ನೂರಾರು ಸಮಸ್ಯೆಗಳಿಗೆ ಸಿಲುಕಿದ ರಾಜ್ಯದ ಜನರು..

ಕೆ.ಆರ್.ಪುರಂ(ಬೆ0.ನಗರ):ಬಡವರ ಸೇವೆಯಲ್ಲಿ ತಾರತಮ್ಯ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ೧೫೦೦ ಸಾವಿರ ಬಡವರಿಗೆ, ಕೂಲಿಕಾರ್ಮಿಕರಿಗೆ ರೇಷನ್ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು,ಕೊರೊನಾದಿಂದಾಗಿ ರಾಜ್ಯದ ಜನರು ನೂರಾರು ಸಮಸ್ಯೆಗಳಿಗೆ ಸಿಲುಕಿದ್ದಾರೆ.ಅದರಲ್ಲೂ ದಿನ ನಿತ್ಯದ ಬಳಕೆ ವಸ್ತುಗಳಿಗೆ,ಆಹಾರ, ಮುಂತಾದ ಅಗತ್ಯ ದಿನಸಿಗಳನ್ನು ನೀಡಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಸಹಕಾರಿಯಾಗಬೇಕು. ಬಡವರ ಸೇವೆಯಲ್ಲಿ ತಾರತಮ್ಯ ಬೇಡ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣ ಸ್ವಾಮಿ,ಬಿಬಿಎಂಪಿ ಪಾಲಿಕೆ ಸದಸ್ಯ ಉದಯಕುಮಾರ್, ಬಿದರಹಳ್ಳಿ ಗ್ರಾಮ ಪಂಚಾಯತಿ, ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ರಾಜೇಶ್, ಪಂಚಾಯತಿ ಸದಸ್ಯ ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.

ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆ0.ನಗರ)

Please follow and like us:

Related posts

Leave a Comment