ಬಾದಾಮಿಯತ್ತ ಮುಖ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ..

ಬಾಗಲಕೋಟೆ: ನಾಳೆ ಹಾಗೂ ನಾಡಿದ್ದು ಎರಡು ದಿನಗಳ ಕಾಲ ವಿಪಕ್ಷ ನಾಯಕ ಹಾಗೂ ಶಾಸಕ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ.
ಅಂದ ಹಾಗೇ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಬಾದಾಮಿ ಕ್ಷೇತ್ರ ರಾಜಕೀಯ ಪುರ್ನಜನ್ಮ ನೀಡಿತ್ತು.ಆದರೆ,ಅವರು ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಇಲ್ಲಿನ ರೈತರ, ಬಡ ಕೂಲಿ ಕಾರ್ಮಿಕರ ಮತ್ತು ನೆರೆ ಸಂತ್ರಸ್ತರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಅಲ್ಲದೆ,ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಮೂರು ತಿಂಗಳಾದರೂ ಸ್ವಕ್ಷೇತ್ರಕ್ಕೆ ಆಗಮಿಸಿರಲಿಲ್ಲ.ಹೀಗಾಗಿ ಜೂ.೩ ಹಾಗೂ ೪ ರಂದು ಬಾಗಲಕೋಟೆ ಜಿಲ್ಲೆಯ ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಳ್ಳಲಿದ್ದಾರೆ.
ಇದಲ್ಲದೆ, ಸಿದ್ದರಾಮಯ್ಯ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಜನರ ಸಮಸ್ಯೆಗೆ ಖುದ್ದಾಗಿ ಸ್ಪಂದಿಸಿರಲಿಲ್ಲ.ಬದಲಿಗೆ ಇಲ್ಲಿನ ರೈತರ, ಬಡ ಕೂಲಿ ಕಾರ್ಮಿಕರ ಮತ್ತು ನೆರೆ ಸಂತ್ರಸ್ತರಿಗೆ ತಮ್ಮ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಮೂಲಕ ಸಹಾಯ ಹಸ್ತ ಚಾಚಿದ್ದರು.ಹೀಗಾಗಿ ತಮ್ಮ ಅಹವಾಲನ್ನು ಶಾಸಕರಿಗೆ ಸಲ್ಲಿಸುವ ಸಲುವಾಗಿ ಕ್ಷೇತ್ರದ ಜನ ಸಿದ್ದರಾಮಯ್ಯ ಬರುವಿಕೆಗಾಗಿ ಸಮಸ್ಯೆ ಹೊತ್ತು ಕಾದು ಕುಳುತಿದ್ದಾರೆ.
ಸಿದ್ದರಾಮಯ್ಯರ ಎರಡು ದಿನಗಳ ವೇಳಾಪಟ್ಟಿ..
೧.ಜೂ.೩ರಂದು ಬೆಳಿಗ್ಗೆ ೧೧ಕ್ಕೆ ಬೆಂಗಳೂರಿನಿAದ ವಿಮಾನದ ಮೂಲಕ ಕೊಪ್ಪಳದ ಗಿಣಗೇರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ ಅಲ್ಲಿಂದ ರಸ್ತೆ ಮಾರ್ಗವಾಗಿ ಬಾದಾಮಿಗೆ ಆಗಮಿಸಲಿದ್ದಾರೆ.ಅದೇ ದಿನ ಮಧ್ಯಾಹ್ನ ೨:೩೦ಕ್ಕೆ ಬಾದಾಮಿಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ -೧೯ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಸಭೆ ಬಳಿಕ ಕೊರೋನಾ ವಾರಿಯರ್ಸ್ ಗೆ ಗೌರವ ಅರ್ಪಣೆ ಸಲ್ಲಿಸಿ ಮೊದಲ ದಿನದ ಪ್ರವಾಸ ಬಳಿಕ ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

೨.ಜೂನ್ ೪ರಂದು ಬೆಳಿಗ್ಗೆ ೯-೩೦ಕ್ಕೆ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದಾರೆ.
ಬಳಿಕ ಬಾದಾಮಿಯಲ್ಲಿ ನೂತನ ಮಿನಿ ವಿಧಾನಸೌಧ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮತಕ್ಷೇತ್ರದ ೨೧ ಸೋಂಕಿತ ಕೇಸ್ ಕಂಡು ಬಂದ ಢಾಣಕಶಿರೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಲಿದ್ದಾರೆ.

೩.ಇನ್ನು ಹೊಸೂರು ಗ್ರಾಮದ ಶಾಂತವ್ವ ಭೋವಿ ಹಾಗೂ ನಂದಿಕೇಶ್ವರ ಗ್ರಾಮದ ರೈತ ಬಸಯ್ಯ ಮುಚಖಂಡಿ ಸಿಡಿಲು ಬಡಿದು ಮೃತಪಟ್ಟಿದ್ದು ಮೃತ ರೈತ ಕುಟುಂಬ ಹಾಗೂ ನಂದಿಕೇಶ್ವರದಲ್ಲಿ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಹಂಗರಗಿ ಕೋವಿಡ್ ಕರ್ತವ್ಯಕ್ಕೆ ತೆರಳುವ ವೇಳೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು.ಸದ್ಯ ಅವರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ.

೪.ಇದಲ್ಲದೆ,ಗುಳೇದಗುಡ್ಡದಲ್ಲಿ ಸಂಕೇಶ್ವರ ಸಂಗಮ ರಸ್ತೆ ಕಾಮಗಾರಿಗೆ ಚಾಲನೆ ಕಾರ್ಯಕ್ರಮದ ಬಳಿಕ ಜೂನ್ ೪ರಂದು ಸಂಜೆ ೬ಕ್ಕೆ ಕೊಪ್ಪಳದ ಗಿಣಗೇರಾದಿಂದ ವಿಮಾನ ಮೂಲಕ ಬೆಂಗಳೂರಿಗೆ ನಿರ್ಗಮಿಸಿಲಿದ್ದಾರೆ.

ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Please follow and like us:

Related posts

Leave a Comment