ಇಂಡಿ: ತೊಗರಿ ರಾಶಿ ಮಾಡುವ ವೇಳೆ ಆಯತಪ್ಪಿ ತೊಗರಿ ಮಷೀನ್ ನಲ್ಲಿ ಸಿಲುಕಿಕೊಂಡು 36 ವರ್ಷದ ಸುಜಾತ ಅಮಸಿದ್ಧ ಬಗಲಿ ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಕ್ಕಬೇವನೂರ ಗ್ರಾಮದಲ್ಲಿ ನಡೆದಿದೆ. ಇನ್ನೂ ಸುಜಾತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ
Read MoreDay: January 7, 2021
ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ಗುಡುಗಿದ ಬಿಜೆಪಿ ಅಧ್ಯಕ್ಷ ಪವನ್ ಕುಮಾರ್..!
ಕೊರಟಗೆರೆ: ಕೊರಟಗೆರೆ ತಾಲ್ಲೂಕಿನ ವೀರಾ ನಾಗಮ್ಮ ಕಲ್ಯಾಣ ಮಂಟಪದಲ್ಲಿ ಇಂದು ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ತಾಲ್ಲೂಕು ಅಧ್ಯಕ್ಷ ಪವನಕುಮಾರ್ ‘ವಿಚಾರ ತಿಳಿಯದೇ ಒಬ್ಬ ಕ್ಲಾಸ್ ಓನ್ ಕಂಟ್ರಾಕ್ಟರ್ ಭಾರತೀಯ ಜನತಾ ಪಾರ್ಟಿ ಪಕ್ಷ, ವಾಮಾಮಾರ್ಗ ಅನುಸರಿಸುತ್ತಿದೇ ಎಂದು ಸಭಾಷ್ ಗಿರಿಗಾಗಿ ಮಾತನಾಡುವುದು ಸರಿಯಲ್ಲ ಎಂದು ಗುಡುಗಿದರು. ತದನಂತರ ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ ಮಾತನಾಡಿ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ, ತಾಲ್ಲೂಕಿನಲ್ಲಿ ಭ್ರಷ್ಟಚಾರ ತುಂಬಿದೆ, ಅದರ ಬಗ್ಗೆ ಚರ್ಚೆ ಮಾಡಬೇಕಾದವರು ಆಮಿಷಗಳ ಆರೋಪ ಮಾಡಿಕೊಂಡು ಶೋಕಿ ರಾಜಕಾರಣ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಗುಡುಗಿದರು. ಇನ್ನೂ ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಕುಮಾರ್, ತಿಮ್ಮಜ್ಜ, ವಿಜಯ್, ಪ್ರಸನ್ನ, ನಾಗರಾಜು, ಮಹೇಶ್, ದೊಡ್ಡಯ್ಯ, ಕಾತ್ಯಾಯಿನಿ, ಸುಶೀಲಮ್ಮ, ಗುರುದತ್ತ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ವರದಿ- ಕೆ.ಎನ್ ದೇವರಾಜ್ ಎಕ್ಸ್ ಪ್ರೆಸ್ ಟವಿ…
Read Moreಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಎಂಎಲ್ಎ ತಿಪ್ಪೇಸ್ವಾಮಿ..!
