ಮಂಡ್ಯ

ಮಳವಳ್ಳಿಯಲ್ಲಿ ನಾರಾಯಣ ಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಎಸ್ಪಿ ರಾಜ್ಯಾದ್ಯಕ್ಷ ಎಂ.ಕೃಷ್ಣಮೂರ್ತಿ..!

Published

on

ಮಳವಳ್ಳಿ- ಮೌಢ್ಯತೆ ಕೂಪವಾಗಿದ್ದ ಕೇರಳ ನಾಡಲ್ಲಿ ಅಸ್ಪೃಶ್ಯ ಸಮುದಾಯವನ್ನು ಆಳುವ ಸಮುದಾಯವಾಗಿರುವುದಕ್ಕೆ ಕೇರಳದ ನಾರಾಯಣ ಗುರು ರವರ ದೂರದೃಷ್ಟಿ ಮತ್ತು ಹೋರಾಟದ ಜೀವನವೇ ಕಾರಣವಾಗಿದೆ ಎಂದು ಬಿಎಸ್ಪಿ ರಾಜ್ಯಾದ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು. ಮಳವಳ್ಳಿ ಪಟ್ಟಣದ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ನಡೆದ ನಾರಾಯಣ ಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕೇರಳ ರಾಜ್ಯದಲ್ಲಿ ಜಾತಿ, ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು’ ಎಂಬ ಒಬ್ಬ ಸಮಾಜ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ಜಗತ್ತಿನಲ್ಲಿರುವುದು “ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು” ಎಂಬ ಸತ್ಯವಾಕ್ಯವನ್ನು ಅವರು ಪ್ರತಿಪಾದಿಸಿದರು. ದೇವರು ಎಲ್ಲೂ ಇಲ್ಲ. ನಿನ್ನ ಮನಸ್ಸಿನೊಳಗೆ, ಹೃದಯದೊಳಗೆ ಇದ್ದಾನೆ. ನಿನ್ನೆಲ್ಲಾ ಸಮಸ್ಯೆಗಳಿಗೆ ಬೇರಾರು ಕಾರಣರಲ್ಲ ನೀನೆ ಕಾರಣ. ಸಮಾಜದ ಜನರಿಗೆ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಒಬ್ಬ ವ್ಯಕ್ತಿ ತನ್ನೊಳಗಿನ ಶಕ್ತಿಯನ್ನು ಕಂಡುಕೊಳ್ಳಲಿಕ್ಕೆ ಸಾಧ್ಯವಿದೆ ಎಂಬುದನ್ನು ನಾಡಿಗೆ ತಿಳಿಸಿದರು.ಕೇರಳದಲ್ಲಿ ಅತೀ ಹೆಚ್ಚು ವಿದ್ಯಾವಂತರಿದ್ದಾರೆ. ವೈಜ್ಞಾನಿಕವಾಗಿ ಚಿಂತಿಸುವಷ್ಟು ಬದಲಾಗಿದ್ದಾರೆ ಎಂದರೇ ಇದಕ್ಕೆ ಕೇರಳದಲ್ಲಿ ನಾರಾಯಣ ಗುರು ರವರು ಆರಂಭಿಸಿದ ಸಾಮಾಜಿಕ ಪರಿವರ್ತನಾ ಚಳುವಳಿ ಪ್ರಮುಖ ಕಾರಣವಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಸತೀಶ್ ಹಲಸಹಳ್ಳಿ, ಜಿಲ್ಲಾ ಕಾರ್ಯದರ್ಶಿ ಎಚ್.ಎನ್.ವೀರಭದ್ರಯ್ಯ, ಉಸ್ತುವಾರಿ ಕಮಲ್ ನಾಸೀರ್ ಷರೀಫ್, ನಾಗೇಂದ್ರ, ಮುಖಂಡರಾದ ಅಶೋಕ್ ಕುಮಾರ್, ಶಿವಮೂರ್ತಿ, ಸುಧಾಕರ್ ಸೇರಿದಂತೆ ಹಲವರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version