ಆರೋಗ್ಯ / HEALTH

ಶಿರಾದಿಂದ ಬಸ್ ಸಂಚಾರ ಆರಂಭ..

Published

on

ಶಿರಾ(ತುಮಕೂರು):ರಾಜ್ಯದಲ್ಲಿ ಇಂದಿನಿAದ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು.
ಪ್ರತಿಯೊಬ್ಬ ಪ್ರಯಾಣಿಕರನ್ನು ಗೇಟ್‌ನಲ್ಲಿಯೇ ತಡೆದು ಅವರ ಹೆಸರು, ಎಲ್ಲಿಂದ-ಎಲ್ಲಿಗೆ, ಮೊಬೈಲ್ ನಂಬರ್ ಪಡೆದು ಅವರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಬಸ್‌ನಿಲ್ದಾಣದ ಒಳಗೆ ಬಿಡಲಾಯಿತು.
ಅಲ್ಲದೆ, ಥರ್ಮಲ್ ಮೀಟರ್‌ನಲ್ಲಿ ೯೯ ಡಿಗ್ರಿಗಿಂತ ಅಧಿಕ ಉಷ್ಣಾಂಶ ಕಂಡು ಬಂದವರನ್ನು, ೬೦ ವರ್ಷ ಮೇಲ್ಪಟ್ಟವರನ್ನು, ಮಕ್ಕಳನ್ನು, ಗರ್ಭಿಣಿಯರನ್ನು ವಾಪಸ್ ಕಳಿಸಲಾಯಿತು.ಉಳಿದಂತೆ ದೂರದ ಬೆಂಗಳೂರು,ಮತ್ತು ತುಮಕೂರು ನಗರಗಳಿಗೆ ಮಾತ್ರ ಬಸ್‌ಗಳನ್ನು ಬಿಡಲಾಯಿತು.ಒಂದು ಬಸ್‌ನಲ್ಲಿ ಕೇವಲ ೩೦ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಯಿತು.
ಇದಲ್ಲದೆ, ದೂರದ ಊರುಗಳಿಗೆ ತೆರಳುವವರು ಶಿರಾ ನಗರದ ಮುಖ್ಯ ಬಸ್‌ನಿಲ್ದಾಣಕ್ಕೆ ಬಂದೇ ಪ್ರಯಾಣಿಸಬೇಕಿದೆ. ಜೊತೆಗೆ ರಸ್ತೆ ಮಧ್ಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಿಲ್ಲ. ಕೇವಲ ಇಳಿಯುವವರಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಎಂದು ತಿಳಿದು ಬಂದಿದೆ.
ಇನ್ನು ಪ್ರಥಮ ದಿನವಾದ ಇಂದು ಸುಮಾರು ಒಂದು ಗಂಟೆಗೆ ೮ ಬಸ್‌ಗಳು ಶಿರಾ ನಗರದಿಂದ ಪ್ರಯಾಣಿಕರನ್ನು ಕರೆದುಕೊಂಡು ಪ್ರಯಾಣ ಬೆಳಸಿದವು.ಅಲ್ಲದೆ, ದಾವಣಗೆರೆ-ಚಿತ್ರದುರ್ಗ ಕಡೆಯಿಂದ ಹಾಗೂ ಬೆಂಗಳೂರು ಕಡೆಯಿಂದ ಬಂದ ಯಾವುದೇ ಬಸ್‌ಗಳು ನಗರದ ಒಳಗಡೆ ಸಂಚಾರ ನಡೆಸಲಿಲ್ಲ.
ಇದನ್ನು ಹೊರತುಪಡಿಸಿ ಈ ಹಿಂದೆ ಶಿರಾಕ್ಕೆ ಬಂದಿದ್ದ ಮಹಾರಾಷ್ಟ್ರದ ಸುಮಾರು ೧೧ ಜನ ಕಾರ್ಮಿಕರು ಇಂದು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Click to comment

Trending

Exit mobile version