ಮದ್ದೂರು

ಮಹಾತ್ಮ ಗಾಂಧೀಜಿ ಸತ್ಯ,ಅಹಿಂಸೆ ತತ್ವ ಅಳವಡಿಸಿಕೊಂಡಿರುವ ಮಹಾನ್ ವ್ಯಕ್ತಿ- ಚಂದ್ರಮೌಳಿ..!

Published

on

ಮಳವಳ್ಳಿ: ತಾಲ್ಲೂಕು ಆಡಳಿತ ವತಿಯಿಂದ 151 ನೇ ಗಾಂಧಿಜಯಂತಿ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಮಿನಿ ವಿಧಾನಸೌಧದ ಸಂಕೀರ್ಣ ಕಟ್ಟಡದಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಂದ್ರಮೌಳಿರವರು ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ವಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ತಹಸೀಲ್ದಾರ್ ಚಂದ್ರಮೌಳಿ ಮಾತನಾಡಿ. ಸತ್ಯ, ಅಹಿಂಸೆ, ಎಂಬ ತತ್ವವನ್ನು ಆಳವಡಿಸಿಕೊಂಡ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿರವರು, ಇವರು, ಸ್ವಚ್ಚತೆ ಬಗ್ಗೆ ಸಾಕಷ್ಟು ಕನಸು ಕಂಡು, ಗ್ರಾಮ ಸ್ವರಾಜ್ಯದ ಕನಸು ಕಂಡವರು ಗಾಂಧಿಜೀ ಅವರ ತತ್ವವನ್ನು ನಾವೆಲ್ಲರೂ ಆಳವಡಿಸಿಕೊಳ್ಳಬೇಕು ಎಂದರು.ಇನ್ನೂ ಇದೇ ವೇಳೆ ತಾಲ್ಲೂಕು ಕಚೇರಿಯ ಆವರಣವನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ತಹಸೀಲ್ದಾರ್ ಚಂದ್ರಮೌಳಿ ಸೇರಿದಂತೆ ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಹಮ್ಮಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ಚನ್ನವೀರಭದ್ರಯ್ಯ, ಜಯಶೇಖರ,ದಿವಾಕರ, ಪ್ರಕಾಶ, ರಾಮಣ್ಣ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version