ಮೊಳಕಾಲ್ಮುರು: ಮೊಳಕಾಲ್ಮುರು ಪಟ್ಟಣದ ಕೆ.ಇ.ಬಿ ವೃತ್ತದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಎಂಎಲ್ಎ ತಿಪ್ಪೇಸ್ವಾಮಿ ಸಚಿವರ ಕ್ಷೇತ್ರದಲ್ಲಿ ಬಿಜೆಪಿ ಅಲೆ ಇರುವುದು ಸತ್ಯಕ್ಕೆ ದೂರವಾದ ಮಾತು .ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇಕಡಾ 80 ರಷ್ಟು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಗೆದ್ದು ಬೀಗಿದ್ದಾರೆ. ಮೊಳಕಾಲ್ಮುರು ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ ಇದನ್ನು ಮುಂದಿನ ದಿನಗಳಲ್ಲಿ ,ಜಿಲ್ಲಾ ಪಂಚಾಯತ್ ,ತಾಲ್ಲೂಕು ಪಂಚಾಯಿತಿ,ಚುನಾವಣೆಯಲ್ಲಿ ಮತ್ತೆ ನಾವು ಸಾಬೀತು ಮಾಡುತ್ತೇವೆ. ಇಲ್ಲಿ 3 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ .ಇಲ್ಲಿ ನೀವು ಸಚಿವರಾಗಿದ್ದೀರಿ ನಿಮ್ಮದೇ ಸರ್ಕಾರ,ಮತ್ತೆ ಏಕೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಅವರಿಗೆ ಜನಪರ ಕಾಳಜಿ ಇಲ್ಲ ಅನ್ಯರೊಡನೆ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಜತೆ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಾಗಿ ಯುವ ಜನತೆ ವಿಜೇತರಾಗಿರುವುದು ಉತ್ತಮ ಬೆಳವಣಿಗೆ ಎಂದರು ಬಡ ಹಾಗೂ ಕೆಳವರ್ಗದ…
Read Moreಗ್ರಾಮೀಣ ಅಭಿವೃದ್ದಿಗೆ ಗ್ರಾ.ಪಂ ಸದಸ್ಯರ ಪಾತ್ರ ಬಹುಮುಖ್ಯ-ಡಾ.ಜಿ ಪರಮೇಶ್ವರ್..!
ಕೊರಟಗೆರೆ: ಹಗಲುರಾತ್ರಿ ಎನ್ನದೇ ಮಳೆ-ಚಳಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಸಾವಿರಾರು ರೈತರು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ.ಬಡಜನತೆ ಮತ್ತು ರೈತಾಪಿವರ್ಗದ ಪರವಾಗಿ ಕೆಲಸ ಮಾಡಬೇಕಾದ ನೀವು ಯಾರ ಪರವಾಗಿದ್ದೀರಾ ಹೇಳಿ, ಕಾರ್ಪೋರೆಟ್ ಕಂಪನಿ ಮತ್ತು ಶ್ರೀಮಂತರ ಪರವಾಗಿ ಮಾತ್ರ ನಿಮ್ಮ ಸರಕಾರ ಕೆಲಸ ಮಾಡುತ್ತಾ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹೊಳವನಹಳ್ಳಿ, ಚನ್ನರಾಯನದುರ್ಗ, ಕೋಳಾಲ, ಕಸಬಾ, ಪುರವಾರ ಮತ್ತು ಕೋರಾ ಹೋಬಳಿಯ 36 ಗ್ರಾಪಂ ವ್ಯಾಪ್ತಿಯ 425 ಕ್ಕೂ ಅಧಿಕ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರಿಗೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯ ಸರಕಾರದ ಹಣಕಾಸಿನ ಸ್ಥಿಗಿಗತಿಯ ಬಗ್ಗೆ ರಾಜ್ಯದ ಜನರಿಗೆ ತಿಳಿಸಿ ಮಾನ್ಯ ಮುಖ್ಯಮಂತ್ರಿಗಳೇ.ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆಯಾದ 200 ಕೋಟಿ ಅನುಧಾನ ಹಿಂದಕ್ಕೆ ಪಡೆಯುವ ರಾಜಕೀಯ ಹುನ್ನಾರವೇಕೆ, ಪ್ರವಾಹದಿಂದ ಜನರ ಪಾಡು ಹೇಳತೀರದಾಗಿದೆ.…
Read Moreಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಗೆ ಹೆಚ್. ಶರಿಫುದ್ದಿನ್ ನೇಮಕ..!
