71 ಕೇಂದ್ರದಲ್ಲಿ ಕೊರೊನಾ ಲಸಿಕೆ ಡ್ರೈರನ್ ಪರಿಶೀಲನೆ- ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್..!

ರಾಯಚೂರು: ಕೊರೊನಾ ಲಸಿಕೆ ಡ್ರೈರನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 71 ಕೇಂದ್ರಗಳಲ್ಲಿ ಲಸಿಕೆ ಡ್ರೈರನ್ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಆರ್ ವೆಂಕಟೇಶ್ ಕುಮಾರ ತಿಳಿಸಿದ್ದಾರೆ. ಇಂದು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಡ್ರೈರನ್ ಪೂರ್ವ ಸಿದ್ಧತೆಯನ್ನು ಪರಿಶೀಲನೆ ಮಾಡಿ ನಂತರ ಮಾತನಾಡಿದ ಅವರು ಇಂದು ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಡ್ರೈರನ್ ಮಾಡಲು ಸಿದ್ಧತೆಯನ್ನು ಮಾಡಲಾಗಿದೆ.ಒಂದು ಕೇಂದ್ರದಲ್ಲಿ ಕನಿಷ್ಠ 25 ಜನಕ್ಕೆ ಲಸಿಕೆ ಡ್ರೈರನ್ ಮಾಡಬೇಕಾಗುತ್ತದೆ. ಇದನ್ನು ಮಾಡಿದರೆ ವ್ಯಾಕ್ಸಿನ್ ಬಂದಾಗ ನಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ಜಿಲ್ಲೆಯಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ತೆಗೆದುಕೊಳ್ಳಗಿದೆ. ಒಂದು ಕೇಂದ್ರದಲ್ಲಿ 5 ಜನ ಅಧಿಕಾರಿಗಳು ಇರುತ್ತಾರೆ, ಡ್ರೈರನ್ ಗೆ ಬರುವ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮತ್ತು ಇನ್ನಿತರ ದಾಖಲಾತಿಯನ್ನು ಕಡ್ಡಾಯವಾಗಿ ತರಬೇಕು. ಇದು 14500 ಜನರಿಗೆ ಅನುಕೂಲವಾಗಲಿದೆ. ನಮ್ಮಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ವೈದ್ಯರು ಸೇರಿದಂತೆ ಗ್ರೂಪ್ ಡಿ ಸಿಬ್ಬಂದಿಗಳು…

Read More

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ..!

ಕವಿತಾಳ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ 9 ನೇ ವಾರ್ಡ್ ಸಮಸ್ಸೆಗಳ ಅಗರವಾಗಿದೆ. ಸಾರ್ವಜನಿಕರು ತಿರಗಾಡುವುದಕ್ಕೂ ಆಗದ ಪರಿಸ್ಥೀತಿ ಈ ವಾರ್ಡ್ ನಲ್ಲಿ ನಿರ್ಮಾಣವಾಗಿದೆ. ಕಾರಣ ಊರ ಮಧ್ಯೆ ಹಾಕಿರುವ ಕಸದ ರಾಶಿ,ದುರ್ವಾಸನೆ ಬಿರುವುದು ಒಂದು ಕಡೆಯಾದರೆ ಮೂಕ ಪ್ರಾಣಿಗಳ ರೋಧನೆ ಹೇಳತೀರದಾಗಿದೆ. ಹಲವು ಬಾರಿ ಇಲ್ಲಿರುವ ಧನಕರುಗಳು ಸೇರಿದಂತೆ ಮೂಕಪ್ರಾಣಿಗಳು ತಿಪ್ಪೆಯಲ್ಲಿ ಬಿದ್ದಿರುವ ಪ್ಲ್ಯಾಸ್ಟಿಕ್ ತಿಂದು ಅನಾರೋಗ್ಯಕ್ಕೆ ಈಡಾಗುತ್ತಿದ್ದು, ಚರಂಡಿಗಳಲ್ಲಿ ಕೊಳಚೆ ನೀರು ತುಂಬಿ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಹಲವಾರು ಭಯಾನಕ ರೋಗಗಳಿಗೆ ಆಹ್ವಾನಿಸುತ್ತಿವೆ.ಈ ವಿಷಯವಾಗಿ ಹಲವಾರು ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ, ಇನ್ನು ಜನಪ್ರತಿನಿಧಿಗಳಂತು ಇದರ ಗೋಜಿಗೆ ಹೋಗುತ್ತಿಲ್ಲ. ಒಟ್ಟಾರೆ ಅಧಿಕಾರಿಗಳ ಜಾಣ ಕುರುಡುತನ ಪ್ರದರ್ಶನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೇತ್ತು ಕಸ ವಿಲೇವಾರಿ ಮಾಡುವ ಕೆಲಸಕ್ಕೆ ಮುಂದಾಗುತ್ತಾರಾ ಕಾದೂ ನೋಡಬೇಕಾಗಿದೆ. ವರದಿ-ಸುಲ್ತಾನ್ ಬಾಬ…

