ಇಂಡಿ ತಾಲೂಕನ್ನು ಹಸಿರೀಕರಣ ಮಾಡಲು ಮುಂದಾದ ಶಾಸಕ ಯಶವಂತರಾಯಗೌಡ ಪಾಟೀಲ್..!

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಲೆಕ್ಕ ಶೀರ್ಷಿಕೆ 2020-21ನೇ ಸಾಲಿನ ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ಕಛೇರಿ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ್ ಭೂಮಿ ಪೂಜೆ ನೆರೆವೆರಿಸಿದರು. ಭವಿಷ್ಯದ ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ಉಪವಿಭಾಗ ಕಛೇರಿಗಳು ಹೊಂದಿದ್ದರೂ ಅರಣ್ಯ ಇಲಾಖೆಗೆ ಸ್ವಂತ ಗೂಡು ಇಲ್ಲ.ಆದರೆ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ಕಛೇರಿ ನಿರ್ಮಾಣಕ್ಕೆ ಅಂದಾಜು 35 ಲಕ್ಷ ರೂಪಾಯಿಗಳು ಬಿಡುಗಡೆಗೊಂಡು ಅರಣ್ಯ ಅಧಿಕಾರಿಗಳ ನೂತನ ಕಟ್ಟಡಕ್ಕೆ ಸ್ವಾಗತ ಮಾಡಿಕೊಂಡಂತಾಗಿದೆ.ತಾಲೂಕಿನಲ್ಲಿ ಅಭಿವೃದ್ದಿ ಪರ್ವವೇ ನಡಿದಿದೆ ಆದರೆ ಇನ್ನೂ ಕೆಲವು ಇಲಾಖೆಗಳು ಸ್ವಂತ ಸೂರಿಲ್ಲದೇ ಭಾಡಿಗೆ ಮನೆಯಲ್ಲಿ ಕಛೇರಿ ನಡೆಸುತ್ತಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ತಿಳಿಸಿದರು.ಇನ್ನೂ ಈ ಕಾರ್ಯಕ್ರಮ ದಲ್ಲಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು…

Read More

ದೇಹದ ದಣಿವು ನೀಗಿಸುವ ನೈಸರ್ಗಿಕ ಪಾನೀಯ…!

ಎಳನೀರು ಯಾರಿಗೆ ಗೊತ್ತಿಲ್ಲ ಹೇಳಿ ಹಲವರಿಗೆ ಎಳನೀರು ಪ್ರಿಯವಾದ ಪಾನಿಯವಾಗಿದೆ. ನಾಲಿಗೆ ರುಚಿಗೆ ಎಳನೀರು ನೈಸರ್ಗಿಕವಾಗಿ ತಾಜಾವಾಗಿ ಸಿಗುವ ಪಾನೀಯವಾಗಿದೆ. ಇಂದಿನ ದಿನಗಳಲ್ಲಿ ಸಿಗುವ ರೆಡಿಮೇಡ್ ಪಾನಿಯಗಳಿಗಿಂತ ಎಳನೀರು ಉತ್ತಮವಾದ ಅಂಶವನ್ನು ಹೊಂದಿರುವುದಾಗಿದೆ. ಪುರಾತನ ಕಾಲದಿಂದಲೂ ಬೇಡಿಕೆ ಹೆಚ್ಚಾಗಿಸಿ ಕೊಂಡಿರುವ ಈ ಪಾನೀಯ ಯಾವುದೇ ತಂಪು ಪಾನೀಯಗಳಿಗಿಂತಲೂ ತಾನೇನೂ ಕಮ್ಮಿ ಇಲ್ಲಾ ಎಂಬ ರೀತಿಯಲ್ಲಿ ತನ್ನ ವರ್ಚಸ್ಸ್ ಅನ್ನು ಕಾಪಾಡಿಕೊಂಡು ಬಂದಿದೆ. ಸಕ್ಕರೆ ಖನಿಜ ಮತ್ತು ಲವಣಾಂಶ ಅಧಿಕವಾಗಿದ್ದು ದೇಹದ ನಿಶಕ್ತಿಯನ್ನು ಹೋಗಲಾಡಿಸಲು ಇದು ಬಹಳ ಉಪಯುಕ್ತವಾಗಿದೆ.. ದೇಹದಲ್ಲಿ ನೀರಿನಂಶ ಕಡಿಮೆ ಇದ್ದರೆ ಹಾಗೂ, ತೀವ್ರ ನಿಶಕ್ತಿ ಸಮಸ್ಯೆಯಿಂದ ಬಳಲುವವರಿಗೆ ಈ ಪಾನೀಯ ಅಗತ್ಯವಾಗಿದೆ.ವಯಸ್ಸಾಗುವಿಕೆ, ಚರ್ಮಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ದೂರ ಮಾಡುವ ಅಂಶನ್ನು ಈ ಎಳನೀರು ಒಳಗೊಂಡಿದೆ. ಯೂರಿಕ್ ಆಮ್ಲಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗುವವರು ಹೆಚ್ಚಾಗಿ ಎಳನೀರು ಸೇವನೆ ಮಾಡುವುದು ಉತ್ತಮ. ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು, ಮೂತ್ರ…