ಪೋತ್ನಾಳ್: ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯ ತಾಲೂಕು ನೂತನ ಅಧ್ಯಕ್ಷರಾಗಿ ಎಚ್.ಶರಿಫುದ್ದಿನ್ ಪೋತ್ನಾಳ್ ಅವರನ್ನು ಜಿಲ್ಲಾಧ್ಯಕ್ಷ ಪಂಪಯ್ಯ ಸ್ವಾಮಿ ಸಾಲಿಮಠ, ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ತಾಲೂಕಿನಾದ್ಯಂತ ಭಾವೈಕ್ಯಕ್ಕೆ ಸಂದೇಶ ಮೂಡಿಸುವ ಕಾರ್ಯಕ್ರಮ ಯೋಜನೆ ಹಾಗೂ ಘಟಕದ ಪದಾಧಿಕಾರಿಗಳ ನೇಮಕ ಸೇರಿ ಇನ್ನಿತರ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿ ಕೊಳ್ಳಬೇಕೆಂದು ಪಂಪಯಸ್ವಾಮಿ ಸಾಲಿಮಠ ಸೂಚಿಸಿದ್ದಾರೆ. ವರದಿ-ರಫಿ ಎಕ್ಸ್ ಪ್ರೆಸ್ ಟಿವಿ ಮಾನ್ವಿ
Read Moreಶಾಲೆ ಆರಂಭದ ಬೆನ್ನಲ್ಲೆ ನಾಲ್ಕು ಶಿಕ್ಷಕರಿಗೆ ಕೊರೊನಾ ಪಾಸಿಟಿವ್..!
ರಾಯಾಚೂರು: ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರಂಭದಲ್ಲಿ ಸರ್ಕಾರ ಜಿದ್ದಿಗೆ ಬಿದ್ದು, ಶಾಲೆ ಆರಂಭಿಸಿದೆ. ಪೋಷಕರ ವಿರೋಧದ ನಡುವೆಯು ವಿದ್ಯಾಗಮನ ತರಗತಿಗೆ ಅನುಮತಿ ನೀಡಲಾಗಿದ್ದು, ಜಿಲ್ಲಾ ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ಜಿಲ್ಲೆಯಲ್ಲಿ 4 ಶಿಕ್ಷಕರಿಗೆ ಸೋಂಕು ದೃಡಪಟ್ಟಿದೆ.ಚಾಗಬಾವಿ ಸೇರಿದಂತೆ ಜಿಲ್ಲೆಯಲ್ಲಿ 5 ಸೋಂಕಿನ ಪ್ರಕರಣ ಎಂದು ದಾಖಲಾತಿಯಲ್ಲಿ ನಮೂದಿಸಲಾಗಿದೆ. ಆದರೆ 4 ಶಿಕ್ಷಕರಿಗೆ ಮಾತ್ರ ಕೊರೋನಾ ಸೋಂಕು ದೃಡಪಟ್ಟಿದೆ.ದಾಖಲಾತಿಯಲ್ಲಿ ಐದು ಸೋಂಕು ಎಂದು ತೋರಿಸಿದ್ದಾರೆ. ಮಾಹಿತಿ ಇಲ್ಲದೇ ತಪ್ಪಾಗಿ ದಾಖಲಾತಿ ನಮೂದಿಸಿದ ಅಧಿಕಾರಿ ಯಾರು ಎಂಬುವುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ.ಬೇಜಾವಬ್ದಾರಿತನದಿಂದ ವರ್ತಿಸಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು,ಇನ್ನಾದರೂ ಗಂಭೀರತೆ ಅರ್ಥೈಸಿಕೊಂಡು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಕೋವಿಡ್ ನ್ನು ನಿಯಂತ್ರಣಕ್ಕೆ ತರುವ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ಪ್ರೆಸ್ ಟಿವಿ ರಾಯಚೂರು
Read Moreಅನ್ ಲೈನ್ ಜೂಜಾಟಕ್ಕೆ ಬಿದ್ದು ಬ್ಯಾಂಕಿನ ಹಣ ದುರುಪಯೋಗ- ವ್ಯವಸ್ಥಾಪಕ ಪರಾರಿ…!
ತಿಪಟೂರು: ನಗರದ ಹೆಚ್.ಡಿ.ಎಫ್.ಸಿ ಬ್ಯಾಂಕಿನ ವ್ಯವಸ್ಥಾಪಕ ಸುಮಾರು 29 ಲಕ್ಷ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ೦ದು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಬ್ಯಾಂಕಿನ ವ್ಯವಸ್ಥಾಪಕ ಆನ್ಲೈನ್ ಜೂಜಾದ ರಮ್ಮಿ ಸರ್ಕಲ್ಗೆ ಬಿದ್ದು ಬ್ಯಾಂಕಿನ ಹಣ ದುರುಪಯೋಗ ಪಡಿಸಿಕೊಂಡು ಈಗ ಊರು ಬಿಟ್ಟಿದ್ದಾನೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೆಚ್.ಡಿಎಫ್.ಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿದ್ದ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಚಿಕ್ಕಬಿದರೆಯ ಶಾಂತಕುಮಾರ್ ಬಿನ್ ಚಂದ್ರಣ್ಣ ಎಂಬಾತನು ಸಾಲದ ಬಾಬ್ತು ಜಮೆ ಮಾಡುವಂತೆ ಡಿಸೆಂಬರ್ 22ರಂದು 29 ಲಕ್ಷ ರೂಪಾಯಿಗಳನ್ನು ಬ್ಯಾಂಕ್ನ ವ್ಯವಸ್ಥಾಪಕರಿಗೆ ಕೊಟ್ಟಿರುತ್ತಾರೆ. ಆದರೆ ಡಿಸೆಂಬರ್ 24 ಆದರೂ ಖಾತೆಗೆ ಹಣ ವರ್ಗಾವಣೆಯಾಗದ ಬಗ್ಗೆ ಇಲ್ಲಸಲ್ಲದ ಕಾರಣ ಹೇಳಿದ ಮ್ಯಾನೇಜರ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಡಿಸೆಂಬರ್ 24ರಂದು ದೂರು ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕಿನ ಅನೇಕ ಗ್ರಾಹಕರು ಠಾಣೆ ಮುಂದೆ…
Read Moreಸೋನುಸೂದ್ ಮೇಲೆ ಕೇಸ್ ಹಾಕಿದ ಮುಂಬೈ ಪಾಲಿಕೆ.!
ಮುಂಬೈ: ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿ ರಿಯಲ್ ಹೀರೋ ಎನಿಸಿಕೊಂಡವರು ಬಾಲಿವುಡ್ ನಟ ಸೋನುಸೂದ್. ಆದರೆ ಅವರು ಕಾನೂನು ಪ್ರಕಾರ ನಡೆದು ಕೊಂಡಿಲ್ಲ ಎಂದು ಆರೋಪಿಸಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕೇಸ್ ಹಾಕಿದ್ದಾರೆ. ಅದಕ್ಕೀಗ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಸೋನು ಮುಂಬೈನಲ್ಲಿ ಕೆಲವು ಹೋಟೆಲ್ಗಳನ್ನು ಹೊಂದಿದ್ದಾರೆ. ಜುಹೂ ಪ್ರದೇಶದಲ್ಲಿ ಇರುವ ಜನವಸತಿ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ಹೋಟೆಲ್ ಆರಂಭಿಸಿದ್ದಾರೆ ಎಂದು ಸೋನು ಮೇಲೆ ಆರೋಪ ಎದುರಾಗಿದೆ. ಈ ಕಟ್ಟಡವು ಆರು ಮಹಡಿ ಹೊಂದಿದೆ. ಆದರೆ ಈ ಆರೋಪವನ್ನು ಸೋನು ಸೂದ್ ತಳ್ಳಿ ಹಾಕಿದ್ದು, ಈ ಹೋಟೆಲ್ ಆರಂಭಿಸಲು ತಾವು ಅಗತ್ಯವಿರುವ ಎಲ್ಲ ಇಲಾಖೆಗಳ ಅನುಮತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ಸೋನು ಸೂದ್ ತಳ್ಳಿ ಹಾಕಿದ್ದಾರೆ. ಈ ಹೋಟೆಲ್ ಆರಂಭಿಸಲು ತಾವು ಅಗತ್ಯವಿರುವ ಎಲ್ಲ ಇಲಾಖೆಗಳ…
Read Moreಐಷಾರಾಮಿ ಕಾರು ಖರೀದಿಸಿದ ಕಿರಿಕ್ ಬೆಡಗಿ..!
ಬೆಂಗಳೂರು: ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಕಳೆದ ಕೆಲ ದಿನಗಳಿಂದ ಒಂದಲ್ಲ ಒಂದು ವಿಚಾರಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುತ್ತಲೇ ಇದ್ದಾರೆ. ಗೂಗಲ್ನಿಂದ ‘ನ್ಯಾಷನಲ್ ಕ್ರಶ್’ ಎನಿಸಿಕೊಂಡ ಮೇಲೆ ಹಿಂದಿ ಚಿತ್ರರಂಗಕ್ಕೂ ರಶ್ಮಿಕಾ ಕಾಲಿಟ್ಟಿದ್ದರು. ಆ ಮೂಲಕ ದೊಡ್ಡ ಸದ್ದು ಮಾಡಿದ್ದರು.ಇದೀಗ ಹೊಸದೊಂದು ಐಷಾರಾಮಿ ಕಾರು ಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಈ ಕೊಡಗಿನ ಸುಂದರಿ.ತಮ್ಮ ಹೊಸ ರೇಂಜ್ ರೋವರ್ ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಇಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreಕಾಲುವೆಯಲ್ಲಿ ಈಜಲು ಹೋದ ನೇಪಾಳ ಯುವಕ ನೀರುಪಾಲು.!
ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೊನ್ನಳ್ಳಿ ಗ್ರಾಮದ ಹತ್ತಿರ ಕಾಲುವೆಯಲ್ಲಿ ಈಜಾಡಲು ಹೋದ ಯುವಕ ನೀರಿನಲ್ಲಿ ಕಾಣೆಯಾಗಿದ್ದಾನೆ. ಕಾಣೆಯಾದ ಯುವಕನನ್ನು ಪತ್ತೆಮಾಡಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಹೊನ್ನಳ್ಳಿ ಗ್ರಾಮದ ಜನರು ಬೆಳಗ್ಗೆಯಿಂದ ಹುಡುಕಾಟ ಮಾಡುತ್ತಿದ್ದರೂ ಯುವಕ ಪತ್ತೆಯಾಗಿಲ್ಲ. ನೇಪಾಳ ಮೂಲದ 28 ವರ್ಷದ ಶಿವ ಎಂಬಾ ಯುವಕ ಹೊನ್ನಳ್ಳಿ ಗ್ರಾಮದಲ್ಲಿ ಇರುವ ತನ್ನ ಗೆಳೆಯನ ಮದುವೆಗೆ ಬೆಂಗಳೂರುನಿಂದ ಬಂದಿದ್ದ. ಗೆಳೆಯರ ಜೊತೆ ಈಜಾಡಲು ಕಾಲುವೆಗೆ ತೆರಳಿದ್ದು, ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಈ ಹಿಂದೆ ಕಳೆದ 8 ದಿನಗಳ ಹಿಂದೆ ತಾಲೂಕಿನ ಕಾಳಾಪೂರ ಗ್ರಾಮದ ಬಾಲಕ ಬಸವರಾಜ ತಾಯಿ ಜೊತೆ ಬಟ್ಟೆ ತೊಳೆಯಲು ಇದೇ ಕಾಲುವೆಗೆ ಹೋಗಿದ್ದ. ಆಯಾ ತಪ್ಪಿ ನಾರಾಯಣಪುರ ಬಲದಂಡೆ ಕಾಲುವೆಗೆ ಬಿದ್ದು, ಪೂಲಭಾವಿ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆದ್ರೆ ಇದೀಗ ಒಂದೇ ವಾರದಲ್ಲಿ ಮತ್ತೊಬ್ಬ ಕಾಲುವೆಗೆ ಬಿದ್ದು ಕಾಣಿಯಾಗಿರುವ…
Read More