ಆರೋಗ್ಯ / HEALTH

ಮಾಶಾಳದಲ್ಲಿ ಕ್ವಾರೈಂಟೈನ್‌ನಲ್ಲಿರುವವರಿಗೆ ಹೋಳಿಗೆ ಊಟ..

Published

on

ಅಫಜಲಪುರ(ಕಲಬುರಗಿ):ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಜೆ.ಎಂ.ಕೊರಬು ಫೌಂಡೇಶನ್ ವತಿಯಿಂದ ಕ್ವಾರೈಂಟೈನ್‌ನಲ್ಲಿರುವವರಿಗೆ ಹೋಳಿಗೆ ತುಪ್ಪದ ಊಟ ನೀಡಲಾಯಿತು.
ಅಂದ ಹಾಗೇ ಗಡಿ ಭಾಗದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಕ್ವಾರೈಂಟೈನ್‌ನಲ್ಲಿ ಇರುವ ಸುಮಾರು ೩೫೦ಕ್ಕೂ ಹೆಚ್ಚು ಮಂದಿಗೆ ಜೆ.ಎಂ.ಕೊರಬು ಫೌಂಡೇಶನ್ ಹೊಳಿಗೆ, ತುಪ್ಪದ ಊಟ ನೀಡಿದೆ.
ಇದೇ ವೇಳೆ ಜೆ.ಎಂ.ಕೊರಬು ಫೌಂಡೇಶನ್‌ನ ಸಂಸ್ಥಾಪಕ ಜೆ.ಎಂ.ಕೊರಬು ಮಾತನಾಡಿ,ಬೇರೆ ಊರುಗಳಿಂದ ಬಂದಿರುವ ನಮ್ಮ ಜನರಿಗೆ ದೇವರ ದಯೆಯಿಂದ ಕೊರೊನಾ ಭಾದಿಸದಿರಲಿ,ಎಲ್ಲೆಡೆಯೂ ಜನರು ಸುರಕ್ಷಿತವಾಗಿರಲಿ.ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಿಳಿಸಿದರು.
ಇದಲ್ಲದೆ, ಜೆ.ಎಂ.ಕೊರಬು ಫೌಂಡೇಷನ್ ಈಗಾಗಲೇ ಅಫಜಲಪುರ ತಾಲ್ಲೂಕಿನಲ್ಲಿ ಮಾಸ್ಕ್ ವಿತರಣೆ, ಆಹಾರದ ಧಾನ್ಯದ ಕಿಟ್‌ಗಳ ವಿತರಣೆಯ ಕೆಲಸ ಮಾಡುತ್ತಿದೆ.ಜೊತೆಗೆ ನೀರಿನ ಸಮಸ್ಯೆ ಇರುವ ಮಾಶಾಳ ಗ್ರಾಮದಲ್ಲಿ ಮಳೆ ಬರುವವರೆಗೆ ಟ್ಯಾಂಕರ್ ಮೂಲಕ ನೀರು ನೀಡುವುದಾಗಿ ತಿಳಿಸಿದ್ದಾರೆ.
ಈರಣ್ಣ ಎಂ.ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)

Click to comment

Trending

Exit mobile version