ಬಾಗಲಕೋಟೆ

ದಂಡ ವಸೂಲಿ ವಿರೋಧಿಸಿ 21 ವಯಸ್ಸಿನ ಯುವ ಹೋರಾಟಗಾರ ತಹಶೀಲ್ದಾರಗೆ ಮನವಿ..!

Published

on

ಬಾಗಲಕೋಟೆ: ಮೊದಲೇ ಕೊರೊನಾದಿಂದಾಗಿ ತಿನ್ನಲು ಆಹಾರ ಸಿಗುತ್ತಿಲ್ಲ, ಕೈಯಲ್ಲಿ ಕೆಲಸವಿಲ್ಲ, ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ದುಡಿದರು 100 ರೂಪಾಯಿ ಸಂಬಳ ದೊರೆಯುತ್ತಿಲ್ಲ, ಇದರಲ್ಲಿ ಪ್ರತಿನಿತ್ಯ ಅಧಿಕಾರಿಗಳು ಅಧಿಕಾರದ ದರ್ಪದಿಂದ ಅಮಾನವೀಯತೆಯಿಂದ ಒತ್ತಾಯ ಪೂರ್ವಕವಾಗಿ ದಂಡ ವಿಧಿಸುವುದರ ಕುರಿತು ಯುವ ಸಾಮಾಜಿಕ ಹೋರಾಟಗಾರ ಸುಮೀತ ಬಂಗಿ ತಮ್ಮ ಮೊಣಕಾಲು ನೋವಿದ್ದರು ಲೆಕ್ಕಿಸದೇ ಜನರ ಒಳಿತಿಗಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಇದರಿಂದ ಆಗುತ್ತಿರುವ ತೊಂದರೆ ಬಗ್ಗೆ ವಿವರಣೆ ಮಾಡಿ ಹಾಗೂ ನೀವೂ ನನ್ನ ಜೊತೆಗೆ ಬನ್ನಿ ಜನರ ಸಮಸ್ಯೆಯನ್ನು ನಿಮ್ಮ ಮುಂದೆ ತೋರಿಸುತ್ತೇನೆ ಎಂದು ಉಪತಹಶೀಲ್ದಾರರ ಕಾಗಿ ಅವರ ಮೂಲಕ ಏಕಾಂಗಿಯಾಗಿ ತಾವೇ ಖುದ್ದಾಗಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಆಗ್ರಹಿಸಿದ್ದಾರೆ. 100 ರೂಪಾಯಿ ದಂಡದ ಸಲುವಾಗಿ ಮನಬಂದಾಗ ರಸ್ತೆಯಲ್ಲಿ ವಾಹನ ತಡೆ ಹಿಡಿದು ದಂಡ ಹಾಕುವ ಸಂಧರ್ಭದಲ್ಲಿ ಸವಾರ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಯಾರು ಹೊಣೆಗಾರರು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ, ಹಾಗೂ ಮಳೆ ಬಂದ ಸಮಯದಲ್ಲೂ ವಾಹನ ಸವಾರರಿಗೆ ದಂಡ ವಿಧಿಸುತ್ತಿರುದನ್ನು ಖಂಡಿಸಿದ್ದಾರೆ.ಸಾಕಷ್ಟು ಸರ್ಕಾರಿ ಅಧಿಕಾರಿಗಳೇ ಮಾಸ್ಕ ಇಲ್ಲದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅದು ಕೂಡ ಸಿಸಿಟಿವಿ ಪರಿಶೀಲಿಸಿ , ಅವರ ಮೇಲೆ ಯಾಕೇ ಇನ್ನೂ ನೀವೂ ಕಾನೂನು ಕ್ರಮ ತೆಗೆದುಕೊಂಡಿಲ್ಲ, ದಂಡ ಯಾಕೇ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.ಅಧಿಕಾರಿಗಳೇ ನಿಯಮ ಪಾಲಿಸದಿದ್ದಾಗ ಸಾರ್ವಜನಿಕರು ಹೇಗೆ ಪಾಲಿಸುತ್ತಾರೆ ಎಂದು ಜಿಲ್ಲಾಧಿಕಾರಿಗಳಿಗೆ ಟಾಂಗ್ ಉತ್ತರ ನೀಡಿದ್ದಾರೆ. ಅಧಿಕಾರಿಗಳ ದಂಡ ವಸೂಲಿ ಹಾವಳಿ ಕುರಿತು ಗರಂ ಆಗಿ ಯುವ ಸಾಮಾಜಿಕ ಹೋರಾಟಗಾರ ಎಂಮನವಿ ಅಧಿಕಾರಿಗಳ ಕಾರ್ಯವೈಫಲ್ಯದ ಕುರಿತು ಬರೆದು ರಬಕವಿ-ಬನಹಟ್ಟಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಡ್ಮನವಿ ಮೂಲಕ ದೂರನ್ನು ನೀಡಿ ಏಕಾಂಗಿಯಾಗಿ ತೆರಳಿ ಮನವಿ ನೀಡಿದ್ದಾನೆ.ಇದಕ್ಕೆ ಜಿಲ್ಲಾಧಿಕಾರಿಗಳು ನನ್ನ ಮನವಿಗೆ ಪ್ರತ್ಯುತ್ತರ ನೀಡಬೇಕೆಂದು ಹೇಳಿದ್ದಾರೆ.ಯುವ ದೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯವೈಖರಿಗೆ ಮತ್ತು ಇವರು ಮಾಡುತ್ತಿರುವ ಸಮಾಜ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅಭಿನಂದಿಸುತ್ತಿದ್ದಾರೆ.

ವರದಿ :- ಶ್ಯಾಮ್ ತಳವಾರ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Click to comment

Trending

Exit mobile version