ಕಲಬುರಗಿ

ಅಂಗನವಾಡಿ ಕಾರ್ಯಕರ್ತರಿಗೆ ಕಾರ್ಯಶಾಲಾ ಪೂರ್ವಶಿಕ್ಷಣ ಕುರಿತು 3ದಿನದ ತರಬೇತಿ..!

Published

on

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಹಾಗೂ ಕಲ್ಯಾಣ ಕನಾ೯ಟಕ ಪ್ರದೇಶಾಭಿವೃದ್ಧಿ ಪರಸ್ಪರ ಮಂಡಳಿ ಮೈಕ್ರೋ ಯೋಜನೆ ಅಡಿಯಲ್ಲಿ ಮತ್ತು ಸಿಡಿಎಫ್ ಮತ್ತು ಇಂಡಿಯಾ ಲಿಟರ್ಸಿ ಪ್ರಾಜೆಕ್ಟ್ ಬೆಂಗಳೂರು ಇವರ ಸಹಕಾರದೊಂದಿಗೆ ಅಂಗನವಾಡಿ ಕಾರ್ಯ ಕರ್ತರಿಗೆ ಮೂರನೆ ಹಂತದ ಮೂರು ದಿನಗಳಕಾಲ ಕಾರ್ಯಶಾಲಾ ಪೂರ್ವಶಿಕ್ಷಣ ಕುರಿತು 3ದಿನದ ತರಬೇತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಶಿವಮೂರ್ತಿ ಕುಂಬಾರ ಶಾಲಾ ಪೂರ್ವ ಶಿಕ್ಷಣ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ. ಅಂಗನವಾಡಿ ಶಿಕ್ಷಕಿಯರು ತಳ ಹಂತದಲ್ಲಿ ಮಕ್ಕಳಿಗೆ ಕಥೆ ಹಾಡು ಆಟದ ಮೂಲಕ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀ ಶಿವಪ್ಪ ವಾರಿಕ್ ಮತ್ತು CFF ಶ್ರೀ ಗುರು ಜಮಾದಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಭೀಮರಾವ್ ಹೊಸಮನಿ ಶ್ರೀ ಶೈಲ ಖಜೂರಿ ವಲಯದ ಹಿರಿಯ ಮೇಲ್ವಿಚಾರಕಿ ಶ್ರೀಮತಿ ಸುರೇಖಾ ಪೂಜಾರಿ ಮತ್ತು ಶ್ರೀಮತಿ ಬೇಬಿ ನಂದ ಮತ್ತು ಖಜೂರಿ ವಲಯದ ಮೇಲ್ವಿಚಾರಕಿ ಶ್ರೀಮತಿ ಕಸ್ತೂರಿ ಬಾಯಿ ಮುನ್ನೋಳಿ ಸುನಂದಾ ಮಾಹಾದೇವಿ ಮತ್ತು ಖಜೂರಿ ವಲಯದ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಮೊತಮ್ಮಾ . ವಿಜಯಕುಮಾರಿ. ಶಾಂತಬಾಯಿ ಸಿದಮ್ಮಾ R. ಸಿದಮ್ಮಾV . ಮಲ್ಲಮ್ಮಾ ನಾಗಮ್ಮ ಉಪಸ್ಥಿತರಿದ್ದರು.

ವರದಿ- ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ

Click to comment

Trending

Exit mobile version