ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬಿಆರ್ ಟಿಎಸ್ ಯೋಜನೆಯ ಅವ್ಯವಸ್ಥೆ..!

ಹುಬ್ಬಳ್ಳಿ: ಬಹು ನಿರೀಕ್ಷೆಯನ್ನು ಇಟ್ಟುಕೊಂಡು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಪ್ರಾರಂಭಿಸಿದ್ದ ಬಿಆರ್ ಟಿಎಸ್ ಯೋಜನೆಯಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾದಂತಾಗಿದೆ. ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟಿ ಕೋಟಿ ಖರ್ಚು ಮಾಡಿ, ತ್ವರಿತ ಬಸ್ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಿ.ಆರ್.ಟಿ.ಎಸ್.ನಿರ್ಮಾಣ ಮಾಡಲಾಗಿತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿಲ್ಲ. ಕೆಲವೊಂದು ಚಿಗರಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗಲಿ ಎನ್ನುವ ದೃಷ್ಟಿಯಿಂದ ಲಿಫ್ಟ್, ಮೇಲ್ಸೇತುವೆ, ಅಂಡರ್ ಪಾಸ್, ವ್ಯವಸ್ಥೆಯನ್ನು ಮಾಡಿದ್ದಾರೆ. ಆದರೆ ಅದು ಉಪಯೋಗ ಮಾತ್ರ ಶೂನ್ಯ. ಇದಕ್ಕಾಗಿಯೇ ಸಾವಿರಾರು ಕೋಟಿ ರೂ ಖರ್ಚು ಮಾಡಿದ್ದು ವ್ಯರ್ಥವಾಗುತ್ತಿರುವ ಆರೋಪ ಮೇಲಿಂದ ಮೇಲೆ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಬಿಆರ್ ಟಿಎಸ್ ಆಡಳಿತ ಮಂಡಳಿ ಅವುಗಳ ನಿರ್ವಹಣೆ ಸರಿಯಾಗಿ ಮಾಡದೇ ಇರುವುದರಿಂದ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದೆ.ಇನ್ನೂ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ, ಹಾಗೂ…

Read More

ಗ್ರಾಮದ ಸಮಸ್ಯೆಗಳನ್ನು ನಿವರಿಸುತ್ತೇನೆಂದು ಗ್ರಾಮಸ್ಥರಿಗೆ ಭರವಸೆ ಕೊಟ್ಟ ಬಿಜೆಪಿ ಅಭ್ಯರ್ಥಿ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಹೋರಾಟದಲ್ಲಿರುವ ಮನ್ನಾರ್ ಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ನಡೆಯುತ್ತಿದ್ದು. ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಫೈಟ್ ನಡೆಯುತ್ತಿದೆ. ಮನ್ನಾರ್ ಪುರ ಗ್ರಾಮದಲ್ಲಿ ಕುಂದು ಕೊರತೆಗಳು ಹೆಚ್ಚಾಗಿದ್ದು. ಅಲ್ಲಿಯ ಸ್ಥಳೀಯ ಬಿಜೆಪಿ ಪಕ್ಷದ ಅಭ್ಯರ್ಥಿ ಅಲ್ಲಿ ಹೆಚ್ಚು ಗಮನ ಹರಿಸುತ್ತಿರುವುದು ಕಂಡು ಬಂದಿದ್ದು,ಇನ್ನೂ ಬಿಜೆಪಿ ಅಭ್ಯರ್ಥಿ ಸುದ್ದಿಗಾರರೊಂದಿಗೆ ಮಾತನಾಡಿ ಮನ್ನಾರ್ ಪುರ ಗ್ರಾಮದಲ್ಲಿ ಬಹಳಷ್ಟು ಕುಂದುಕೊರತೆಗಳು ಹೆಚ್ಚಾಗಿದ್ದು, ಅದರಲ್ಲಿ ಪ್ರಮುಖವಾಗಿ ರೋಡಿನ ಸಮಸ್ಯೆ ಹಾಗೂ ಚರಂಡಿ ಸಮಸ್ಯೆಗಳು ಹೆಚ್ಚಾಗುತ್ತಿದೆ. ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ ಸುಧಾಕರ್ ಅವರು ಗ್ರಾಮದ ಸಮಸ್ಯೆಗಳನ್ನು ನಿಭಾಯಿಸಿದ್ದು, ಇದೀಗ ಅವರ ಮಾರ್ಗದರ್ಶನದಲ್ಲಿ ನಾನು ಕೂಡ ಗ್ರಾಮದ ಪ್ರತಿಯೊಂದು ಸಮಸ್ಯೆಗಳನ್ನು ನಿವಾರಣೆ ಮಾಡಲು ಮುಂದಾಗುತ್ತೇನೆ. ಇನ್ನೂ ಗ್ರಾಮಕ್ಕೆ ಕೆಲ ಕಾಮಗಾರಿಗಳನ್ನು ತಂದುಕೊಟ್ಟು ಗ್ರಾಮಸ್ಥರು ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತೇನೆ ಎಂದು ತಿಳಿಸಿದ್ದರು. ವರದಿ-ಶ್ರೀನಿವಾಸ್…