Read More

ತೂಕ ಸಮತೋಲನಕ್ಕೆ ಬೇಕು ಏಲಕ್ಕಿ..!

ನಾವೆಲ್ಲರೂ ತೂಕ ಇಳಿಸಿಕೊಳ್ಳಬೇಕೆಂದು ಹಲವು ಹೊಸ- ಹೊಸ ತಯಾರಿ ಮಾಡುತ್ತಲೇ ಇರುತ್ತೇವೆ. ಆದ್ರೆ ಮನೆಯಲ್ಲೇ ಸಿಗುವ ಈ ಸಣ್ಣ ವಸ್ತುವಿನಿಂದ ನಮ್ಮ ದೇಹದ ತೂಕವನ್ನು ಬಲು ಬೇಗ ಕಡಿಮೆ ಮಾಡಬಹುದಂತೆ. ಹೌದು ಮನೆಯಲ್ಲೇ ಸಿಗುವ ಏಲಕ್ಕಿಯಿಂದ ನಾವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದಂತೆ. ಹಾಗಾದ್ರೆ ಈ ಏಲಕ್ಕಿಯಿಂದ ಯಾವೆಲ್ಲಾ ವಿಧಾನದಿಂದ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದು ಅನ್ನೊದನ್ನು ತೋರುಸ್ತೀವಿ. ಏಲಕ್ಕಿಯನ್ನು ಖೀರು, ಹಲ್ವಾ, ಪಲಾವ್ ನಂತಹ ಅನೇಕ ಖಾದ್ಯಗಳಿಗೆ ಬಳಸುವುದರಿಂದ ಪರಿಮಳವನ್ನು ನೀಡುತ್ತದೆ. ಹಸಿರು ಏಲಕ್ಕಿ ಸೇವಿಸಿದಲ್ಲಿ ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲಾರದು. ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ಮ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.ಆಯುರ್ವೇದದ ಪ್ರಕಾರ, ಹಸಿರು ಏಲಕ್ಕಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಸಹ ಸಹಾಯ ಮಾಡುತ್ತದೆ. ವಿಷಕಾರಿ ಅಂಶಗಳು ದೇಹದ ರಕ್ತದ ಹರಿವನ್ನುಅಡ್ಡಿ ಪಡಿಸುತ್ತದೆ ಮತ್ತು ನಮ್ಮ ಶಕ್ತಿಯ ಮಟ್ಟವನ್ನು…

Read More

ಕಾಂಗ್ರೆಸ್ ಪಕ್ಷದ ಸದಸ್ಯ ಪಡೆಯುವುದೇ ಒಂದು ದೊಡ್ಡ ಸಾಧನೆ- ಎಚ್ ಎನ್ ಬಡಿಗೇರ..!

