ಆರೋಗ್ಯ / HEALTH

ಖಾಸಗಿ ಬಸ್ ರಸ್ತೆಗಿಳಿಯೋದು ಇನ್ನೂ ಅನುಮಾನ..

Published

on

ತುಮಕೂರು:ಕೊರೊನಾ ವೈರಸ್‌ನಿಂದ ಲಾಕ್‌ಡೌನ್ ಆಗಿರುವ ಹಿನ್ನಲೆಯಲ್ಲಿ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿವೆ ಎಂದು ೧೪ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರುಗಳು ತಿಳಿಸಿದ್ದಾರೆ.
ನಗರಕ್ಕೆ ಸಮೀಪದ ಹಿರೇಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾಸಗಿ ಬಸ ಮಾಲೀಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಬಿ.ಎಸ್. ಬಲಶಾಮಸಿಂಗ್,ನಮ್ಮ ಜಿಲ್ಲೆಯೂ ಸೇರಿದಂತೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ೧೪ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರು ಸೇರಿ ಇಂದು ಸಭೆ ನಡೆಸಲಾಗಿದೆ.ಸಭೆಯಲ್ಲಿ ಒಮ್ಮತ ತೀರ್ಮಾನಕ್ಕೆ ಬಂದು ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒಕ್ಕೊರಲ ಮನವಿ ಸಲ್ಲಿಸಲಾಗುವುದು ಎಂದರು.
ಕೋವಿಡ್-೧೯ ನಿಂದ ಮಾ.೨೪ರಿಂದಲೇ ಸಾರಿಗೆ ಪ್ರಾಧಿಕಾರದ ಆದೇಶದಂತೆ ಖಾಸಗಿ ಬಸ್‌ಗಳನ್ನು ನಿಲ್ಲಿಸಲಾಗಿದೆ. ಕೆಎಂವಿಟಿ ಆ್ಯಕ್ಟ್ ಪ್ರಕಾರ ರಾಜ್ಯ ಸರ್ಕಾರವು ಬಸ್ಸುಗಳ ತ್ರೈಮಾಸಿಕ ತೆರಿಗೆಯನ್ನು ಮುಂಗಡವಾಗಿ ಪಡೆಯುತ್ತಿದ್ದು,ಇದನ್ನು ಮರುಪರಿಶೀಲಿಸಿ ತೆರಿಗೆ ಮುಕ್ತ ಹಾಗೂ ರಿಯಾಯಿತಿ ನೀಡಲು ಅವಕಾಶವಿದೆ.ಇದನ್ನು ಪರಿಶೀಲಿಸಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಚಿತ್ರದುರ್ಗ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಟಿ.ಎ.ಲಿಂಗಾರೆಡ್ಡಿ ಮಾತನಾಡಿ,೨೦೨೦ರವರೆಗೆ ತೆರಿಗೆಯನ್ನು ಮನ್ನಾ ಮಾಡಿ ಮತ್ತೆ ೨೦೨೧ರ ಮಾರ್ಚ್ವರೆಗೆ ಶೇ.೫೦ರಷ್ಟು ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಬೇಕು,ಈಗಾಗಲೇ ಖಾಸಗಿ ಬಸ್ಸುಗಳನ್ನು ನಿರುಪಯುಕ್ತತೆಗಾಗಿ ಸರೆಂಡರ್ ಮಾಡಿದ್ದು,ಈ ಅವಧಿಯನ್ನು ಬಿಟ್ಟು ಮುಂದಿನ ಅವಧಿಗೆ ತೆರಿಗೆ ವಿನಾಯಿತಿ ಕೊಟ್ಟು ಮತ್ತು ಡಿಸೆಂಬರ್ ನಂತರ ಶೇ.೫೦ರಷ್ಟು ವಿನಾಯ್ತಿ ನೀಡಬೇಕೆಂದರು.
ಕೋಲಾರ ಜಿಲ್ಲಾಧ್ಯಕ್ಷ ಶುಭಾಷ್ ರೆಡ್ಡಿ ಮಾತನಾಡಿ,ನಮ್ಮಿಂದ ತ್ರೈಮಾಸಿಕ ತೆರಿಗೆಯನ್ನು ಮುಂಗಡವಾಗಿ ಪಡೆಯುತ್ತಿದ್ದು,ಇದನ್ನು ೧೫ ದಿನಗಳ ಬದಲಾಗಿ ಒಂದು ತಿಂಗಳ ಮುಂಗಡವಾಗಿ ಪಡೆಯಬೇಕು,ಈಗಾಗಲೇ ವಿವಿಧ ಟ್ಯಾಕ್ಸಿ,ಆಟೋ ಚಾಲಕರಿಗೆ ಪ್ಯಾಕೇಜ್ ಘೋಷಣೆ ಮಾಡಿದಂತೆ ಖಾಸಗಿ ಬಸ್ಸುಗಳ ಚಾಲಕರಿಗೂ ನೀಡಬೇಕೆಂದು ಆಗ್ರಹಿಸಿದರು.
ಲಾಕ್‌ಡೌನ್ ಸಡಿಲಿಕೆ ನಂತರ ಖಾಸಗಿ ಬಸ್ ಓಡಿಸಲು ಸೂಚನೆ ಬಂದಲ್ಲಿ, ಪ್ರಯಾಣಿಕರ ಸಾಗಾಟದ ಸಂಖ್ಯೆಯು ಪ್ರತಿ ಬಸ್ಸಿಗೆ ೪೮ ಜನ ಇದ್ದು,ಶೇ.೩೩ಕ್ಕೆ ಇಳಿಸಬಹುದು.ಜೊತೆಗೆ ಅಂತರ್‌ಜಿಲ್ಲಾ ಓಡಾಟಕ್ಕೆ ನಿರ್ಬಂಧ ಬರಬಹುದು ಬಸ್ಸುಗಳಲ್ಲಿ ಪ್ರಯಾಣಿಕರು ಮಾಸ್ಕ್ಧರಿಸುವುದು ಖಡ್ಡಾಯ, ಸ್ಯಾನಿಟೈಸರ್ ಬಳಸುವುದು ಖಡ್ಡಾಯ, ಸ್ಕ್ರೀನಿಂಗ್ ತಪಾಸಣೆ ಕಡ್ಡಾಯ ಎಂದು ಸರ್ಕಾರ ಏನಾದರೂ ಆದೇಶಿಸಿದರೆ ನಾವು ಅವೆಲ್ಲವನ್ನು ನಿಭಾಯಿಸಲು ಕಷ್ಟಸಾಧ್ಯವಾಗಲಿದೆ. ಇವೆಲ್ಲಾ ಒಂದು ರೀತಿಯ ಗೊಂದಲ ಉಂಟಾದAತೆ ಆಗುತ್ತದೆ. ಆದ್ದರಿಂದ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರುಗಳು ಹಾಜರಿದ್ದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Click to comment

Trending

Exit mobile version