Read More

ದೇವಾಂಗ ಸಮಾಜದ ಅಭಿವೃದ್ದಿ ನಿಗಮ ಸ್ಥಾಪನೆಗೆ – ಕಾಶಿನಾಥ್ ಪೂಜಾರಿ ಆಗ್ರಹ..!

ಶಹಾಪುರ:ದೇವಾಂಗ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ,ಸಾಮಾಜಿಕವಾಗಿ, ಮೊದಲಿನಿಂದಲೂ ಹಿಂದುಳಿದ ಸಮಾಜವಾಗಿದೆ ಈ ಸಮಾಜ ಕಡುಬಡತನದಲ್ಲಿ ಬಂದಿದೆ ಆದ್ದರಿಂದ ಸಮಾಜದ ಏಳಿಗೆಗಾಗಿ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಗ್ರಾಮದ ಯುವ ಮುಖಂಡರಾದ ಕಾಶಿನಾಥ ಪೂಜಾರಿ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಕೊರೊನಾ ಸಂಕಷ್ಟಕ್ಕೊಳಗಾದ ದೇವಾಂಗ ಸಮಾಜದ ಕುಟುಂಬಗಳಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಅಲ್ಲದೆ ಹಳೆಯದಾದ ಕೈ ಮಗ್ಗ ಘಟಕಗಳಿಗೆ ಹೊಸ ಕಾಯಕಲ್ಪ ನೀಡಬೇಕು ಎಂದು ಒತ್ತಾಯಿಸಿದರು.ನೆರೆ ರಾಜ್ಯಗಳು ಈ ದೇವಾಂಗ ಸಮಾಜಕ್ಕೆ ಒತ್ತು ನೀಡಿದಷ್ಟು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ನೋವಿನಿಂದ ಹೇಳಿದರು.ಹೈದ್ರಾಬಾದ್ ಕರ್ನಾಟಕದ ಬಹುತೇಕ ದೇವಾಂಗ ಸಮಾಜದ ಬಡ ಕುಟುಂಬಗಳು ನೇಕಾರಿಕಾ ವೃತ್ತಿಯನ್ನು ಅವಲಂಬಿಸಿವೆ ವೃತ್ತಿಯಿಂದ ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ ಆದ್ದರಿಂದ ಸರ್ಕಾರ ನೀಡಬೇಕಾದ ಸವಲತ್ತುಗಳು ಬಹುಬೇಗನೆ ನೀಡಲಿ ಎಂಬುದೇ ನಮ್ಮ ಸದಾಶಯ. ಒಂದು ವೇಳೆ ನೀಡದಿದ್ದರೆ ಬೀದಿಗಿಳಿದು ಉಗ್ರವಾದ ಹೋರಾಟ…

Read More

ಗುಂಡು ತುಂಡುಗೆ ಮತ ಮಾರಿಕೊಳ್ಳಬೇಡಿ -ಸಿಪಿಐ ಉಮೇಶ್ ..!

