ಬಾಗಲಕೋಟೆ

ಮಿನಿ ಶಬರಿಮಲೆ ಎಂದೇ ಪ್ರಖ್ಯಾತಿಗಳಿಸಿದ ‘ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನ’…!

Published

on

ಬಾಗಲಕೋಟೆ: ಅಯ್ಯಪ್ಪ ಸ್ವಾಮಿ ಮಾಲೆ ಹಾಕಿರುವವರು ಪ್ರತಿ ವರ್ಷ ವೃತ ಮುಕ್ತಾಯಗೊಳಿಸಲು ಕೇರಳದ ಶಬರಿಮಲೈನಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋಗಿ ಇರುಮುಡಿ ಇಳಿಸಿ ಬರುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಹಾವಳಿ ಇವರನ್ನು ಅಲ್ಲಿಗೆ ಹೋಗದಂತೆ ಮಾಡಿದೆ. ಹೀಗಾಗಿ ಈ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅಯ್ಯಪ್ಪ ಮಾಲಾಧಾರಿಗಳ ದಂಡು ರಾಜ್ಯದ ಮಾಲಾಧಾರಿಗಳು ಈ ಬಾರಿ ಕರ್ನಾಟಕದ 8 ಕಡೆಗಳಲ್ಲಿನ ಅಯ್ಯಪ್ಪ ದೇಗುಲಗಳಲ್ಲಿಯೇ ಇರುಮುಡಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಈ ಮಿನಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣವಾಗಿದೆ. ಈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇದೀಗ ರಾಜ್ಯ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಅಯ್ಯಪ್ಪ ಮಾಲಾಧಾರಿಗಳು ಬಂದು ಇರುಮುಡಿ ಇಳಿಸಿ ಹೋಗುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿಕೊಂಡು ಇರುಮುಡಿ ಹೊತ್ತುಕೊಂಡು ಬರುತ್ತಿರುವ ಈ ಮಾಲಾಧಾರಿಗಳು, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವೃತಸೇವೆ ಮಾಡಿ ಇರುಮುಡಿ ಇಳಿಸಿ ಹೋಗುತ್ತಿದ್ದಾರೆ. ಹೀಗಾಗಿ ಮಿನಿ ಶಬರಿಮಲೆ ಎಂದೇ ಕರೆಯಲ್ಪಡುವ ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಈ ವರ್ಷ ನಿತ್ಯ ನೂರಾರು ಭಕ್ತರು ಇರುಮುಡಿ ಇಳಿಸಲು ಬರುತ್ತಿದ್ದಾರೆ. ಶಬರಿಮಲೈ ಶ್ರೀ ಅಯ್ಯಪ್ಪ ದೇವಸ್ಥಾನವು ಡಿಸೆಂಬರ್ 30ರಂದು ತೆರೆದಿದ್ದು, ಜನವರಿ 15 ರ ಮಕರ ಜ್ಯೋತಿ ದರ್ಶನದವರೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ವರದಿ-ಶ್ಯಾಮ್ ತಳವಾರ ಎಕ್ಸ್ ಪ್ರೆಸ್ ಟಿವಿ ಜಮಖಂಡಿ..

Click to comment

Trending

Exit mobile version