ಸಿಂಧನೂರು: ಭಾರತಿಯ ಕಾಂಗ್ರೆಸ್ ಪಕ್ಷ ಸ್ವತಂತ್ರಕ್ಕಾಗಿ ನೂರಾರು ಸಾವಿರಾರು ಮುಖಂಡರು ಪ್ರಾಣತ್ಯಾಗ ಮಾಡಿದ್ದಾರೆ. ಪ್ರಜಾಪ್ರಭುತ್ವ ತಳದಲ್ಲಿ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಪಕ್ಷ ಕಾಂಗ್ರೆಸ್ ಪಕ್ಷದ ಸದಸ್ಯ ಪಡೆಯುವುದೇ ಒಂದು ದೊಡ್ಡ ಸಾಧನೆ ಎಚ್ ಎನ್ ಬಡಿಗೇರ ಮಾತನಾಡಿದರು. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ನಗರದ ಮಾಜಿ ಶಾಸಕರ ನಿವಾಸದಲ್ಲಿ 135ನೇ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ದಿನದ ಕಾರ್ಯಕ್ರಮವನ್ನು ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಪ್ರತಿಜ್ಞಾವಿಧಿ ಬೋಧಿಸಿದರು. ಈ ದೇಶ ಹಲವಾರು ರಾಜ್ಯ ಪಾಳೆಗಾರರನ್ನು ಹಾಳಿದ ದೇಶ, ಇದನ್ನು ಸುಲಿಗೆ ಮಾಡುವ ವ್ಯವಸ್ಥೆ ಇತು. ರಾಜ್ಯ ಒಳಗೊಂಡಿತೆ ಬ್ರಿಟಿಷ್ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಬ್ರಿಟಿಷ್ ವಿರುದ್ಧ ಮಹ ನಾಯಕ ಹೊರಟ ಮಾಡಿದರು. ಆದರೆ ಅವುಗಳು ಬಿಡಿಬಿಡಿಯಾಗಿಯಾಗಿದವು ನಂತರ ಕಾಂಗ್ರೆಸ್ ಪಕ್ಷ ರಚನೆಗೊಂಡು ಸ್ವತಂತ್ರ ಪಡೆಯಲು ಸಾಧ್ಯವಾಯಿತು ಎಂದರು. ಇನ್ನೂ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ…

Read More

ಭಂಡಾರೆಪ್ಪ ನಾಟೇಕಾರಗೆ ಸಮಾಜ ಸೇವಾ ಪ್ರಶಸ್ತಿ..!

ಶಹಾಪುರ: ನಗರದ ಸಮಾಜ ಸೇವಕರು, ಕೋಲಿ ಸಮಾಜದ ಯುವ ಮುಖಂಡರು ಹಾಗೂ ಡಿ. ಕೆ.ಶಿವಕುಮಾರ್ ಅಭಿಮಾನಿ ಬಳಗದ ರಾಜ್ಯ ಕಾರ್ಯದರ್ಶಿಗಳಾದ ಬಂಡಾರೆಪ್ಪ ನಾಟೇಕರ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸಂಗೀತೋತ್ಸವ ಹಾಗೂ ನಾಡಿನ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಶ್ರಿವಿದ್ಯಾ ಮಹಾಸಂಸ್ಥಾನ ವಿದ್ಯಾಪೀಠದ ಸಾಧ್ವಿಯೋಗಿನಿ ಮಾತಾಜಿ ಅವರು ವಹಿಸಿಕೊಂಡಿದ್ದರು,ಮುಖ್ಯ ಅತಿಥಿಗಳಾಗಿ ಖ್ಯಾತ ಹಿರಿಯ ಸಾಹಿತಿ ಸದಾಶಿವಯ್ಯ ಜರಗನಹಳ್ಳಿ,ಚಿಂತಕರಾದ ಗೋವಿಂದಹಳ್ಳಿ ಕೃಷ್ಣೇಗೌಡ, ಸಂಗೀತ ನಿರ್ದೇಶಕರಾದ ಬಿ. ಬಲರಾಮ್, ಡಾ.ಎಸ್.ಆರ್. ರೇಣುಕಾಪ್ರಸಾದ್, ಹಿರಿಯ ಧುರೀಣರಾದ ಡಾ.ಜೈಶಂಕರ್ ರೆಡ್ಡಿ,ಖ್ಯಾತ ರಾಷ್ಟ್ರೀಯ ಲೇಡಿಯ ಡ್ರಮ್ಮರ್ ಡಾ. ಪ್ರಿಯಾ ಆ್ಯಂಡ್ರೊ, ಚಲನಚಿತ್ರದ ಬಹುಭಾಷಾ ನಟಿಯರಾದ ಭೂಮಿಕಾ ಹಾಗೂ…

Read More

ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಮೂರು ದಿನ ನಿರ್ಬಂಧ..!

