ಬಾಗಲಕೋಟೆ

ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬದ್ಧ- ಮುರುಗೇಶ್ ನಿರಾಣಿ..!

Published

on

ಬಾಗಲಕೋಟೆ: ಮುಂಬರುವ ದಿನಗಳಲ್ಲಿ ಬೀಳಗಿ ಕ್ಷೇತ್ರವಾಪ್ತಿಯ ಒಂದು ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ 2500 ಆಶ್ರಯ ಮನೆಗಳು ಮಂಜೂರು ಮಾಡಿಸಿ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಗ್ರಾಮಗಳ ಅಭಿವೃದ್ಧಿಗೆ ಸದಾಕಾಲ ಗ್ರಾಮ ಪಂಚಾಯಿತಿ ಸದಸ್ಯ ಜೊತೆಗೆ ಇರುತ್ತೇನೆಂದು ಬೀಳಗಿ ಶಾಸಕ ಮುರುಗೇಶ್ ನಿರಾಣಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಕೆರಕಲಮಟ್ಥಿಯ ಕೇದಾರ್ ನಾಥ್ ಶುಗರ್ ಕಾರ್ಖಾನೆಯಲ್ಲಿ ಬೀಳಗಿ ಮತ ವಾಪ್ತಿಯ ಬಿಜೆಪಿ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ ಬೀಳಗಿಯ ಭೂಮಿಗಳನ್ನು ಸಂಪೂರ್ಣ ನೀರಾವರಿ ಸೌಲಭ್ಯಕ್ಕೆ ಒಳಪಡಿಸುವ ಯೊಜನೆ ರೂಪಿಸಲಾಗಿದೆ. ಬಡ ಜನರಿಗೆ ಆಶ್ರಯ ಮನೆ ಉಚಿತ ಗ್ಯಾಸ್ ಎಲ್ಲಾ ಗ್ರಾಮಗಳಿಗೆ ಶುದ್ದ ನೀರು, ಸಿಸಿ ರಸ್ತೆ, ಶೌಚಾಲಯ ಸೇರಿದಂತ್ತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಗ್ರಾಮಗಳನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲು ನಾನು ಬದ್ಧನಾಗಿದ್ದೆನೆ ಎಂದರು.ಇನ್ನೂ ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಮಾತನಾಡಿ ಬಿ.ಎಸ್ ಯಡಿಯೂರಪ್ಪ ನವರ ಅಭಿವೃದ್ಧಿ ಕಾರ್ಯಕ್ಕೆ ಜನರು ಮೆಚ್ಚಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿತರನ್ನು ಗೆಲ್ಲಿಸಿ ನಮ್ಮ ಬಿಜೆಪಿ ಪಕ್ಷಕ್ಕೆ ಹಾರೈಸಿದ್ದಾರೆ ಎಂದರು. ಇನ್ನೂ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಎಮ್ ಕೆ ಪಟ್ಟಣ ಶೆಟ್ಟಿ, ಪಿ.ಎಚ್ ಪೂಜಾರ ಮುಖಂಡರಾದ ನಾರಾಯಣ ಭಾಂಡ್ಗೆ, ಜಿಲ್ಲಾ ಪಂಚಾಯತ್ ಸದಸ್ಯ ಹೂವಪ್ಪ ರಾಠೋಡ, ಈರಣ್ಣ, ಗಿಡ್ಡಪ್ಪಗೋಳ ಸಂಗಣ್ಣ, ಕಟಗೇರಿ ಮೋಹನ್ ಜಾಧವ ಮತ್ತೀತರು ಉಪಸ್ಥೀತರಿದ್ದರು.

ವರದಿ- ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Click to comment

Trending

Exit mobile version