ಮಂಡ್ಯ

ಬಿಜೆಪಿ ಅಧ್ಯಕ್ಷ ನಂಜುಂಡೇಗೌಡರ ವಿರುದ್ಧ ಗುಡುಗಿದ ರೈತ ಸಂಘದ ಅಧ್ಯಕ್ಷ ಎನ್ಎಲ್ ಭರತ್ ರಾಜ್..!

Published

on

ಮಳವಳ್ಳಿ: ತನ್ನನ್ನು ತಾನು ಬಿಜೆಪಿಗೆ ಮಾರಿಕೊಂಡಿರುವ ನಂಜುಂಡೇಗೌಡರು ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ ಹಾಗೂ ರೈತರ ಪ್ರತಿನಿಧಿಯಾಗಲು ಯೋಗ್ಯತೆ ಇಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ಎಲ್ ಭರತ್ ರಾಜ್ ಆರೋಪಿಸಿದ್ದಾರೆ. ಮಳವಳ್ಳಿಯ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಚಾರಿತ್ರಿಕ ವಾದದ್ದು, ಸ್ವಾತಂತ್ರ್ಯ ಚಳುವಳಿಯ ನಂತರದ ಧೀರೋದ್ಧಾತ ಹಾಗೂ ಐತಿಹಾಸಿಕವಾದ ಚಳುವಳಿಯನ್ನು ದಲ್ಲಾಳಿಗಳ ಹೋರಾಟ ಎಂದು ನಂಜುಂಡೇಗೌಡರು ಕರೆದಿರುವುದು ಅವರು ಬಿಜೆಪಿ ಗುಲಾಮರಾಗಿರುವುದಕ್ಕೆ ಸಾಕ್ಷಿಯಾಗಿದೆ. ರೈತ ಸಂಘಟನೆಯ ಮೂಲಕ ಬೆಳೆದು ಬಂದು ತನ್ನ ಬೆಳೆಸಿದ ರೈತ ಕುಲಕ್ಕೆ ವಿಷ ಉಣಿಸುತ್ತಿದ್ದಾರೆ, ಅವರ ನೆಚ್ಚಿನ ನಾಯಕ ನರೇಂದ್ರ ಮೋದಿ ಅದಾನಿಯ, ಅಂಬಾನಿಯ ಗುಲಾಮನಾಗಿ ರೈತ ವಿರೋಧಿ ವಿದ್ಯುತ್ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಯಾವ ಸದನಗಳಲ್ಲೂ ಚರ್ಚಿಸದೆ, ಚಳಿಗಾಲದ ಸಂಸತ್ ಅಧಿವೇಶನವನ್ನು ರದ್ದು ಪಡಿಸಿ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು. ಮೋದಿ ಪ್ರಜಾಪ್ರಭುತ್ವದ ಕೊಲೆಗಾರ ಭಾರತದ ದಿವಾಳಿಕೋರ, ಬಂಡವಾಳ ಶಾಹಿಗಳ ದಾಸಾನುದಾಸ, ಕೃಷಿ ವಲಯ ಕೈಗಾರಿಕಾ ವಲಯಗಳನ್ನ ಹಾಳು ಮಾಡಿ ಬಡತನ ನಿರುದ್ಯೋಗ ಅಸಮಾನತೆ ಅಸಹಿಷ್ಣುತೆಯನ್ನ ಹುಟ್ಟುಹಾಕಿರುವ ಗೋಮುಖ ವ್ಯಾಘ್ರನನ್ನ ನಂಜುಂಡೆಗೌಡರು ಸಮರ್ಥಿಸಿಕೊಳ್ಳುವುದು ರೈತ ದ್ರೋಹಿ ಕೆಲಸವಾಗಿದೆ ಇದೇ ನೀತಿಗಳನ್ನು ವಿರೋಧಿಸಿ ರಾಜ್ಯ ರೈತ ಸಂಘದಲ್ಲಿದ್ದಾಗ ಮೂರ್ನಾಲ್ಕು ದಶಕಗಳ ಕಾಲ ಹೋರಾಟ ಮಾಡಿರುವುದನ್ನು ಮರೆತು ಮಾತನಾಡುತ್ತಿದ್ದಾರೆ ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನವಿದ್ದರೆ ತನ್ನನ್ನು ಬೆಳೆಸಿದ ರೈತರಿಗೆ ದ್ರೋಹ ಬಗೆಯದೆ ಹಸಿರು ಟವಲ್ ನ್ನು ಬಿಜೆಪಿಗೆ ಒತ್ತೆ ಇಡದೆ ಸಾಮಾನ್ಯ ಮನುಷ್ಯನಾಗಿ ಬಾಳಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸುತ್ತದೆ ಎಂದರು ಇನ್ನೂ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘ ಪ್ರಧಾನ ಕಾರ್ಯದರ್ಶಿ ಲಿಂಗರಾಜುಮೂರ್ತಿ, ಆನಂದ್ ಚಿಕ್ಕಮೊಗಣ್ಣ ಸಿದ್ದೇಗೌಡ ದಾಸಬೋವಿ, ಕರಿಯಪ್ಪ, ಭಾಗವಹಿಸಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version