ಚಿಕ್ಕಬಳ್ಳಾಪುರ: ಡಿಸೆಂಬರ್ 30 ರಿಂದ ಜನವರಿ 2 ವರೆಗೆ ಮೂರು ದಿನಗಳ ಕಾಲ ನಂದಿಗಿರಿ ಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ಜಿಲ್ಲಾಧಿಕಾರಿ ಆರ್.ಲತಾ ಅವರು ಆದೇಶ ಹೊರಡಿಸಿದ್ದಾರೆ. ಹೊಸ ವರ್ಷ ಆಚರಣೆ ಹಿನ್ನಲೆಯಲ್ಲಿ ಪ್ರವಾಸಿಗರು ಹೆಚ್ವಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಪ್ರತಿ ವರ್ಷ ಹೊಸ ವರ್ಷಕ್ಕೆ ಒಂದು ದಿನದ ಮಟ್ಟಿಗೆ ನಂದಿಗಿರಿ ಧಾಮಕ್ಕೆ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮೂರು ದಿನಗಳ ಕಾಲ ನಂದಿಗಿರಿ ಧಾಮ ಪ್ರವೇಶವನ್ನು ಪ್ರವಾಸಿಗರಿಗೆ ನಿಷೇಧಿಸಿದೆ. ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Read More

ಉಪ್ಪಾರ ಹಳ್ಳಿಯಲ್ಲಿ ಸಂಭ್ರಮದ ಹನುಮ ಜಯಂತಿ ಆಚರಣೆ..!

ನಾಗಮಂಗಲ: ಕೊರೋನಾ ಮತ್ತು ಗ್ರಾಮ ಪಂಚಾಯ್ತಿಯ ಎರಡನೇ ಹಂತದ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆ ಹನುಮ ಜಯಂತಿ ಆಚರಣೆ ಕಳೆಗುಂದಿದರೂ, ಇದೆಲ್ಲದರ ನಡುವೆಯೂ ನಾಡಿನ ಧಾರ್ಮಿಕ ಆಚರಣೆಗಳ ಸಂಸ್ಕಂತಿ ಮತ್ತು ಸಂಸ್ಕಾರಗಳ ಪ್ರತೀಕವಾಗಿ ಸಕ್ಕರೆನಾಡು ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಹನುಮ ಜಯಂತೋತ್ಸವ ಆಚರಿಸಲಾಯಿತು. ಗ್ರಾಮದ ದೇವಾಲಯದ ಪ್ರಾಂಗಣ ಮಾತ್ರವಲ್ಲದೇ ಇಡೀ ಗ್ರಾಮದ ಬೀದಿಗಳನ್ನು ತಳಿರು-ತೋರಣಗಳಿಂದಲ್ಲದೆ ಬಣ್ಣ ಬಣ್ಣದ ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಸ್ವರ್ಣಲೇಪಿತ ಪಾಲಕ್ಕಿಯಲ್ಲಿರಿಸಲಾದ ಹನುಮಂತ ದೇವರ ಸರ್ವಾಲಂಕೃತ ಉತ್ಸವ ಮೂರ್ತಿಯನ್ನು ಮಂಗಳವಾದ್ಯ,ತಮಟೆಯ ನಾದ ಮತ್ತು ವೀರಗಾಸೆಯ ನೃತ್ಯ ಸೇರಿದಂತೆ ಹನುಮ ಮಾಲಧಾರಿಗಳಿಂದ ಭಜನೆಯಂತಹ ಗ್ರಾಮೀಣ ಸೋಗಡಿನ ಕಲಾಪ್ರಕಾರಗಳ ಪ್ರದರ್ಶನಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಬೀದಿಯುದ್ದಕ್ಕೂ ನಡೆದ ಪೂಜಾ ಕೈಂಕರ್ಯಗಳಿಗೆ ಜೈ ಶ್ರೀರಾಂ-ಜೈ ಜೈ ಶ್ರೀರಾಂ ಎಂಬ ಹರ್ಷೋದ್ಘಾರಗಳು ಮುಗಿಲು ಮುಟ್ಟುತ್ತಿದ್ದವು. ಹನುಮ ಧ್ವಜಗೊಂದಿಗೆ ಕೇಸರಿ ತೋರಣಗಳಿಂದ ದೇವಾಲಯವು ಅಯೋಧ್ಯೇಯ…

Read More

ಮತದಾರರಿಗೆ ಕುಕ್ಕರ್ ಆಮಿಷ- ತಹಶೀಲ್ದಾರ್ ರಾಜಶೇಖರ್ ನೇತೃತ್ವದಲ್ಲಿ ದಾಳಿ..!

