ಆರೋಗ್ಯ / HEALTH

ಎನ್‌ಹೆಚ್‌ಎಂ ಗುತ್ತಿಗೆ ಸ್ಕೀಂ ನೌಕರರಿಗೆ ಪ್ರೋತ್ಸಾಹ ಧನ ಕೊಡಿ

Published

on

ಮಳವಳ್ಳಿ(ಮಂಡ್ಯ): ಮುಂಚೂಣಿಯಲ್ಲಿರುವ ಕಾರ್ಮಿಕರ ಸುರಕ್ಷತೆಗೆ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಿಐಟಿಯು ಸಂಘಟನೆಯು ಮಳವಳ್ಳಿ ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಸಿಐಟಿಯು ಸಂಘಟನೆ ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ ಹಾಗೂ ತಾಲ್ಲೂಕು ಸಂಚಾಲಕ ತಿಮ್ಮೇಗೌಡ ನೇತೃತ್ವದಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಚಂದ್ರಮೌಳಿರವರಿಗೆ ಮನವಿ ಸಲ್ಲಿಸಿದರು.
ಇನ್ನೂ ಸಿಐಟಿಯು ಸಂಘಟನೆ ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ ಮಾತನಾಡಿ, ಕಂಟೋನಮೆAಟ್ ಹಾಗೂ ಕೆಂಪು ವಲಯದಲ್ಲಿ ಕೆಲಸ ಮಾಡುತ್ತಿರುವವರ ಸುರಕ್ಷತೆಗಾಗಿ ಟಿಪಿಇ ಕಿಟ್‌ಗಳನ್ನು ವಿತರಿಸಬೇಕು. ಕೋವಿಡ್-೧೯ ಕರ್ತವ್ಯದಲ್ಲಿರುವ ಎಲ್ಲಾ ಎನ್‌ಹೆಚ್‌ಎಂ ಗುತ್ತಿಗೆ ಸ್ಕೀಂ ನೌಕರರಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು ೨೫ ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು,ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ೭೫೦೦ ರೂ.ನೀಡಬೇಕು.ಏ.೨೨ರಂದು ಕಲ್ಕುಣಿ ಗ್ರಾಮಪಂಚಾಯಿತಿ ಸಿಬ್ಬಂದಿ ಬಸವರಾಜು ಕುಟುಂಬಕ್ಕೆ ೫೦ ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಕುಮಾರ,ನಾಗಮ್ಮ, ಕೃಷ್ಣ, ಮುನೀರ್ ಪಾಷ, ಶಿವಮ್ಮ ಹಾಜರಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Click to comment

Trending

Exit mobile version