ಮೊಳಕಾಲ್ಮುರು: ಮೊಳಕಾಲ್ಮುರು ತಾಲ್ಲೂಕಿನ ಪೊಲೀಸ್ ಅಧಿಕಾರಿಯಾದ ಸಿಪಿಐ ಉಮೇಶ್ ಅವರು ಎಸ್ಪಿ ರಾಧಿಕಾ ಅವರ ನಿರ್ದೇಶನ ಮೇರೆಗೆ ಇಂದು ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಹೋಗಿ ಪಥ ಸಂಚಲನ ಮೂಲಕ ಮತದಾನದ ಮಹತ್ವದ ಬಗ್ಗೆ ತಿಳಿಸಿದರು. ಯಾರಿಗೂ ಹೆದರದೆ ನಿಮ್ಮ ಅಭ್ಯರ್ಥಿಗೆ ಮತ ಚಲಾಯಿಸಿ,ಬುನಾದಿ ಬಿಗಿ ಇದ್ದರೆ ಮಾತ್ರ ಮನೆಯ ಕಟ್ಟಡ ಸರಿ ಇರುವುದು ಇದನ್ನು ಅರಿತು ಗುಂಡು-ತುಂಡು ಹಂಚುವ ಅಭ್ಯರ್ಥಿಯಿಂದಾ ದೂರವಿರಿ, ಹಿಂದಿನ ದಿನಗಳಲ್ಲಿ ಇದ್ದಂತಹರವರಿಗೆ ಮಾತ್ರ ಮತದಾನದ ಹಕ್ಕು ಇತ್ತು. ಇವತ್ತು ಡಾ.ಬಿ.ಆರ್ ಅಂಬೇಡ್ಕರ್,ಮಹಾತ್ಮಾ ಗಾಂಧೀಜಿ ಅವರ ಹೋರಾಟದ ಫಲ ಪ್ರತಿಯೊಬ್ಬ ನಾಗರಿಕನಿಗೂ ದೊರೆತಿದೆ. ಇದನ್ನು ಸದುಪಯೋಗ ಪಡೆಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು. ಇನ್ನೂಈ ಸಂದರ್ಭದಲ್ಲಿ ಪಿಎಸ್ಐ ಬಸವರಾಜ್,ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು. ವರದಿ- ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Read More

ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಸ್ಥಾನ ಖಾಯಂಗೊಳಿಸುವಂತೆ ಮಾತಿನ ಒತ್ತಾಯ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಹೊರವಲಯದಲ್ಲಿರುವ ಕಣಿತಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ನಂಜಪ್ಪ ನಿವೃತ್ತಿ ಹೊಂದಿದ ಬಳಿಕ ಅಲ್ಲಿ ಇರುವಂತಹ ಕಮಿಟಿ ಅಂಗಮಿ ಕಾರ್ಯದರ್ಶಿಯಾಗಿ ಮುನಿಕೃಷ್ಣ ಅವರನ್ನು ಆಯ್ಕೆ ಮಾಡಿದ್ದು. ಇದೀಗ ಸತತವಾಗಿ 10 ತಿಂಗಳು ಕಳೆದಿದೆ ಇದುವರೆಗೂ ಕಾಯಂ ಕಾರ್ಯದರ್ಶಿಯನ್ನಾಗಿ ಕಮಿಟಿಯು ನೇಮಕ ಮಾಡಿರುವುದಿಲ್ಲ, ಆದಕಾರಣ ಸರ್ವ ಸದಸ್ಯರ ಸಾಮಾನ್ಯ ಮಹಾಸಭೆಯಲ್ಲಿ ಸಹಕಾರ ಸಂಘದ ಲೋಪದೋಷಗಳು ಹಾಗೂ ಪದವೀಧರರನ್ನು ಕಾರ್ಯದರ್ಶಿಯಾಗಿ ಕಾಯಂಗೊಳಿಸುವ ಬಗ್ಗೆ ಸದಸ್ಯರಿಗೂ ಹಾಗೂ ಕಾರ್ಯಕಾರಿ ಮಂಡಳಿಯವರಿಗೆ ಮಾತಿನ ಚಕಮುಕಿ ಹಾಗೂ ವಾದ ವಿವಾದಗಳು ನಡೆಯಿತು. ತದನಂತರ ಸಭೆ ಪ್ರಾರಂಭವಾದ ಬಳಿಕ ಸದಸ್ಯರಿಂದ ಹಂಗಾಮಿ ಕಾರ್ಯದರ್ಶಿಗೆ ಹಾಗೂ ಮಂಡಳಿಗೆ ಬಹಳಷ್ಟು ಸಮಯ ತನಕ ಮಾತಿನ ಚಕಮಕಿ ನಡೆದಿದ್ದು, ತದನಂತರ ಎಲ್ಲಾ ಸದಸ್ಯರು ಸೇರಿ ಕಮಿಟಿಗೆ ಆದಷ್ಟು ಬೇಗನೆ ಕಾರ್ಯದರ್ಶಿ ಸ್ಥಾನಕ್ಕೆ ಪದವೀಧರರನ್ನು ಕಾಯಂಗೊಳಿಸಬೇಕು ಎಂ ದು ಎಚ್ಚರಿಕೆ ನೀಡಿದ್ದಾರೆ.…

Read More

ಮನೆಯಂಗಳದ ಮಾತುಕತೆ ತಿಂಗಳ ಅತಿಥಿಯಾಗಿ ಶಿವಣ್ಣ ಇಜೇರಿ..!

ಶಹಾಪುರ: ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮನೆಯಂಗಳದ ಮಾತುಕತೆ ತಿಂಗಳ ಅತಿಥಿಯಾಗಿ ನಗರದ ಹಿರಿಯ ಸಾಹಿತಿಗಳು ಹಾಗೂ ಶರಣ ಚಿಂತಕರಾದ ಶಿವಣ್ಣ ಇಜೇರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಸಿನ್ನೂರ ತಿಳಿಸಿದ್ದಾರೆ.ಶುಕ್ರವಾರ ಸಾಯಂಕಾಲ 6 ಗಂಟೆಗೆ ಕುಂಬಾರ ಓಣಿಯ ಶಿವಣ್ಣ ಇಜೇರಿ ಅವರ ಕಾಯಕ ನಿವಾಸದಲ್ಲಿ ಹಮ್ಮಿಕೊಂಡಿರುವ ಮನೆಯಂಗಳದ ಮಾತುಕತೆ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರ ಹಾಗೂ ಡಾ. ಗೋವಿಂದರಾಜ ಆಲ್ದಾಳ ಆಗಮಿಸಲಿದ್ದಾರೆಂದು ತಿಳಿಸಿದರು.ನಂತರ ಜರುಗುವ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ರವಿಂದ್ರನಾಥ ಹೊಸ್ಮನಿ,ಸಿ.ಎಸ್.ಭೀಮರಾಯ ಮಲ್ಲಿಕಾರ್ಜುನ್ ಅವಂಟಿ, ಪಂಚಾಕ್ಷರಿ ಹಿರೇಮಠ, ಭಾಗವಹಿಸಲಿದ್ದಾರೆ. ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Read More

ರುಚಿಯಾದ ಅಡುಗೆಗೆ ಈರುಳ್ಳಿ ಬದಲಿಗೆ ಏನೇನು ಬಳಸಬಹುದು ಗೊತ್ತ..?

ಒಂದು ಕಡೆ ಗಗನ ಏರುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಅದನ್ನು ಕತ್ತರಿಸುವುದಕ್ಕೆ ಮೊದಲೇ ಕಣ್ಣಿನಲ್ಲಿ ನೀರು ಬರುವ ಪರಿಸ್ಥಿತಿ ಉಂಟಾಗಿದೆ. ಇನ್ನು ಈರುಳ್ಳಿ ಹಾಕದೆ ಸಾರು ಅಥವಾ ಪಲ್ಯ ಮಾಡಿದರೆ ರುಚಿಸುವುದೇ ಇಲ್ಲ, ಇನ್ನು ಸಾರು, ಗ್ರೇವಿ ಈರುಳ್ಳಿ ಇಲ್ಲದೆ ಮಾಡುವುದೇ ಹೇಗೆ ಎಂಬುವುದೇ ಹೆಚ್ಚಿನವರ ಚಿಂತೆಯಾಗಿದೆ. ಇನ್ನು ಈರುಳ್ಳಿ , ಬೆಳ್ಳುಳ್ಳಿ ಹಾಕದೆ ಅಡುಗೆ ಮಾಡೋಣ ಅಂದರೆ ಈರುಳ್ಳಿ ರುಚಿ ನೋಡಿದವರಿಗೆ ಅಷ್ಟು ಇಷ್ಟವಾಗುವುದಿಲ್ಲ. ಅಡುಗೆಗೆ ಈರುಳ್ಳಿ ಹಾಕಿದರೆ ಅದರ ಸ್ವಾದವೇ ಬೇರೆ. ಟೊಮೆಟೊ ಗೊಜ್ಜು, ಪಲ್ಯ ಇವುಗಳು ರುಚಿಯಾಗಲು ಈರುಳ್ಳಿ ಬೇಕೇಬೇಕು. 1) ಗ್ರೇವಿ, ಸಾರುಗೆ ಮಾಡಲು ಈರುಳ್ಳಿ ಬದಲಿಗೆ ಗೋಡಂಬಿ ಕೂಡ ಅಧಿಕ ಬೆಲೆಯ ನಟ್ಸ್ ಆಗಿದ್ದರೂ ಹೀಗಿನ ಈರುಳ್ಳಿ ಬೆಲೆಗೆ ಹೋಲಿಸಿದರೆ ಗೋಡಂಬಿ ಬಳಸುವುದೇ ಸೂಕ್ತವಾಗಬಹುದು. ಒಂದು ಸಾರು ಮಾಡಲು ಕಡಿಮೆಯೆಂದರೂ ಸಾಧಾರಣ ಗಾತ್ರದ ಒಂದು ಈರುಳ್ಳಿ ಬೇಕು. ಅದೇ ಗ್ರೇವಿಯಾದರೆ ಈರುಳ್ಳಿ…