Read More

ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಬೆಂಬಲಿಸಿ ಸಿಐಟಿಯು ಪ್ರತಿಭಟನೆ..!

ರಾಯಾಚೂರು: ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಸಿಂಧನೂರು ಸಿಐಟಿಯು ತಾಲೂಕು ಸಮಿತಿ ವತಿಯಿಂದ ರೈತರ ಮರಣ ಶಾಸನವಾದ ಮೂರು ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಸಿಂಧನೂರು ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಿಐಟಿಯು ತಾಲೂಕು ಕಾರ್ಯದರ್ಶಿ ಶೇಕ್ಷಾ ಖಾದ್ರಿ ಅವರು ಕೇಂದ್ರ ಸರ್ಕಾರ ರೈತರ ಬಗ್ಗೆ ನಿಷ್ಕಾಳಜಿಯನ್ನು ತೋರುತ್ತಿದೆ. ರೈತು 28 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ 60 ಜನ ರೈತರು ಮೃತಪಟ್ಟಿದ್ದಾರೆ. ಆದರೂ ಯಾವುದೇ ರೀತಿಯಾಗಿ ಮೋದಿ ಸರ್ಕಾರ ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ, ನಿಜಕ್ಕೂ ಇದು ದುರಾಡಳಿತವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Read More

ಈಜು ಕೊಳದ ಮಧ್ಯದಲ್ಲಿ ಮಂಟಪ ನಿರ್ಮಾಣ – ಡಿಫರೆಂಟ್ ಆಗಿ ಮದುವೆ ಆಗಲು ರೆಡಿಯಾದ ಲವ್ ಮಾಕ್ಟೈಲ್ ಜೋಡಿ..!

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕಳೆದ ಐದಾರು ತಿಂಗಳಿನಿಂದ ಒಂದಾದ ಮೇಲೆ ಒಂದರಂತೆ ಭರ್ಜರಿಯಾಗಿ ಮದುವೆ ಸಮಾರಂಭ ನಡೆಯುತ್ತಿದ್ದು, ಕೆಲ ಸ್ಟಾರ್ ನಟ-ನಟಿಯರು ಸೇರಿದಂತೆ ಕಿರುತೆರೆ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರಂತಯೇ ಸ್ಯಾಂಡಲ್ ವುಡ್ ನಲ್ಲಿ 2021 ರ ವರ್ಷದ ಮೊದಲ ಮದುವೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರದ್ದು, ಈ ಜೋಡಿ 2021 ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಈಗಾಗಲೇ ಮದುವೆ ತಯಾರಿ ಕೂಡ ಭರ್ಜರಿಯಾಗಿ ನಡೆಯುತ್ತಿದೆ.ವಿಶೇಷ ರೀತಿಯಲ್ಲಿ ಮದುವೆಯಾಗಲು ಈ ಜೊಡಿ ನಿರ್ಧರಿಸಿದ್ದು, ಫೆಬ್ರವರಿ 14ರ ಬೆಳ್ಳಂಬೆಳಗ್ಗೆಯೇ ಮುಹೂರ್ತವಿರುತ್ತದೆ. ಸಂಜೆ ಆರತಕ್ಷತೆ ಕಾರ್ಯಕ್ರಮವಿರುತ್ತದೆ. ಮಿಲನಾ ಈಜುಗಾರ್ತಿ, ಹೀಗಾಗಿ ಈಜುಕೊಳದ ಮಧ್ಯೆ ಮಂಟಪವಿರಲಿದೆಯಂತೆ. ಇನ್ನೂ ಮಿಲನ ನಾಗರಾಜ್ ಅವರಿಗೆ ಮದುವೆ ಪ್ರತಿಯೊಂದು ರೀತಿಯಲ್ಲೂ ತುಂಬ ವಿಶೇಷವಾಗಿರಬೇಕಂತೆ ಹಾಗಾಗಿ ಬಹಳ ವಿಶೇಷವಾಗಿ ಮದುವೆ ಆಗಲು ರೆಡಿಯಾಗುತ್ತಿದ್ದೇವೆ ಎಂದು ಡಾರ್ಲಿಂಗ್ ಕೃಷ್ಣ ತಮ್ಮ ಮದುವೆ…

Read More

ಮಾಲೂರಿನಲ್ಲಿ ಅಟ್ಟಹಾಸ ಮೆರೆದ ಚಿರತೆ- ದಾಳಿಗೆ ಎರಡು ಕುರಿ ಬಲಿ..!

ಮಾಲೂರು: ಚಿರತೆ ದಾಳಿಯಿಂದ ಎರಡು ಕುರಿ ಬಲಿಯಾಗಿರುವ ಘಟನೆ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.ಇಂದು ಮುಂಜಾನೆ 4 ಗಂಟೆ ಸುಮಾರಿಗೆ ದಾಳಿಯಾಗಿದ್ದು, ಪದೇಪದೇ ಕುರಿ ಹಾಗೂ ಹಸುಗಳ ಮೇಲೆ ಚಿರತೆ ದಾಳಿ ನಡೆಯುತ್ತಿತ್ತು.ಈ ಸಂಬಂಧ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಇಂದು ಚಿರತೆ ದಾಳಿಗೆ ಕುರಿಗಳು ಬಲಿಯಾಗಿವೆ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇನ್ನೂ ಸ್ಥಳಕ್ಕೆ ಮಾಲೂರು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ-ಮಾರುತೇಶ್ ಎಕ್ಸ್ ಪ್ರೆಸ್ ಟಿವಿ ಮಾಲೂರು

Read More

ಕುವೆಂಪು ದಿನಾಚರಣೆ ಹಾಗೂ ದಿನಶೀರ್ಷಿಕೆ ಬಿಡುಗಡೆ..!

ಮಳವಳ್ಳಿ: ವಿಶ್ವ ಮಾನವ ವಿಚಾರ ವೇದಿಕೆ ವತಿಯಿಂದ ಕುವೆಂಪುರವರ 116 ನೇ ವರ್ಷ ಜನ್ಮ ದಿನಾಚರಣೆ ಹಾಗೂ ದಿನ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮವನ್ನು ಮಳವಳ್ಳಿ ಪಟ್ಟಣದ ವಿಶ್ವ ಮಾನವ ವಿಚಾರ ವೇದಿಕೆ ಕಚೇರಿಯ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ರಾಧ ನಾಗರಾಜುರವರು ಉದ್ಘಾಟಿಸಿದರು.ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿರವರು ಮಾತನಾಡಿ ವಿಚಾರವಂತರ ನಡುವೆ ನಾವೆಲ್ಲ ಇದ್ದೇವೆ ಎನ್ನುವುದೇ ಸಮಾದಾನದ ಸಂಗತಿ,ವಿಚಾರವಂತರಿಗೆ ತೊಂದರೆ ತಪ್ಪಿದ್ದಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಇನ್ನೂ ಇದೇ ವೇಳೆ ಹಂದಿನಾಗಣ್ಣ, ಸಿಐಟಿಯು ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ, ಹಿರಿಯ ರಂಗಕಲಾವಿದ ಪುಟ್ಟಸ್ವಾಮಾಚಾರ್ಯ,ಜಯರಾಜು ರವರನ್ನು ಸನ್ಮಾನಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ವಿಶ್ವ ಮಾನವ ವಿಚಾರ ವೇದಿಕೆ ಅಧ್ಯಕ್ಷ ಮ.ಸಿ ನಾರಾಯಣ, ಪ್ರಧಾನ ಕಾರ್ಯದರ್ಶಿ ನಾಗೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ, ನಾಗರಾಜು, ವಿಶ್ವಗುರು ಸೊಸೈಟಿ ಅಧ್ಯಕ್ಷ ಕೃಷ್ಣಶೆಟ್ಟಿ, ಭರತ್ ರಾಜ್ ಸೇರಿದಂತೆ ಮತ್ತಿತ್ತರರು ಇದ್ದರು. ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್…

Read More

ಶಾಸಕರಿಗೆ ದಮ್ಕಿ ಹಾಕಿದ ಮಧುಸೂದನ್ ರೆಡ್ಡಿ- ರೆಡ್ಡಿಯನ್ನು ಬಂದಿಸುವಂತೆ ಶಾಸಕರ ಅಭಿಮಾನಿಗಳಿಂದ ಒತ್ತಾಯ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ತಾಲ್ಲೂಕು ಬಾಗೇಪಲ್ಲಿ ತಾಲೂಕಿನ ಚೇಳೂರಿನಲ್ಲಿ ಇತ್ತೀಚೆಗಷ್ಟೆ ಗ್ರಾಮ ಪಂಚಾಯ್ತಿ ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡ್ ನಲ್ಲಿರುವ ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ವಿರುದ್ದ ಬಾಗೇಪಲ್ಲಿ ತಾಲ್ಲೂಕಿನ ಚೇಳೂರಿನ ನಿವಾಸಿ ಮಧುಸೂದನ್ ರೆಡ್ಡಿ, ಕೆಎನ್ ಅಲಿಯಾಸ್ ಅಪೋಲೋ ಟೈಯರ್ಸ್ ಎಂಬ ವ್ಯಕ್ತಿ ಕಳೆದ ರಾತ್ರಿ ಕುಡಿದ ಅಮಲಿನಲ್ಲಿ ಶಾಸಕರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾಯಿದೆ.ಇದರಿಂದ ಶಾಸಕ ಸುಬ್ಬಾರೆಡ್ಡಿ ಅಭಿಮಾನಿಗಳ ಪಿತ್ತ ನೆತ್ತಗೇರುವಂತೆ ಮಾಡಿದೆ, ಆಕ್ರೋಶಗೊಂಡ ಸುಬ್ಬಾರೆಡ್ಡಿ ಅಭಿಮಾನಿಗಳು ಚೇಳೂರು ಹೋಬಳಿಯಲ್ಲಿ ಪ್ರತಿಭಟನೆ ಮಾಡಿ ಸಮಾಜಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಕಾರ್ಯಕರ್ತನಾದ ಮಧುಸೂದನ್ ರೆಡ್ಡಿಗೆ ತಕ್ಕ ಪಾಠ ಕಲಿಸುವಂತೆ ಆಗ್ರಹ ಮಾಡಿದ್ದಾರೆ. ಚೇಳೂರು ಹೋಬಳಿಯ ಹಾಲಿ ತಾಲೂಕು ಪಂಚಾಯ್ತಿ ಸದಸ್ಯ ರಾಮಕೃಷ್ಣಾರೆಡ್ಡಿ ತಮ್ಮನಾದ ಮಧುಸೂದನ್ ರೆಡ್ಡಿಯನ್ನು ತಕ್ಷಣ ಪೊಲೀಸರು ಬಂದಿಸಿ ಬಾಗೇಪಲ್ಲಿ ಠಾಣೆಗೆ ಕರೆದೊಯ್ದು ವಿಚಾರಣೆ…

Read More

ಹಕ್ಕಿ ಜ್ವರ ವದಂತಿ, ಆಂತಕ ಬೇಡ-ಡಿ.ಸಿ ಆರ್ ಲತಾ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈವರೆಗೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಬಗ್ಗೆ ವರದಿಯಾಗಿಲ್ಲ. ಈಗಾಗಲೇ ಮುಂಜಾಗ್ರತೆ ವಹಿಸಿಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಸ್ಪಷ್ಟಪಡಿಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಗುರುವಾರ ಎರಡು ವಲಸೆ ಪಕ್ಷಿಗಳು ಮೃತಪಟ್ಟಿದ್ದು, ಮೃತಪಟ್ಟ ಹಕ್ಕಿಗಳನ್ನು ಬೆಂಗಳೂರಿನಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕಾ ಸಂಶೋಧನಾ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. 25 ದಿನಗಳ ಹಿಂದೆ ಇದೇ ಅಮಾನಿ ಗೋಪಾಲ ಕೃಷ್ಣ ಕೆರೆಯಲ್ಲಿ ಮೃತಪಟ್ಟಿದ್ದ ಎರಡು ಹಕ್ಕಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಪ್ರಕಾರ ಈ ಎರಡು ಹಕ್ಕಿಗಳು ಯಾವುದೇ ಸೋಂಕಿನಿಂದ ಮೃತಪಟ್ಟಿರುವುದಿಲ್ಲ ಎಂದು ದೃಢಪಟ್ಟಿದೆ. ಹಾಗಾಗಿ, ಜಿಲ್ಲೆಯ ನಾಗರಿಕರು ಹಕ್ಕಿ ಜ್ವರದ ಬಗ್ಗೆ ಹೆದರಬೇಕಾಗಿಲ್ಲ. ಈಗಾಗಲೇ ಜಿಲ್ಲೆಯ ಎಲ್ಲಾ ಕಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆಯನ್ನು…

Read More

ಬಾರಾ ಕೊಟ್ರಿಯಲ್ಲಿ ತುಂಬುತ್ತಿದೆ ಕಸದ ರಾಶಿ- ಕ್ಯಾರೇ ಅನ್ನದ ಬಿಬಿಎಂಪಿ ಅಧಿಕಾರಿಗಳು..!

ಹುಬ್ಬಳ್ಳಿ: ಒಂದು ಕಡೆ ಸ್ವಚ್ಛ ನಗರ ಹಾಗೂ ಸ್ಮಾರ್ಟ್ ಸಿಟಿ ಕನಸು ಕಾಣುತ್ತಿರುವ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಪಾಲಿಕೆ ಕಸ ವಿಲೇವಾರಿ ಮಾಡುವುದನ್ನು ಮರೆತಂತೆಯ ಕಾಣುತ್ತಿದೆ. ಪರಿಣಾಮ ನಗರದಲ್ಲಿ ತ್ಯಾಜ್ಯ ವಿಲೇವಾರಿಯಾಗದೇ ರಸ್ತೆ ಉದ್ದಕ್ಕೂ ಕಸದ ರಾಶಿ ರಾರಾಜಿಸುತ್ತಿದೆ. ಮೊದಲೇ ದೇಶದಲ್ಲೇ ಕೊರೊನಾ ಹಾವಳಿ ತಪ್ಪಿಸಲು ಸರಕಾರ ಹರಸಾಹಸ ಪಡುತ್ತಿದೆ, ಅದರೊಂದಿಗೆ ಪ್ರತಿಯೊಂದು ನಗರದಲ್ಲಿ ಸ್ವಚ್ಚತೆ ಬಗ್ಗೆ ಗಮನ ಹರಿಸುವಂತೆ, ಸರಕಾರ ಮಹಾನಗರ ಪಾಲಿಕೆ ಆದೇಶ ನೀಡಿದೆ, ಇದರ ನಡುವೆಯೂ ಕೇಶ್ವಾಪೂರದ ಬಾರಾಕೊಟ್ರಿ ಬಳಿ ಅಧಿಕಾರಿಗಳ ಕರ್ತವ್ಯ ಲೋಪದಿಂದ ದಿನೇ ದಿನೇ ಕಸದ ಸಮಸ್ಯೆ ದ್ವಿಗುಣಗೊಳ್ಳುತ್ತಿದೆ. ಪರಿಣಾಮ ಸ್ಮಾರ್ಟ್ ಸಿಟಿಯ ಕನಸು ಇನ್ನೂ ಕಗ್ಗಂಟಾಗುತ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು.ಮತ್ತು ಬಹುತೇಕ ರಸ್ತೆಯ ತುಂಬಾ ಕಸದ ರಾಶಿ ತುಂಬಿದೆ, ಅದರಿಂದ ಕೆಟ್ಟ ವಾಸನೆ ಬರುತ್ತಿದ್ದು, ಮನೆಯಲ್ಲಿ ವಾಸಿಸಲು ಸಹ ಆಗುತ್ತಿಲ್ಲ,ಎಂಬಾ…

Read More

ರೈತರ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ…!

ಮೊಳಕಾಲ್ಮುರ: ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಾಗೂ ಜನವಿರೋಧಿ ವಿದ್ಯುತ್ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟ ಬೆಂಬಲಿಸಿ ಮೊಳಕಾಲ್ಮೂರಿನಲ್ಲಿ ಸಿಐಟಿಯು ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.ಮೊಳಕಾಲ್ಮೂರು ತಾಲ್ಲೂಕಿನ ಕೆಇಬಿ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ್ರು.ಇನ್ನೂ 3 ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಮೊಳಕಾಲ್ಮುರು ತಹಶೀಲ್ದಾರ್ ಮೂಲಕ ಮೇಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಸಿಐಟಿಯುನ ತಾಲೂಕು ಅಧ್ಯಕ್ಷರಾದ ಡಿ.ಎಂ ಮಲಿಯಪ್ಪ ಮಾತನಾಡಿ, ಪ್ರಧಾನಮಂತ್ರಿಗಳಿಗೆ ರೈತರ ಮೇಲೆ ಕಾಳಜಿ ಇಲ್ಲ 48 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ.ಈಗಾಗಲೇ ಕೆಲವು ರೈತರು ಮೃತಪಟ್ಟಿದ್ದಾರೆ.ಅಲ್ಲದೆ “ಕಾರ್ಮಿಕರ ಹಕ್ಕುಗಳನ್ನು ಉಳಿಸುತ್ತವೆ,ರೈತರ ಬದುಕನ್ನು ರಕ್ಷಿಸುತ್ತೇವೆ, ಕಾರ್ಪೊರೇಟ್ ಹಿಡಿತದಿಂದ ದೇಶವನ್ನು ಕಾಪಾಡುತ್ತೇವೆ ಎಂಬ ಪ್ರತಿಜ್ಞೆಯೊಂದಿಗೆ ಅಧಿಕಾರ ಹಿಡಿದ ಕೇಂದ್ರ ಸರ್ಕಾರ ರೈತರ ಜೀವನದಲ್ಲಿ ಆಟವಾಡುತ್ತಿದೆ ಎಂದು…

Read More