Connect with us

ಆನೆಕಲ್

ಕಾಲು ಜಾರಿ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು..!

Published

on

ಆನೇಕಲ್: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲ್ಲೂಕಿನ ನಾಯನಹಳ್ಳಿಯಲ್ಲಿ ನಡೆದಿದೆ. 33 ವರ್ಷದ ಮುನಿರಾಜು ಎಂಬಾತ ವೆಂಕಟಾಚಲ ಗೌಡ ಎಂಬುವವರ ತೋಟದಲ್ಲಿ ತೋಟದ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಹೋದಾಗ ಈ ಘಟನೆ ಸಂಭವಿಸಿದ್ದು, ಈಜಲು ಬಾರದೆ ಕೃಷಿ ಹೊಂಡದಲ್ಲೇ ಬಿದ್ದು ಮೃತಪಟ್ಟಿದ್ದಾರೆ. ಬೆಳಗ್ಗೆ ದಿನನಿತ್ಯದ ಕೆಲಸಕ್ಕೆ ಸಾರ್ವಜನಿಕರು ತೆರಳಿದ್ದು ಮುನಿರಾಜುನ ಚಪ್ಪಳಿ ಹೊಂಡದ ಮೇಲೆ ಇರುವುದನ್ನು ಕಂಡು ಸ್ಥಳಿಯರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ಕೃಷಿ ಹೊಂಡದಲ್ಲಿನ ನೀರು ಖಾಲಿ ಮಾಡಿ ಮೃತ ದೇಹವನ್ನು ಹೊರತೆಗೆದು ಶವಾಗಾರಕ್ಕೆ ಕಳುಹಿಸಿದ್ದಾರೆ. ಬೆಳಿಗ್ಗೆ ಚಪ್ಪಲಿ ಕೃಷಿ ಹೊಂಡದ ಮೇಲೆ ಇರುವುದು ನೋಡಿ ಘಟನೆ ಬೆಳಕಿಗೆ.

ವರದಿ- ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Continue Reading
Click to comment

Leave a Reply

Your email address will not be published. Required fields are marked *

ಆನೆಕಲ್

ಮತ ಎಣಿಕೆಯ ಹಿನ್ನಲೆಯಲ್ಲಿ ಆನೇಕಲ್ ನಲ್ಲಿ 144 ಸೆಕ್ಷನ್ ಜಾರಿ..!

Published

on

By

ಆನೇಕಲ್: ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆಯ ಹಿನ್ನಲೆಯಲ್ಲಿ ಆನೇಕಲ್ ಪಟ್ಟಣದಲ್ಲಿ ಇಂದು 144 ಸೆಕ್ಷನ್ ಘೋಷಣೆ ಮಾಡಲಾಗಿತ್ತು.ನಿನ್ನೆ ರಾತ್ರಿ 12 ಗಂಟಿಯಿಂದ ಇಂದು ರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಿ ಆನೇಕಲ್ ತಹಶೀಲ್ದಾರ್ ಮಹದೇವಯ್ಯ ಆದೇಶ ಹೊರಡಿಸಿದ್ದಾರೆ.ಇನ್ನೂ ಆನೇಕಲ್ ತಾಲ್ಲೂಕಿನಾದ್ಯಂತ 5 ಮಂದಿಗಿಂತ ಹೆಚ್ಚು ಮಂದಿ ಗುಂಪು ಸೇರುವ ಆಗಿಲ್ಲ ಎನ್ನಲಾಗಿತ್ತು.ಯಾವುದೇ ಸಂಭ್ರಮಾಚರಣೆಗಳು, ಸಂತೆ ಸಮಾರಂಭಗಳು ನಡೆಯುವ ಹಾಗಿಲ್ಲ.ಯಾರಾದ್ರೂ ಸಾವಿಗೀಡಾಗಿದ್ದರೆ 20ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳಲು ನಿಷೇಧ ಮಾಡಲಾಗಿತ್ತು.ಯಾವುದೇ ಧಾರ್ಮಿಕ ಉತ್ಸವ ಮೆರವಣಿಗೆ ನಡೆಸುವ ಹಾಗಿಲ್ಲ.ಇನ್ನೂ ಕೋವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಇದನ್ನು ಉಲ್ಲಂಘಿಸಿದರೆ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ಪೋಲೀಸರಿಗೆ ಸೂಚನೆ ನೀಡಲಾಗಿತ್ತು.