ಮುಳಬಾಗಿಲು: ಕೋಲಾರದಲ್ಲಿ ಗ್ರಾ.ಪಂ 2 ನೇ ಹಂತದ ಚುನಾವಣೆಗೆ ಮತದಾನ ಮಾಡುವವರಿಗೆ ಹಂಚಲು ತಂದಿದ್ದ 48 ಕುಕ್ಕರ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ತಾಯಲೂರಿನಲ್ಲಿ ನಡೆದಿದೆ.ಇನ್ನೂ ಕುಕ್ಕರ್ ಹಂಚುತ್ತಿರುವ ಖಚಿತ ಮಾಹಿತಿ ಪಡೆದುಕೊಂಡು ತಹಶೀಲ್ದಾರ್ ರಾಜಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕೆ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು,ಮತದಾರರಿಗೆ ಆಮಿಷ ಒಡ್ಡುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದ್ರೂ ಇದಕ್ಕೆ ಕ್ಯಾರೆ ಅನ್ನದ ಅಭ್ಯರ್ಥಿಗಳು ಮಾತ್ರ ಮತದಾರರಿಗೆ, ಎಣ್ಣೆ, ಚಿನ್ನ, ಮಾಂಸದ ಆಮಿಷಗಳನ್ನು ಒಡ್ಡುತ್ತಲೆ ಇದ್ದಾರೆ. ವರದಿ- ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Read More

ಮೊಳಕಾಲ್ಮುರಿನಲ್ಲಿ ಶಾಂತಿಯುತವಾಗಿ ನಡೆದ ಮತದಾನ..!

ಮೊಳಕಾಲ್ಮುರ: ಮೊಳಕಾಲ್ಮುರು ತಾಲ್ಲೂಕಿನ ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ,ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ 311 ಸದಸ್ಯ ಸ್ಥಾನಗಳಿಗೆ ಶಾಂತಿಯುತ ಮತದಾನ ನಡೆಯಿತು. ಎಲ್ಲ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು,ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜರ್ ಬಳಸುತ್ತಾ ಕೋಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದರು. ಈ ಬಾರಿ ತಾಲ್ಲೂಕಿನಲ್ಲಿ ಒಟ್ಟಾರೆ 85.68% ನಷ್ಟು ಮತದಾನವಾಗಿದ್ದು, ತಾಲ್ಲೂಕಿನಾದ್ಯಂತ ಒಟ್ಟು 93ಸಾವಿರದ 124 ಮತದಾರರಿದ್ದು 80 ಸಾವಿರದ 945 ಜನ ಭಾನವಾರ ಮತದಾನ ಮಾಡಿದ್ದಾರೆ ಎಂದು ಪ್ರಾಥಮಿಕ ಹಂತದಲ್ಲಿ ತಿಳಿಸಿದ್ದಾರು. ರಾಂಪುರದಲ್ಲಿ ಕೂಡ್ಲೆಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಸಿದ್ದಯ್ಯನ ಕೋಟೆಯಲ್ಲಿ ಶ್ರೀ ಮಠದ ಬಸವಲಿಂಗ ಸ್ವಾಮೀಜಿ, ಬಿಜಿ ಕೆರೆಯಲ್ಲಿ ಜಿಲ್ಲಾಪಂ ಸದಸ್ಯ ಡಾ.ಯೋಗೇಶ್ ಬಾಬು ಇನ್ನು ಮುಂತಾದವರು ಮತ ಚಲಾಯಿಸಿದರು. ವರದಿ-ಸಿಎಂ ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು .

Read More

ಪ್ರತಿಭಾ ಪುರಸ್ಕಾರ ಪ್ರಶಸ್ತಿ ಹಾಗೂ ಕ್ಯಾಲೆಂಡರ್ ಬಿಡುಗಡೆ…!

ಮಳವಳ್ಳಿ: ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಸಮಾರಂಭ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಮಳವಳ್ಳಿ ಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 15 ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಸಮಾರಂಭದ ದಿವ್ಯ ಸಾನಿದ್ಯವನ್ನು ಡಿ.ಹಲಸಹಳ್ಳಿ ಗವಿಮಠದ ಷಡಕ್ಷರಿ ಸ್ಬಾಮಿಜೀ ವಹಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಇನ್ನೂ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್ ವಹಿಸಿದ್ದು, ಇನ್ನೂ ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಮಾಜಿ ಉಪಾಧ್ಯಕ್ಷ ಕುಂದೂರು ಜಗದೀಶ್, ಆನಂದ್, ಸುಗುಣ ರಮೇಶ್, ಚನ್ನಪ್ಪ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎ.ಬಿ ನಾಗರಾಜು, ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು. ವರದಿ-ಎ.ಎನ್…

Read More