ಕಲಬುರಗಿ

ಮಾದನ ಹಿಪ್ಪರಗಾದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ..!

Published

on

ಕಲಬುರುಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಶ್ರೀಖಂಡೇಶ್ವರ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ ಆಧುನಿಕ ಸಂಸ್ಕçತಿಯ ಪ್ರಭಾದಿಂದ ನಮ್ಮ ದೇಶಿಯ ಸಂಸ್ಕೃತಿ ಮರೆಯಾಗುತ್ತಿದೆ, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಕಲಾವಿದರು ಕಲೆಯನ್ನೆ ನಂಬಿ ಬದುಕು ನಡೆಸುವವರು ಅವರಿಗೆ ಬೇರೆ ಉದ್ದೋಗ ಗೊತ್ತಿಲ್ಲ ಅವರು ತೀರಾ ಆರ್ಥಿಕ ಸಂಕಷ್ಟದಲ್ಲಿ ಇದ್ದು ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದರು. ಸಾನಿದ್ಯ ವಹಿಸಿ ಮಾತನಾಡಿದ ಶ್ರೀಶಾಂತವೀರ ಶಿವಾಚಾರ್ಯರು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಹಿರಿದಾದ ಇತಿಹಾಸವಿದೆ ಆಲೂರು ವೆಂಕಟರಾರು ಕನ್ನಡ ಕಟ್ಟಲು ಶ್ರಮಿಸಿದ್ದಾರೆ. ನಮ್ಮ ಸಂಸ್ಕçತಿ ನಮ್ಮ ಹೆಮ್ಮೆ ಇಲ್ಲಿ ಎಲ್ಲ ಭಾಷೆ ಜನಾಂಗದವರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ ಇದು ಕನ್ನಡಗರ ದೊಡ್ಡ ಗುಣವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡದ ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ದತ್ತಪ್ಪ ಸಾಗನೂರ ಮಹಾರಾಷ್ಟದ ಗಡಿ ಗ್ರಾಮದಲ್ಲಿ ಸಾಕಷ್ಟು ಕಲಾವಿದರು ಇದ್ದು ಕಲೆಯ ಇಲ್ಲಿ ಶ್ರಿಮಂತವಾಗಿದೆ ಇಂಥ ಊರಲ್ಲಿ ಕಾರ್ಯಕ್ರಮ ನಡೆಸುವುದು ಅರ್ಥಪೂರ್ಣವಾಗಿದೆ ಎಂದರು.ತಾ,ಪA ಸದಸ್ಯ ಸಾತಪ್ಪ ಕೋಳಶೆಟ್ಟಿ ಮುಖಂಡ ಶಿವಲಿಂಗಪ್ಪ ಮೈಂದರ್ಗಿ ಪಿಡಿಓ ಪ್ರಭು ಗಡಗಿ ಇದ್ದರು. ಬಸವರಾಜ ಪ್ಯಾಟಿ ನಿರೂಪಿಸದರು ಸಾತಲಂಗಪ್ಪ ಸಲಗರ ಒಂದಿಸಿದರು. ಶಾಂತಲಂಗೇಶ್ವರ ಗವಿಯಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ಜಾನಪದ ಕಲಾ ತಂಡಗಳಾದ ಲಂಬಾಣಿ ನೃತ್ಯ ಹೆಚ್ಚ ಮೇಳೆ ಜಿಟ್ಟ ಹಲಗ ಗಾರೂಡಿ ಗೋಬೆಗಳ ಮರೆವಣಿಗೆ ಪ್ರದರ್ಶನ ನಡೆಯಿತು, ನಂತರ ನಾಟಕ ಬೈಲಾಟ ಸೇರಿದಂತೆ ವಿವಿಧ ಕಲಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ವರದಿ- ರಾಜಕುಮಾರ ಹಿರೇಮಠ ಎಕ್ಸ್ ಪ್ರೇಸ್ ಟಿವಿ ಆಳಂದ

Click to comment

Trending

Exit mobile version