Read More

ಬೇವು ತಿನ್ನೊದ್ರಿಂದ ದೇಹಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ..!

ಬೇವು ತನ್ನ ವಿಶೇಷವಾದ ಔಷಧೀಯ ಗುಣಗಳಿಂದ ಪ್ರಾಚೀನ ಆಯುರ್ವೇದ ಪದ್ದತಿಯಿಂದ ಇಂದಿನವರೆಗೂ ಅನೇಕ ರೋಗ ರುಜಿನಗಳಿಗೆ , ಚರ್ಮದ ಸಮಸ್ಯೆಗಳಿಗೆ ಒಳ್ಳೆಯ ಔಷಧಿಯಾಗಿ ಬಳಸಲ್ಪಡುತ್ತದೆ. ಆದರೆ ಯಾವುದೇ ಪದಾರ್ಥಗಳನ್ನು ಅಷ್ಟೇ ದೇಹಕ್ಕೆ ಅತೀಯಾದರೆ ಅದರಿಂದ ನಾನಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಬೇವು ಕೂಡ ಹಾಗೇ ಇದರ ಅತಿಯಾದ ಸೇವನೆ ದೇಹಕ್ಕೆ ಕುಂದು ಕೊರತೆ ತರುವುದರಲ್ಲಿ ಎರಡನೇ ಮಾತಿಲ್ಲ.ಬೇವಿನ ಅತೀಯಾದ ಸೇವನೆಯಿಂದ ಯಾವೆಲ್ಲಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತದೆ. 1)ಅಲರ್ಜಿಗೆ ಕಾರಣವಾಗಬಹುದು- ಬೇವಿನ ಎಲೆಗಳನ್ನು ಪ್ರತಿ ದಿನ ಮೂರು ವಾರಗಳ ತನಕ ಬೆಡದೇ ಸೇವಿಸಿದರೆ ಬಾಯಿಯ ಊರಿಯೂತದ ಸಮಸ್ಯೆ ಕಂಡು ಬರುತ್ತದೆ. ಬೇವಿನ ಎಲೆಗಳನ್ನು ಅಲರ್ಜಿ, ಗುಳ್ಳೆಗಳು, ಮೊಡವೆಗಳು ಇತ್ಯಾದಿ ಸಮಸ್ಯೆಗಳಿಗೆ ಉಪಾಯೋಗಿಸುತ್ತಾರೆ. ಆದ್ರೆ ಇದರ ಹೆಚ್ಚಾದ ಬಳಕೆ ಸಮಸ್ಯೆಯನ್ನು ಹೋಗಾಲಾಡಿಸುವ ಬದಲು ಇನ್ನಷ್ಟು ಜಾಸ್ತಿ ಮಾಡುತ್ತದೆ.. 2)ಫಲವತ್ತತೆ ಕುಂಠಿತಗೊಳ್ಳ ಬಹುದು- ಫಲವತ್ತತೆಯ ವಿಷಯದಲ್ಲಿ ಸಂಶೋದಕರು ಬೇವಿನ…

Read More

ವಿಭಿನ್ನ ರೀತಿಯಲ್ಲಿ ರೈತ ದಿನಾಚರಣೆ ಆಚರಿಸಿದ ತಹಸೀಲ್ದಾರ್ ಕುಂಞ ಅಹಮ್ಮದ್..!

ನಾಗಮಂಗಲ:ರೈತರು ಕೃಷಿ ಚಟುವಟಿಕೆ ಮಾಡುತಿದ್ದ ಜಮೀನಿಗೆ ಖುದ್ದು ತೆರಳಿ ಅನ್ನದಾತರನ್ನು ಗೌರವಿಸುವ ಮೂಲಕ ತಹಸೀಲ್ದಾರ್ ಕುಂಞ ಅಹಮ್ಮದ್ ವಿಭಿನ್ನ ಮತ್ತು ಅರ್ಥಪೂರ್ಣವಾಗಿ ದೇಶದ ಬೆನ್ನೆಲುಬಾದ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂಬ ಸಂದೇಶದೊಂದಿಗೆ ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಿದರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮೈಲಾರಪಟ್ಟಣ ರಸ್ತೆಯ ಕೆಂದನಹಳ್ಳಿ ರೈತರು ತಮ್ಮ ಕುಟುಂಬಸ್ಥರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಹೊಲಕ್ಕೆ ತೆರಳಿದ ಕುಂಞ ಅಹಮ್ಮದ್ ರೈತರ ಕುಂದು ಕೊರತೆಯೊಂದಿಗೆ ಕುಶಲೋಪರಿ ವಿಚಾರಿಸಿ, ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿ ಪಡೆದರು. ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ರೈತರಿಗೆ ರೈತ ದಿನಾಚರಣೆಯ ಶುಭಾಶಯ ಕೋರಿ, ಶಾಲು ಹೊದಿಸಿ ಮಾಲಾರ್ಪಣೆಯೊಂದಿಗೆ ಹಣ್ಣಿನ ಬುಟ್ಟಿ ನೀಡುವ ಮೂಲಕ ಗೌರವಿಸಿದರು. ಇನ್ನೂ ಈ ಸಂದರ್ಭದಲ್ಲಿ ಸ್ಥಳೀಯ ರೈತರಾದ ಸುರೇಶ್ ಮತ್ತು ಕೃಷ್ಣೇಗೌಡ, ಗ್ರಾಮ ಲೆಕ್ಕಿಗ ಸಂತೋಷ್ ಹಾಗೂ ತಾಲೂಕು ಭೂಮಾಪಕ ರಾಘವೇಂದ್ರ, ಪೊಲೀಸ್ ಇಲಾಖೆಯ ರೇವಣ್ಣ ಇದ್ದರು.…

Read More

ಮಾನಪ್ಪ ವಜ್ಜಲ್ ಗೆ ಸನ್ಮಾನ ಮಾಡಿದ ಮುದುಕಪ್ಪ ವಕೀಲರ- ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಪಕ್ಷ ಸೇರ್ತಾರ ಮುದುಕಪ್ಪ..!

ಲಿಂಗಸೂಗೂರು: ಹಾಲುಮತ ಸಮಾಜದ ಪ್ರಭಾವಿ ಮುಖಂಡ ಮುದುಕಪ್ಪ ವಕೀಲರು ಇಂದು ಹಟ್ಟಿ ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಗೆ ಸನ್ಮಾನಿಸಿ ಶುಭಕೋರಿದರು. ಕಳೆದ ಎರಡು ಅವಧಿಗೆ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಅವರು ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ. ವಜ್ಜಲ್ ಅವರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿರುವ ವಜ್ಜಲ್ ಅವರು, ಜಾತಿ ರಾಜಕಾರಣ ಮಾಡದೇ ಎಲ್ಲಾ ವರ್ಗದವರಿಗೆ ಸರಿಸಮಾನವಾಗಿ ನಡೆದುಕೊಳ್ಳುವ ಜಾತ್ಯಾತೀತ ಮನೋಭಾವನೆ ಉಳ್ಳವರಾಗಿದ್ದಾರೆ. ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗುವ ಮೂಲಕ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗೆ ಮಾನಪ್ಪನವರು ಮುಂದಾಗಬೇಕು. ಇನ್ನೂ ದಶಕಗಳಿಂದ ಮಾನಪ್ಪ ವಜ್ಜಲ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮುದುಕಪ್ಪ ವಕೀಲರು ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿದ್ದು, ಇದೀಗ ಬಿಜೆಪಿಗೆ ಬರುವ ಮುನ್ಸೂಚನೆ ನೀಡುತ್ತಿದ್ದಾರೆಯೇ ಎನ್ನುವಂತಹ ವಾತಾವರಣ ಈ ಭೇಟಿಯಿಂದ ಸೃಷ್ಟಿಯಾಗಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ…

Read More