ಚಿಕ್ಕಬಳ್ಳಾಪುರ

ಹಕ್ಕಿ ಜ್ವರದ ಯಾವುದೇ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿಲ್ಲ- ಡಾ.ಕೆ.ಸುಧಾಕರ್….!

Published

on

ಚಿಕ್ಕಬಳ್ಳಾಪುರ: ಹಕ್ಕಿ ಜ್ವರದ ಯಾವುದೇ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿಲ್ಲ ಎಂದು ಆರೋಗ್ಯ ಮತ್ತು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಕೊರೊನಾ ಲಸಿಕೆಯ ಎರಡನೇ ತಾಲಿಮು ವೀಕ್ಷಿಸಿದ ನಂತ್ರ ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಹಕ್ಕಿಗಳು ಮೃತ ಪಟ್ಟ ವಿಚಾರವಾಗಿ ಮಾತನಾಡುತ್ತಾ ಹಕ್ಕಿ ಜ್ವರದ ಯಾವುದೇ ಪ್ರಕರಣ ಕಂಡು ಬಂದಿಲ್ಲ ಮತ್ತು ಗಡಿ ಜಿಲ್ಲೆಗಳಲ್ಲಿ ಕೇರಳ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಕಟ್ಟೆಚ್ಚರ ವಹಿಸಲಾಗ್ತಿದೆ.ಆರೋಗ್ಯ, ಅರಣ್ಯ ಇಲಾಖೆಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಲಾಗಿದೆ. ಸತ್ತ ಪಕ್ಷಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಕೋಳಿ ಫಾರ್ಮ್ ಗಳನ್ನು ಸ್ಯಾನಿಟೈಸರ್ ಮಾಡಿಸಲಾಗ್ತಿದೆ,ಸಾರ್ವಜನಿಕರು ಕೋಳಿ ಮಾಂಸ ತಿನ್ನುವವರು 70-80 ಡಿಗ್ರಿಯಲ್ಲಿ ಬೆಯ್ಯಿಸಿ ತಿನ್ನುವುದು ಅವಶ್ಯಕವಾಗಿದೆ. ಹೀಗೆ ಬೇಯಿಸಿ ತಿನ್ನುವುದರಿಂದ ಹಕ್ಕಿ ಜ್ವರದ ವೈರಸ್ ನಾಶವಾಗುತ್ತದೆ. ಹಕ್ಕಿ ಜ್ವರಕ್ಕಾಗಿ ಇದಕ್ಕಾಗಿ ಮಾರ್ಗಸೂಚಿ ತಯಾರಾಗಿದೆ, ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡ್ತೇವೆಂದು ಸುಧಾಕರ್ ತಿಳಿಸಿದ್ರು.

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version