ಜಾರ್ಖಂಡ್ ವಲಸೆ ಕಾರ್ಮಿಕರ ನೆರವಿಗೆ ಬಂದ ಬಿಜೆಪಿ ಸಂಸದೆ

ಆನೇಕಲ್(ಬೆಂ.ನಗರ):ಕಳೆದ ರಾತ್ರಿ ಹೆಬ್ಬಗೋಡಿಯಲ್ಲಿ ಜಾರ್ಖಂಡ್ ಮೂಲದ ೧೪ ಮಂದಿ ವಲಸೆ ಕಾರ್ಮಿಕರ ಬೀದಿಗೆ ಬಿದ್ದ ವಿಷಯಕ್ಕೆ ಸಂಬ0ಧಿಸಿದ0ತೆ ಸಂಸದೆ ಶೋಭಾ ಕರಂದ್ಲಾಜೆ ಖುದ್ದು ಹಾಜರಾಗಿ ತಕ್ಷಣ ಸ್ಪಂದಿಸಿದ್ದಾರೆ.
ಹೆಬ್ಬಗೋಡಿ ಮೇಲ್ಸೇತುವೆ ಕೆಳಗಡೆ ನಿಂತು ತಮ್ಮ ಜಾರ್ಖಂಡ್ ಸರ್ಕಾರಕ್ಕೆ ಮನವಿ ಮಾಡಿಕೊಂಡ ಕಾರ್ಮಿಕರ ಅಳಲಿಗೆ ಅಲ್ಲಿನ ಮುಖ್ಯಮಂತ್ರಿ ಹೇಮಂತ್ ಸಿರೇನ್ ಕರ್ನಾಟಕ ಸರ್ಕಾರದ ತಮನ ಸೆಳೆದಿದ್ದರು.
ಕೂಡಲೇ ಎಚ್ಚೆತ್ತ ಮುಖ್ಯಮಂತ್ರಿ ಕಚೇರಿಯು ಸಂಸದೆ ಶೋಭಾ ಕರಂದ್ಲಾಜೆ ಮೂಲಕ ವಲಸೆ ಕಾರ್ಮಿಕರ ಮನವಿಗೆ ಆಸರೆಯಾಗಿದೆ.
ಇನ್ನು ಹೆಬ್ಬಗೋಡಿ ಠಾಣೆಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ ವೇಳೆ ನಿರಾಶ್ರಿತರನ್ನು ಬಾಡಿಗೆ ಮನೆಯಿಂದ ಮಾಲೀಕ ಹೊರಗಟ್ಟಿ ಹಿಂಸಿಸಿದ್ದ ಘಟನೆ ಬೆಳಕಿಗೆ ಬಂದಿದೆ.
ಕಳೆದ ಮೂರು ತಿಂಗಳಿAದ ಬಾಡಿಗೆ ನೀಡಿಲ್ಲವೆಂದು ಮನೆ ಮಾಲೀಕ ರಾಮಚಂದ್ರ ರೆಡ್ಡಿ ವಲಸೆ ಕಾರ್ಮಿಕರನ್ನು ಬೀದಿಗೆ ತಳ್ಳಿದ್ದ.
ಹೀಗಾಗಿ ಹೆಬ್ಬಗೋಡಿ ಮೇಲ್ಸೇತುವೆ ಕೆಳಗಡೆ ನಿಂತು ವಿಡಿಯೋ ಮಾಡಿ ತಮ್ಮನ್ನು ಜಾರ್ಖಂಡ್‌ಗೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದರು.
ಹೀಗಾಗಿ ಇದಕ್ಕೆ ಸ್ಪಂದಿಸಿದ ಸಂಸದೆ ಶೋಭಾ ಕರಂದ್ಲಾಜೆ, ದೊಡ್ಡ ನಾಗಮಂಗಲದ ಮಂಜುನಾಥ ಕಲ್ಯಾಣಮಂಟಪದಲ್ಲಿ ತಾತ್ಕಾಲಿಕ ತಂಗುವುದಕ್ಕೆ ಕಾರ್ಮಿಕ ಇಲಾಖೆ ಹಾಗೂ ಕಂದಾಯ ಇಲಾಖೆಯ ನೆರವಿನಿಂದ ವವ್ಯಸ್ಥೆ ಮಾಡಿ ವಲಸೆ ಕಾರ್ಮಿಕರನ್ನು ಸಂತೈಸಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment