ಕೋಲಾರ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾಗಿಯಾದ ಸಚಿವ ನಾಗೇಶ್..!

Published

on

ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನೆರವೇರಿದ್ದು, ಮುಳಬಾಗಿಲು ಪಟ್ಟಣದ ಡಿವಿ ಗುಂಡಪ್ಪ ಭವನದಲ್ಲಿ ಆಯೋಜಿಸಿದ್ದ 7 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉಸ್ತುವಾರಿ ಸಚಿವ ಎಚ್ ನಾಗೇಶ್ ಚಾಲನೆ ನೀಡಿದರು, ಸಮ್ಮೇಳನಾ ಅಧ್ಯಕ್ಷ್ಯ ಚಾಂದ್ ಪಾಷಾ ರವರನ್ನ ಮೆರವಣಿಗೆ ಮೂಲಕ ಕರೆತರುವಾಗ ಎಲ್ಲಾರು ಒಗ್ಗೂಡಿ ಸಂಭ್ರಮದಿಂದ ತಮಟೆ,ವಾದ್ಯಕ್ಕೆ ಕುಣಿದರು, ಇನ್ನೂ ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷ್ಯ ಚಾಂದ್ ಪಾಷಾ ದಂಪತಿಗಳು, ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ್ಯ ನಾಗಾನಂದ ಕೆಂಪರಾಜ್, ತಹಶಿಲ್ದಾರ್ ರಾಜಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ಚರಿ ದೇವಿ, ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಜೆಡಿಎಸ್ ಹಿರಿಯ ಮುಖಂಡ ಆಲಂಗೂರು ಶಿವಣ್ಣ ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಮುಖಂಡರು, ಅಧಿಕಾರಿಗಳು, ಕನ್ನಡ ಪ್ರೇಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು, ಇನ್ನೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಎಚ್ ನಾಗೇಶ್ ರವರು, ಮುಳಬಾಗಿಲು ತಾಲೂಕಿನ ವಿವಿಧ ದೇಗುಲದಲ್ಲಿ ನಾವು ಸಾಹಿತ್ಯವನ್ನು ಕಾಣಬಹುದು, ಪುರಾತನ ಮಾಹಿತಿ ಸಾರುವ ಅದೇಷ್ಟು ದೇಗುಲ ನಮ್ಮಲ್ಲಿದೆ, ನಾವೆಲ್ಲರು ಮೊದಲು ಸ್ಥಳೀಯವಾಗಿರುವ ಸಾಹಿತ್ಯವನ್ನು ಅರಿತುಕೊಳ್ಳಬೇಕಿದೆ, ಕರ್ನಾಟಕದಲ್ಲಿ ಹುಟ್ಟಿದವರೆಲ್ಲರು ಕನ್ನಡ ಪ್ರೇಮಿಗಳೇ, ನಾನು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದಕ್ಕೆ ನನಗೆ ಹೆಮ್ಮೆಯಾಗಿದೆ, ಇನ್ನೂ ಹಲವು ಕಾರ್ಯಕ್ರಮಗಳಿಂದ ಬಿಡುವಿಲ್ಲದೆ ಇದ್ದರು, ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ತಪ್ಪದೇ ಬರಬೇಕೆಂದು ಆಸೆಯಿಂದ ಭಾಗಿಯಾಗಿದ್ದೇನೆ ಎಂದರು.

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Click to comment

Trending

Exit mobile version