ವರದಿ- ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Continue Reading

ಆನೆಕಲ್

ಆನೇಕಲ್ ನಲ್ಲಿ ಫ್ರೂಟ್ ಮಾರ್ಕೆಟ್ ಬಂದ್…!

Published

on

By

ಆನೇಕಲ್: ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದಲ್ಲಿರುವ ಫ್ರೂಟ್ ಮಾರ್ಕೆಟ್ ಸಂಪೂರ್ಣ ಬಂದ್ ಆಗಿತ್ತು. 300 ರಿಂದ 400 ಅಂಗಡಿಗಳನ್ನು ಹೊಂದಿರುವ ಈ ಮಾರುಕಟ್ಟೆಯಲ್ಲಿ ಬೆಂಗಳೂರು, ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಹಣ್ಣುಗಳು ಬಂದು ಮಾರಾಟವಾಗುತ್ತವೆ, ಆದರೆ ಇಂದು ಸಂಪೂರ್ಣವಾಗಿ ಬಂದ್ ಆಗಿತ್ತು. ಆದ್ರೆ ಬೆಂಗಳೂರು- ಚೆನ್ನೈ ಹೆದ್ದಾರಿಯಲ್ಲಿ ಎಂದಿನಂತೆ ವಾಹನ ಸಂಚಾರ ಕಂಡು ಬಂತು. ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳು ಕೂಡ ಎಂದಿನಂತೆ ಸಂಚರಿಸಿದವು.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Continue Reading

ಆನೆಕಲ್

ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಡಿವೈಎಸ್ಪಿ ಮಹಾದೇವಪ್ಪ..!

Published

on

By

ಆನೇಕಲ್: ಆನೇಕಲ್ ಠಾಣೆಯಲ್ಲಿನ ಡಿವೈಎಸ್ಪಿ ಮಹದೇವಪ್ಪ ಸುಮಾರು 50ಕ್ಕೂ ಹೆಚ್ಚು ರೌಡಿಗಳನ್ನು ಠಾಣೆಗೆ ಕರೆಸಿ ಇನ್ಮುಂದೆ ಯಾರಾದ್ರೂ ರೌಡಿಸಂ ಮುಂದುವರಿಸಿದರೆ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ನಿಮ್ಮ ಆಟಗಳು ನನ್ನ ಮುಂದೆ ನಡೆಯೋದಿಲ್ಲ, ಬಾಲ ಮುದುರಿಕೊಂಡು ಕೆಲಸ ಮಾಡಿಕೊಂಡು ಮನೆಯಲ್ಲಿ ಇರಬೇಕು. ಆಟ ಆಡುತ್ತೇವೆ ಎಂದರೆ ನಮ್ಮ ಬಂದೂಕು ಕೆಲಸ ಮಾಡುತ್ತದೆ. ಬಾಲ ಬಿಚ್ಚಿದರೆ ಪೊಲೀಸ್ ಇಲಾಖೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಯಾವಾಗ ಬೇಕಾದರೂ ಮನೆಗೆ ನುಗ್ಗಿ ಹೊಡೆಯುತ್ತೇವೆ, ಮನೆಯಲ್ಲಿ ವೆಪನ್ ಇಟ್ಟುಕೊಂಡು ಆಟವಾಡಿದರೆ ಇನ್ನು ಮುಂದೆ ಎಚ್ಚರ, ಜೊತೆಗೆ ಬಡ್ಡಿ ದಂದೆಯಲ್ಲಿ ಪಾಲ್ಗೊಂಡಿದ್ದರೆ ಕೂಡಲೇ ದಂಧೇ ನಿಲ್ಲಿಸಬೇಕು. ಎಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Continue Reading

Trending

Copyright © 2023 EXPRESS TV KANNADA

kuşadası escort kayseri escort kocaeli escort canlı maç izle selcuksports güvenilir bahis siteleri deneme bonusu deneme bonusu veren siteler bahis siteleri https://resimlihaber.org/ canlı bahis siteleri güvenilir bahis siteleri http://seu.frvm.utn.edu.ar/guvenilir-bahis-siteleri.html deneme bonusu veren sitelercasino sitelerimıknatısmaç izle