ಜುಲೈ 30-31ಕ್ಕೆ ಸಿಇಟಿ ಪರೀಕ್ಷೆ,ಸದ್ಯದಲ್ಲೇ ಪಿಯುಸಿ ಇಂಗ್ಲೀಷ್ ಪರೀಕ್ಷೆ

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಸತತವಾಗಿ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಮತ್ತು ಸಿಇಟಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ,ಆದರೀಗ ಜುಲೈ ೩೦ ಮತ್ತು ೩೧ರಂದು ಸಿಇಟಿ ಪರೀಕ್ಷೆ ನಡೆಸಲಾಗುವುದು ಹಾಗೂ ಪಿಯುಸಿ ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-೧೯ ತಡೆಗಟ್ಟಲು ಲಾಕ್ ಡೌನ್ ಜಾರಿಯಾಗಿದ್ದರಿಂದ ಸಿಇಟಿ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ,ಜುಲೈ೩೦ ಮತ್ತು ೩೧ ರಂದು ಸಿಇಟಿ ಪರೀಕ್ಷೆ ನೆಡೆಸಲು ತೀರ್ಮಾನಿಸಲಾಗಿದೆ ಎಂದರು.
ಇನ್ನು ಪಿಯುಸಿ ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು,ಸಿಇಟಿ ಪರೀಕ್ಷೆಗಳು ಆನ್ ಲೈನ್‌ನಲ್ಲಿ ಇರುವದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಈ ಬಾರಿಯ ಶೈಕ್ಷಣಿಕ ವರ್ಷ ಸೆಪ್ಟಂಬರ್ ನಿಂದ ಆರಂಭವಾಗಲಿದೆ.ಪದವಿ ಶಿಕ್ಷಣದಲ್ಲಿ ಬಾಕಿಯಿರುವ ಪಠ್ಯವನ್ನು ಮೇ ಅಂತ್ಯದೊಳಗೆ ಆನ್‌ಲೈನ್ ಮುಖಾಂತರ ಪೂರ್ತಿ ಮಾಡಲು ತಿಳಿಸಲಾಗಿದೆ.ಸೆಪ್ಟಂಬರ್‌ನಲ್ಲಿ ಡಿಗ್ರಿ ಕಾಲೇಜ್ ಆರಂಭವಾಗುವ ಸೂಚನೆಯನ್ನು ನೀಡಿದರು. ರಾಜ್ಯದಲ್ಲಿರುವ ೮೦೦೦ ಮೆಡಿಕಲ್ ಮತ್ತು ೬೨,೦೦ ಇಂಜಿನಿಯರಿAಗ್ ಸೀಟ್‌ಗಳಿಗಾಗಿ ಸಿಇಟಿ ಪರೀಕ್ಷೆ ನಡೆಯಲಿದೆ ಎಂದರು.
ಇದಲ್ಲದೆ, ಈ ಬಾರಿಯ ಶೈಕ್ಷಣಿಕ ವರ್ಷ ಸೆಪ್ಟಂಬರ್ ನಿಂದ ಆರಂಭವಾಗಲಿದೆ.ಪದವಿ ಶಿಕ್ಷಣ ದಲ್ಲಿ ಬಾಕಿಯಿರುವ ಪಠ್ಯವನ್ನು
ಮೇ ಅಂತ್ಯದೊಳಗೆ ಆನ್‌ಲೈನ್ ಮುಖಾಂತರ ಪೂರ್ತಿ ಮಾಡಲು ತಿಳಿಸಲಾಗಿದೆ, ಸೆಪ್ಟಂಬರ್‌ನಲ್ಲಿ ಡಿಗ್ರಿ ಕಾಲೇಜ್ ಆರಂಭವಾಗುವ ಸೂಚನೆಯನ್ನು ನೀಡಿದರು. ರಾಜ್ಯದಲ್ಲಿರುವ ೮೦೦೦ ಮೆಡಿಕಲ್ ಮತ್ತು ೬೨,೦೦ ಇಂಜಿನಿಯರಿAಗ್ ಸೀಟ್‌ಗಳಿಗಾಗಿ ಸಿಇಟಿ ಪರೀಕ್ಷೆ ನಡೆಯಲಿದೆ ಎಂದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment