ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಬಾಲಿವುಡ್ ನಟ ಸೋನುಸೂದ್ ತಮ್ಮಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ಜನರ ನಡುವೆ ರಿಯಲ್ ಹೀರೋ ಅಂತ ಕರೆಸಿಕೊಂಡಿದ್ದಾರೆ. ಆದ್ರೀಗ ಮತ್ತೇ ಸೊನುಸೂದ್ ಕಷ್ಟದಲ್ಲಿರುವವರ ಸಹಾಯಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಲಾಕ್ ಡೌನ್ ಟೈಮ್‌ನಿಂದ ಸಾಕಷ್ಟು ಸಹಾಯ ಮಾಡಿ ಗುರುತಿಸಿಕೊಂಡಿರುವ ನಟ ಸೋನು ಸೂದ್ ಮುಂಬೈನಲ್ಲಿರುವ ತಮ್ಮ ಎಂಟು ಆಸ್ತಿಗಳನ್ನು ಅಡವಿಟ್ಟಿದ್ದಾರೆ. ಅವರಿಗೆ ಹತ್ತು ಕೋಟಿ ರೂಪಾಯಿ ಅವಶ್ಯಕತೆ ಇದ್ದರಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಾಲ ತುಂಬಲು ಹತ್ತು ಕೋಟಿ ರೂಪಾಯಿ ಅವಶ್ಯಕತೆಯಿದ್ದರಿಂದ ಸೋನು ಸೂದ್ ಜುಹುವಿನಲ್ಲಿರುವ ತಮ್ಮ ಎಂಟು ಆಸ್ತಿ ಮೂಲಗಳನ್ನು ಅಡವಿಟ್ಟಿದ್ದಾರೆ. ಇದರಲ್ಲಿ ಎರಡು ಅಂಗಡಿಗಳು, ಆರು ಫ್ಲಾಟ್ ಇದೆ ಎನ್ನಲಾಗಿದೆ. ಕಳೆದ ಸೆಪ್ಟೆಂಬರ್ 15 ರಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ನವೆಂಬರ್ 24 ಕ್ಕೆ ರಿಜಿಸ್ಟರ್ ಆಗಿದೆ ಎನ್ನಲಾಗಿದೆ. ಇನ್ನೂ ಮುಂಬೈನ…
Read MoreDay: December 10, 2020
ಮೇಕಪ್ ಇಲ್ಲದ ಫೋಟೊ ಹಂಚಿಕೊಂಡ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯ..
ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆಯೆಂದೆ ಗುರುತಿಸಿಕೊಳ್ಳುವ ನಟಿ ರಮ್ಯ ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಚಿತ್ರರಂಗವಷ್ಟೇ ಅಲ್ಲದೇ ಸೋಶಿಯಾಲ್ ಮೀಡಿಯಾಗಳಲ್ಲೂ ಕೆಲ ಕಾಲ ಕಾಣೆಯಾಗಿದ್ದರು. ಆಗೋ ಈಗೋ ಒಂದೊಂದು ಬಾರಿ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ನಟಿ ರಮ್ಯ ನಟನೆಯಷ್ಟೇ ಅಲ್ಲದೇ ರಾಜಕೀಯ ರಂಗದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಜೆಡಿಎಸ್ ನಿಂದ ಮಂಡ್ಯದಲ್ಲಿ ಸಂಸದೆಯಾಗಿದ್ದರು. ಇದೀಗ ಮಾಜಿ ಸಂಸದೆ, ನಟಿ ರಮ್ಯ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಮೇಕಪ್ ಇಲ್ಲದ ಒಂದು ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ರೀಲ್ ಲೈಫ್ ಸಖ್ಖತ್ ಸುಂದ್ರಿಯಾಗಿ ಕೆಲ ನಟಿಯರು ರಿಯಲ್ ಲೈಫ್ ನಲ್ಲಿ ಕೊಂಚ ಡಿಫರೆಂಟ್ ಆಗೆ ಇರ್ತಾರೆ. ಆದ್ರೆ ನಟಿ ರಮ್ಯ ಮಾತ್ರ ಆಗಲ್ಲ ರೀಲ್ ಅಲ್ಲೂ ಸಖ್ಖತ್ ಬ್ಯೂಟಿ, ರಿಯಲ್ ಅಲ್ಲೂ ಅದಕ್ಕಿಂತ ಬ್ಯೂಟಿ ನೊಡುಗರ ಕಣ್ಣು ಕುಕ್ಕುವಂತಿರುವ ನಟಿ ಅದೇಷ್ಟೊ ಹುಡಗರ ಹೃದಯ ಕದ್ದಿರುವ ಚೋರಿ ಅಂದ್ರೆ…
Read Moreನನ್ನ ತಾಯಿ ಸನ್ನಿ ಲಿಯೋನ್ ,ತಂದೆ ಇಮ್ರಾನ್ ಹಷ್ಮಿ ಅಂದ ಬಾಲಕ.. ಆತ ಯಾರು ಗೊತ್ತ?
ಬಾಲಿವುಡ್ ನ ಮೋಸ್ಟ್ ರೋಮ್ಯಾಂಟಿಕ್ ಹೀರೋ ಅಂದ್ರೆ ಅವರೇ ಇಮ್ರಾನ್ ಹಷ್ಮಿ,, ಇವರ ಚಿತ್ರದಲ್ಲಿ ರೋಮ್ಯಾಂನ್ಸ್ ಇಲ್ಲದ ದೃಷ್ಯಗಳೇ ಇರುವುದಿಲ್ಲ. ಇವರ ರೀತಿಯೇ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಹಾಟ್ ಬೆಡಗಿ ಸನ್ನಿ ಅಂದ್ರೆ ಯುವಕರಿಗೆ ಎಲ್ಲಿಲ್ಲದ ಪ್ರೀತಿ ತನ್ನ ರೋಮ್ಯಾಂಟಿಕ್ ನಟನೆಯಿಂದ ಜನರ ಮನಸ್ಸು ಗೆಲುವಲ್ಲಿ ಸನ್ನಿ ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಆದ್ರೆ ಇದೀಗ ಇವರಿಬ್ಬರ ಮಧ್ಯೆ ಒಂದು ಗಾಸಿಪ್ ಸುದ್ದಿ ಎಲ್ಲೇಡೆ ಹರಿದಾಡ್ತಾಯಿದ್ದು ಎಲ್ಲರೂ ಬಾಯಿ ಮೇಲೆ ಕೈಹಿಟ್ಟು ಹೊಂಡಿದ್ದಾರೆ. ಹೌದು..ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಷ್ಮಿ ಹಾಗೂ ಸನ್ನಿಲಿಯೋನ್ ಗೆ 20 ವರ್ಷದ ಮಗನಿದ್ದಾನೆ ಎಂಬಾ ಸುದ್ದಿ ಎಲ್ಲೇಡೆ ಹರಿದಾಡ್ತಾಯಿದೆ. ಬಾಲಿವುಡ್ ನ ಖ್ಯಾತ ಸೆಲೆಬ್ರೇಟಿಗಳಾದ ಇವರಿಬ್ಬರು ಪರಸ್ಪರ ಮದುವೆ ಆಗಿಲ್ಲ ಆದರೂ ಇವರಿಬ್ಬರಿಗೆ 20 ವರ್ಷದ ಒಬ್ಬ ಮಗನಿದ್ದಾನೆಂದು ಎಲ್ಲೇಡೆ ಸುದ್ದಿ ಆಗಿದ್ದು, ಇಂಥದ್ದೊಂದು ಮಾಹಿತಿ ವೈರಲ್ ಆಗಲು ಕಾರಣ…
Read Moreಕೊರೋನಾ ಸಾಂಕ್ರಮಿಕ ಪಿಡುಗಿನ ವೇಳೆ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬೇಕು- ಕೆ.ಪಿ.ಅನೀಲ್ ಕುಮಾರ್..!
ರಾಯಚೂರು- ಕೊರೋನಾ ಸಾಂಕ್ರಮಿಕ ಪಿಡುಗಿನ ವೇಳೆ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬೇಕೆಂದು ಸಾಮಾಜಿಕ ಪರಿವರ್ತನ ಜನಾಂದೋಲನಾ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಪಿ.ಅನೀಲ್ ಕುಮಾರ್ ಸರ್ಕಾರಕ್ಕೆ ಆಗ್ರಹಿಸಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿ, ಈ ಸಾಂಕ್ರಮಿಕ ರೋಗದಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತೆ ಆಗಿದೆ. ಆದಾಯವಿಲ್ಲದೆ ಬದುಕು ಮೂರಾಬಟ್ಟಿಯಾಗಿದೆ. ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು ಸ್ಲಂ ನಿವಾಸಿಗಳು ಮತ್ತು ಕೃಷಿ ಕಾರ್ಮಿಕರ ಪರಿಸ್ಥಿತಿ ನೋಡದಂತಾಗಿದೆ. ಇದರ ಪರಿಣಾಮ ಮಕ್ಕಳ ಮೇಲೆ ಬೀರಿದೆ ಎಂದು ಹೇಳಿದರು. ಅಂಗನವಾಡಿಗಳು ಮುಚ್ಚಿದ್ದರಿಂದ ಹಸಿವು ಮತ್ತು ಅಪೌಷ್ಟಿಕತೆ ಕಿತ್ತು ತಿನ್ನುತ್ತಿದೆ. 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ದೊರೆಯುತ್ತಿದ್ದ ಕ ಪೌಷ್ಟಿಕ ಆಹಾರ, ಹಾಲು,ಮೊಟ್ಟೆಗೆ ಕತ್ತರಿಬಿದ್ದಿದೆ. ಇದರಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಹೆಚ್ಚಾಗುತ್ತಿದ್ದಾರೆ. ಬಾಣಂತಿಯರು, ಗರ್ಭೀಣಿಯರು ಮತ್ತು ಕಿಶೋರಿಯರು ಕೂಡ ಅಂಗನವಾಡಿಗಳಿಂದ ವಂಚಿತರಾಗಿದ್ದಾರೆ. ಕೂಡಲೇ ಈ ಕುರಿತು ಕ್ರಮ ಕೈಗೊಂಡು ಸರ್ಕಾರ ಅಂಗನವಾಡಿಗಳನ್ನು…
Read Moreಅರಿವಿನ ಅಂಬರ ಅಂಬೇಡ್ಕರ್ ಗಜಲ್ ಕೃತಿ ಲೋಕಾರ್ಪಣೆ..!
ರಾಯಚೂರು: ಯುವ ಗಜಲ್ ಕವಿ ಈರಣ್ಣ ಬೆಂಗಾಲಿ ಅವರ ಅರಿವಿನ ಅಂಬರ ಅಂಬೇಡ್ಕರ್ ಗಜಲ್ ಕೃತಿಯನ್ನು ಡಿ.12ರಂದು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ತಾಲೂಕು ಕಸಾಪ ಅಧ್ಯಕ್ಷರಾದ ಮಲ್ಲಿಕಾರ್ಜುನ ಶಿಖರಮಠ ಅವರು ಹೇಳಿದರು. ಅವರಿಂದು ಸುದ್ದಿಗರೊಂದಿಗೆ ಮಾತನಾಡುತ್ತ,ಡಿ.12 ರಂದು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ 10.45 ಕ್ಕೆ ಯುವ ಗಜಲ್ ಕವಿ ಈರಣ್ಣ ಬೆಂಗಾಲಿ ಅವರ ಅರಿವಿನ ಅಂಬರ ಅಂಬೇಡ್ಕರ್ ಗಜಲ್ ಸಂಪುಟ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಅಮ್ಮಿಕೊಳ್ಳಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಸಭೆ ಸದಸ್ಯರಾದ ಸಾಜೀದ್ ಸಮೀರ್ ಉದ್ಘಾಟಿಸಲಿದ್ದಾರೆ,ಕೃತಿ ಲೋಕಾರ್ಪಣೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಮುಮ್ತಾಜ್ ಬೇಗಂ ಅವರು ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್,ಪ್ರಜಕವಿ ಅಂಬಣ್ಣ ಆರೋಲಿ, ವೀರಹನುಮನ,ಕೃತಿ ಪರಿಚಯವನ್ನು ಕಸಾಪ ಸದಸ್ಯರಾದ ಡಾ.ಶರಭೇಂದ್ರ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಕಸಾಪ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಶಿಖರಮಠ,ಉಪಸ್ಥಿತಿಯನ್ನು ಕೃತಿ ಕರ್ತೃ ಈರಣ್ಣ…
Read Moreಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ವಿಳಂಭ- ಜಿಲ್ಲಾಡಳೀತ ವಿರುದ್ಧ ಪ್ರತಿಭಟನೆ..!
ರಾಯಚೂರು: ಜುರಾಲಾ ಡ್ಯಾಮ್ ಹಿನ್ನೀರಿನಿಂದ ಮುಳುಗಡೆಗೊಂಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಕಳೆದ 9 ವರ್ಷಗಳಿಂದ ನೆನಗುದಿಗೆ ಬಿದ್ದಿರುವುದಕ್ಕೆ ಲೋಕೋಪಯೋಗಿ ಮತ್ತು ಜಿಲ್ಲಾಡಳಿತ ಕಾರಣವಾಗಿದ್ದು ಇದರ ವಿರುದ್ಧ ನಾರದಗಡ್ಡೆಯಿಂದ ಜಿಲ್ಲಾಡಳಿತ ಕಛೇರಿಗೆ ಬೃಹತ್ ಪಾದಯಾತ್ರೆ ಮಾಡಿ ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಲಾಗುವುದೆಂದು ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ವಿರೇಶ ಕುಮಾರ ತಿಳಿಸಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿ, ಈ ಸೇತುವೆ ಕಾಮಗಾರಿಗೆ 1991ರಲ್ಲಿ ಜಿಲ್ಲಾಧಿಕಾರಿಗಳ ಖಾತೆಗೆ ಅಂದಾಜು 91ಕೋಟಿ ರೂಗಳ ಅನುದಾನ ಬಂದಿದೆ. ನಂತರ 2 ವರ್ಷಗಳ ಕಾಲ ಕಾಮಗಾರಿ ನಡೆಸಿ ಪಿಲ್ಲರ್ ಗಳನ್ನು ಮಾಡಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ. ಹಣವಿದ್ದು, ಭೂ ಸ್ವಾಧೀನದ ತೊಂದರೆ ಇಲ್ಲ ಆದಾಗ್ಯೂ ಕಾಮಗಾರಿ ನಿರ್ವಹಣೆ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಕುರುವಕಲ, ಕುರುವಕುರ್ದಾ, ಮಂಗಿಗಡ್ಡ, ರಾಮಗಡ್ಡ, ನಾರದಗಡ್ಡ ಈ ಐದು…
Read Moreಆಸ್ಟ್ರೇಲಿಯಾ ನೆಲದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ ಕೊಹ್ಲಿ..!
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶರವೇಗದಲ್ಲಿ ರನ್‌ಗಳಿಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿದ್ದಾರೆ.ಇದೀಗ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕಾಂಗರೂ ನಾಡಿನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ.ಆಸ್ಟ್ರೇಲಿಯಾ ನೆಲದಲ್ಲಿ ಮೂರು ಸಾವಿರ ರನ್‌ಗಳನ್ನು ದಾಖಲಿಸಿದ ಎರಡನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreರಾತ್ರೋರಾತ್ರಿ ಕಳ್ಳರ ಕೈಚಳಕ- ಸಿಂಧಗಿಯಲ್ಲಿ ಅಂಗಡಿಗಳಲ್ಲಿ ಸರಣಿ ಕಳ್ಳತನ..!
