ದೇಹದ ದಣಿವು ನೀಗಿಸುವ ನೈಸರ್ಗಿಕ ಪಾನೀಯ…!

ಎಳನೀರು ಯಾರಿಗೆ ಗೊತ್ತಿಲ್ಲ ಹೇಳಿ ಹಲವರಿಗೆ ಎಳನೀರು ಪ್ರಿಯವಾದ ಪಾನಿಯವಾಗಿದೆ. ನಾಲಿಗೆ ರುಚಿಗೆ ಎಳನೀರು ನೈಸರ್ಗಿಕವಾಗಿ ತಾಜಾವಾಗಿ ಸಿಗುವ ಪಾನೀಯವಾಗಿದೆ. ಇಂದಿನ ದಿನಗಳಲ್ಲಿ ಸಿಗುವ ರೆಡಿಮೇಡ್ ಪಾನಿಯಗಳಿಗಿಂತ ಎಳನೀರು ಉತ್ತಮವಾದ ಅಂಶವನ್ನು ಹೊಂದಿರುವುದಾಗಿದೆ. ಪುರಾತನ ಕಾಲದಿಂದಲೂ ಬೇಡಿಕೆ ಹೆಚ್ಚಾಗಿಸಿ ಕೊಂಡಿರುವ ಈ ಪಾನೀಯ ಯಾವುದೇ ತಂಪು ಪಾನೀಯಗಳಿಗಿಂತಲೂ ತಾನೇನೂ ಕಮ್ಮಿ ಇಲ್ಲಾ ಎಂಬ ರೀತಿಯಲ್ಲಿ ತನ್ನ ವರ್ಚಸ್ಸ್ ಅನ್ನು ಕಾಪಾಡಿಕೊಂಡು ಬಂದಿದೆ. ಸಕ್ಕರೆ ಖನಿಜ ಮತ್ತು ಲವಣಾಂಶ ಅಧಿಕವಾಗಿದ್ದು ದೇಹದ ನಿಶಕ್ತಿಯನ್ನು ಹೋಗಲಾಡಿಸಲು ಇದು ಬಹಳ ಉಪಯುಕ್ತವಾಗಿದೆ.. ದೇಹದಲ್ಲಿ ನೀರಿನಂಶ ಕಡಿಮೆ ಇದ್ದರೆ ಹಾಗೂ, ತೀವ್ರ ನಿಶಕ್ತಿ ಸಮಸ್ಯೆಯಿಂದ ಬಳಲುವವರಿಗೆ ಈ ಪಾನೀಯ ಅಗತ್ಯವಾಗಿದೆ.ವಯಸ್ಸಾಗುವಿಕೆ, ಚರ್ಮಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ದೂರ ಮಾಡುವ ಅಂಶನ್ನು ಈ ಎಳನೀರು ಒಳಗೊಂಡಿದೆ. ಯೂರಿಕ್ ಆಮ್ಲಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗುವವರು ಹೆಚ್ಚಾಗಿ ಎಳನೀರು ಸೇವನೆ ಮಾಡುವುದು ಉತ್ತಮ. ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು, ಮೂತ್ರ ಪಿಂಡಕ್ಕೆ ಕಾರಣವಾಗುವ ಲವಣಾಂಶ ಕರಗಿಸುತ್ತದೆ. ಊಟವಾದ ನಂತರ ಎಳನೀರು ಕುಡಿದರೆ ಊಟದ ನಂತರ ಹೊಟ್ಟೆಯಲ್ಲಿ ಉರಿ ಉಂಟಾದಾಗ ಎಳನೀರು ಕುಡಿಯುವುದರಿಂದ ತಕ್ಷಣದಲ್ಲಿ ಆರಾಮ ಸಿಗುತ್ತದೆ. ಕಲ್ಲುಸಕ್ಕರೆ ಮತ್ತು ಎಲಕ್ಕಿ ಚೂರ್ಣ ಸೇರಿಸಿ ದಿನಕ್ಕೊಂದು ಬಾರಿ ಸೇವಿಸುತ್ತಿದ್ದರೆ ಎದೆನೋವು, ಬಿಕ್ಕಳಿಕೆ, ನಿದ್ರಾಹೀನತೆ, ಹೊಟ್ಟೆ ಹುಣ್ಣು ನಿವಾರಣೆಯಾಗುತ್ತದೆ. ಮಲಗುವ ಮೊದಲು ನೀವು ಎಳೆನೀರು ಕುಡಿದರೆ ಅದರಿಂದ ದೇಹದಲ್ಲಿ ಇರುವ ಎಲ್ಲಾ ವಿಷಕಾರಿ ಅಂಶವನ್ನು ಹೊರ ಹಾಕುವುದರೊಂದಿಗೆ ಮೂತ್ರಕೋಶವನ್ನು ಶುದ್ಧೀಕರಿಸುತ್ತದೆ. ರೋಗಗಳಿಗೆ ರಾಮಬಾಣವಾದ ಔಷಧೀಯ ಅಂಶವೂ ಎಳನೀರಿನಲ್ಲಿರುವುದರಿಂದ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ಒಂದು ಎಳನೀರನ್ನಾದರೂ ಕುಡಿಯುವ ಅಭ್ಯಾಸವನ್ನು ಇರಿಸಿಕೊಳ್ಳ ಬೇಕು ಆಗ ಮಾತ್ರ ಆರೋಗ್ಯವನ್ನು ವೃದ್ಧಿಸಿ ಕೊಳ್ಳಬಹುದು.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment