗಿರುವ ನಗರದ ಪೂರ್ ಹೌಸ್ ಕಾಲೋನಿಯ ಮಹಿಳೆಯರು ಸೀಲ್ ಡೌನ್ ಆದೇಶ ಉಲ್ಲಂಘಿಸಿರುವ ಘಟನೆ ನಡೆದಿದೆ.
ಅಂದ ಹಾಗೇ ಬಡಾವಣೆಯ ಮಸೀದಿಯಲ್ಲಿ ತಂಗಿದ್ದ ಗುಜರಾತ್ ಮೂಲದ ಧರ್ಮ ಪ್ರಚಾರಕನೊಬ್ಬನಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಪೂರ್ ಹೌಸ್ ಕಾಲೋನಿಯನ್ನು ಸೀಲ್ ಡೌನ್ ಮಾಡಲಾಗಿದೆ. ಆದರೆ, ನಿನ್ನೆ ಸಂಜೆ ಏಕಾಏಕಿ ನೂರಾರು ಮಹಿಳೆಯರು ಮನೆಯಿಂದ ಹೊರಗೆ ಬಂದಿದ್ದು, ಜಿಲ್ಲಾಡಳಿತದ ಆದೇಶವನ್ನು ಗಾಳಿಗೆ ತೂರಿದ್ದಾರೆ.
ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗುಂಪುಗೂಡಿದ್ದಾರೆ. ಸೀಲ್ ಡೌನ್ ಉಲ್ಲಂಘಿಸಿ ಬಡಾವಣೆಯಿಂದ ಹೊರಗೆ ತೆರಳಲು ಹೊರಟಿದ್ದ ನೂರಾರು ಮಹಿಳೆಯರನ್ನು ತಿಲಕ್ ಪಾರ್ಕ್ ಠಾಣೆಯ , ಸಬ್ ಇನ್ಸ್ಪೆಕ್ಟರ್ ನವೀನ್, ತಮ್ಮ ಸಮಯ ಪ್ರಜ್ಞೆಯಿಂದ ತಡೆದಿದ್ದು, ಮಹಿಳೆಯರ ಮನವೊಲಿಸಿ ಅವರನ್ನೆಲ್ಲ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ನೂರಾರು ಮಹಿಳೆಯರನ್ನು ಪ್ರಚೋದಿಸಿ, ಅವರು ಬೀದಿಯಲ್ಲಿ ಗುಂಪು ಸೇರಿ, ಜಿಲ್ಲಾಡಳಿತದ ಆದೇಶ ಉಲ್ಲಂಘಿಸುವAತೆ ಮಾಡುವ ಪಿತೂರಿ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಕಾಡಿದೆ. ಪೊಲೀಸರು ಸ್ವಲ್ಪವೇ ಯಾಮಾರಿದ್ದರೂ ಪೂರ್ ಹೌಸ್ ಕಾಲೋನಿಯಲ್ಲಿ ಪಾದರಾಯನಪುರದ ಗಲಭೆಯಂತಹ ಘಟನೆ ನಡೆಯುವ ಸಾಧ್ಯತೆ ಇತ್ತು.
ಆದರೆ ಪೊಲೀಸರ ಚಾಕಚಕ್ಯತೆಯಿಂದ ದೊಡ್ಡ ಅವಘಡವೊಂದು ತಪ್ಪಿದೆ. ಅಮಾಯಕ ಮಹಿಳೆಯರನ್ನು ಪ್ರಚೋದಿಸಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment