ರಾಯಚೂರು

71 ಕೇಂದ್ರದಲ್ಲಿ ಕೊರೊನಾ ಲಸಿಕೆ ಡ್ರೈರನ್ ಪರಿಶೀಲನೆ- ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್..!

Published

on

ರಾಯಚೂರು: ಕೊರೊನಾ ಲಸಿಕೆ ಡ್ರೈರನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 71 ಕೇಂದ್ರಗಳಲ್ಲಿ ಲಸಿಕೆ ಡ್ರೈರನ್ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಆರ್ ವೆಂಕಟೇಶ್ ಕುಮಾರ ತಿಳಿಸಿದ್ದಾರೆ. ಇಂದು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಡ್ರೈರನ್ ಪೂರ್ವ ಸಿದ್ಧತೆಯನ್ನು ಪರಿಶೀಲನೆ ಮಾಡಿ ನಂತರ ಮಾತನಾಡಿದ ಅವರು ಇಂದು ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಡ್ರೈರನ್ ಮಾಡಲು ಸಿದ್ಧತೆಯನ್ನು ಮಾಡಲಾಗಿದೆ.ಒಂದು ಕೇಂದ್ರದಲ್ಲಿ ಕನಿಷ್ಠ 25 ಜನಕ್ಕೆ ಲಸಿಕೆ ಡ್ರೈರನ್ ಮಾಡಬೇಕಾಗುತ್ತದೆ. ಇದನ್ನು ಮಾಡಿದರೆ ವ್ಯಾಕ್ಸಿನ್ ಬಂದಾಗ ನಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ಜಿಲ್ಲೆಯಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ತೆಗೆದುಕೊಳ್ಳಗಿದೆ. ಒಂದು ಕೇಂದ್ರದಲ್ಲಿ 5 ಜನ ಅಧಿಕಾರಿಗಳು ಇರುತ್ತಾರೆ, ಡ್ರೈರನ್ ಗೆ ಬರುವ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮತ್ತು ಇನ್ನಿತರ ದಾಖಲಾತಿಯನ್ನು ಕಡ್ಡಾಯವಾಗಿ ತರಬೇಕು. ಇದು 14500 ಜನರಿಗೆ ಅನುಕೂಲವಾಗಲಿದೆ. ನಮ್ಮಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ವೈದ್ಯರು ಸೇರಿದಂತೆ ಗ್ರೂಪ್ ಡಿ ಸಿಬ್ಬಂದಿಗಳು ಮತ್ತು ಖಾಸಗಿ ವೈದ್ಯರನ್ನು ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಸಹ ತೆಗೆದು ಕೊಂಡಿದ್ದೇವೆ ಒಟ್ಟು ಮೂರು ಹಂತಗಳಲ್ಲಿ ವ್ಯಾಕ್ಸಿನೇಷನ್ ಮಾಡಲಾಗುತ್ತಿದ್ದು. ಇವರ ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರದ ಕೋವಿಡ್ ಪೊಟ್ರಾಲ್ ನಲ್ಲಿ ಅಪ್ ಲೋಡ್ ಮಾಡಿದ್ದೇವೆ. ಎರಡನೇ ಹಂತದಲ್ಲಿ ಇನ್ನುಳಿದ ಅಧಿಕಾರಿಗಳನ್ನು ತೆಗೆದುಕೊಂಡು ಮೂರನೇ ಹಂತದಲ್ಲಿ 50 ವರ್ಷದ ಮೇಲ್ಪಟ್ಟವರನ್ನು ತೆಗೆದುಕೊಳ್ಳಲಾಗುವುದು,ಇವತ್ತು ಡ್ರೈರನ್ ಮಾತ್ರ ಮಾಡುತ್ತಿದ್ದೇವೆ, ಸದ್ಯದಲ್ಲೇ ವ್ಯಾಕ್ಸಿನ್ ಬರುತ್ತದೆ. ಬಂದ ಮೇಲೆ ಒಂದು ದಿನಕ್ಕೆ 100 ಜನರಿಗೆ ವ್ಯಾಕ್ಸಿನ್ ಮಾಡಲು ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದು, ಇವರನ್ನು ಕೋವಿಡ್ ಪೊಟ್ರಾಲ್ ನಲ್ಲಿ ಅವರ ಮಾಹಿತಿಗಳನ್ನು ಸಂಗ್ರಹಿಸಿ ಸಮಯವನ್ನು ನಿಗದಿ ಪಡಿಸುತ್ತೇವೆ ಎಂದರು . ಇನ್ನೂ ಈ ಸಂದಭ೯ದಲ್ಲಿ ಡಿಎಚ್ಓ ರಾಮಕೃಷ್ಣ, ರಿಮ್ಸ್ ಡೀನ್ ಬಸವರಾಜ ಪೀರಾಪುರು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

ವರದಿ- ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Click to comment

Trending

Exit mobile version