ಸಿಂಧಗಿಯಲ್ಲಿ ರಾತ್ರೋರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಒಂದೇ ರಾತ್ರಿ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿದ್ದಾರೆ. ಇನ್ನು ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಳಿಗೆಗಳಲ್ಲಿ ನಗದು ಸೇರಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಸಿಂಧಗಿ ಪಟ್ಟಣದ ಸಂಗೀತಾ ಮೊಬೈಲ್ ಶೋರೂಂನಲ್ಲಿ ಲಕ್ಷಾಂತರ ರೂ. ಮೌಲ್ಯದ ಮೊಬೈಲ್ಗನಳನ್ನು ಖದೀಮರು ದೋಚಿದ್ದಾರೆ. ಅಲ್ಲದೆ ಸಿದ್ದೇಶ್ವರ ಸೂಪರ್ ಬಾಜಾರ್, ಪೂಜಾರಿ ಟೈರ್ ರಿಮೊಡಿಂಗ್ ಶಾಫ್ ಹಾಗೂ ಸ್ಪೂರ್ತಿ ವೈನ್ ಶಾಫ್ ಗಳಲ್ಲಿಯೂ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞ ಮತ್ತು ಡಾಗ್ ಸ್ಕ್ವಾಡ್ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧಸಿಂದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ-ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂಧಗಿ
Read Moreಆರ್‌ಬಿಐನಿಂದ ಮತ್ತೊಂದು ಬ್ಯಾಂಕ್ ಪರವಾನಿಗೆ ರದ್ದು..!
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಬ್ಯಾಂಕ್ನ ಪರವಾನಿಗೆ ರದ್ದು ಪಡಿಸಿದ್ದು 99ರಷ್ಟು ಗ್ರಾಹಕರ ಠೇವಣಿ ವಾಪಸ್ ಸಿಗುವ ಭರವಸೆ ನೀಡಿದೆ. ಸಾಕಷ್ಟು ಬಂಡವಾಳ ಮತ್ತು ಗಳಿಸುವ ನಿರೀಕ್ಷೆ ಇಲ್ಲದಿದ್ದರೂ ಆರ್ಥಿಕ ಚಟುವಟಿಕೆ ನಡೆಸುತ್ತಿದ್ದ ದಿ. ಕರಾಡ್ ಜನತಾ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ಆರ್‌ಬಿಐ ರದ್ದುಪಡಿಸಿದೆ. ಅಲ್ಲದೆ ಎಲ್ಲ ವ್ಯವಹಾರಗಳನ್ನು ಕೊನೆಗೊಳಿಸುವಂತೆ ಸೂಚನೆ ನೀಡಿದೆ. ಮಹಾರಾಷ್ಟ್ರದ ಕರಾಡ್ ಮೂಲದ ಈ ಸಹಕಾರಿ ಬ್ಯಾಂಕ್ 1917ರಿಂದ ಸೇವೆ ಆರಂಭಿಸಿತ್ತು. ಪ್ರಸ್ತುತ ಸಂದರ್ಭದಲ್ಲಿ ಬ್ಯಾಂಕ್ ನಡೆಸಲು ಅಗತ್ಯ ಪ್ರಮಾಣದ ಬಂಡವಾಳದ ಕೊರತೆ ಎದುರಿಸುತ್ತಿತ್ತು. ಇದೀಗ ಬ್ಯಾಂಕ್ ಪರವಾನಗಿ ರದ್ದಾಗಿದ್ದು ಆತಂಕಗೊಂಡಿದ್ದ ಗ್ರಾಹಕರಿಗೆ ಆರ್‌ಬಿಐ ಭರವಸೆ ನೀಡಿದೆ. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreಡಿಸಿಎಂ ಕಾರ್ಯಕ್ರಮದಲ್ಲೇ ಮೃತಪಟ್ಟ ಬಿಜೆಪಿ ಕಾರ್ಯಕರ್ತ..!
ರಾಮನಗರ : ಡಿಸಿಎಂ ಅಶ್ವಥ್ನಾರಾಯಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಮಾಗಡಿ ತಾಲೂಕಿನಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತ ಶಿವರಜ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ವೇದಿಕೆ ಮೇಲೆಯೇ ಹೃದಯಾಘಾತವಾಗಿ ಮೇಲಿಂದಲೇ ಕುಸಿದು ಬಿದಿದ್ದಾರೆ. ತಕ್ಷಣವೇ ಶಿವರಾಜ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read More