ಹಾಸನ (ಅರಸೀಕೆರೆ):ಅರಸೀಕೆರೆ ತಾಲೂಕಿನಾದ್ಯಂತ ಒಂದು ವರ್ಷಗಳಿಂದ ಪರಿಸರ ಪ್ರೇಮಿ ವಿಜಯ್ ಕುಮಾರ್ ಗಿಡ ನೆಟ್ಟು ಪೋಷಣೆ ಮಾಡುತ್ತಾ ಬಂದಿದ್ದಾರೆ. ಸದ್ಯ ಇಂದು ಪರಿಸರ ದಿನಾಚರಣೆ ಅಂಗವಾಗಿ ಮತ್ತೊಂದು ಸಸಿ ನೆಟ್ಟು ಸುಮಾರು ಇಲ್ಲಿಯವರೆಗೂ ೨ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಈ ಗಿಡ ನೆಡುವ ಕಾರ್ಯಕ್ರಮದಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ವಿ.ಟಿ.ಬಸವರಾಜ್ ಮಾತನಾಡಿ, ಗಿಡಮರಗಳಿಂದ ನಮ್ಮ ಪರಿಸರ ತಂಪಾಗಿರುತ್ತದೆ.ಮರಗಳು ಬಿಡುವ ಆಮ್ಲಜನಕದಿಂದ ಜನಸಾಮಾನ್ಯರಿಗೆ ಒಳ್ಳೆಯ ಗಾಳಿ ಸಿಗುತ್ತದೆ.ಈಗಾಗಲೇ ಆಕ್ಸಿಜನ್ ಗೋಸ್ಕರ ಜನರು ಪರದಾಡುವ ಪರಿಸ್ಥಿತಿ ಬಂದಿದೆ.ಗಿಡಮರಗಳು ಬೆಳೆದರೆ ನಮಗೆ ನಮ್ಮ ಪರಿಸರಕ್ಕೆ ಒಳ್ಳೆಯದು ಎಂದರಲ್ಲದೆ, ಇಂದು ಪರಿಸರ ದಿನಾಚರಣೆ ಅಂಗವಾಗಿ ಮನೆಗೊಂದು ಮರ, ಊರಿಗೊಂದು ವನ ಎಂಬAತೆ ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ ಎಂದು ಕರೆ ನೀಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಅವಿನಾಶ್ ನಾಯ್ಡು,…
Read MoreDay: June 5, 2021
ಕೊರೊನಾ ರೋಗಿಗಳೊಂದಿಗೆ ಡಾಕ್ಟರ್ ಗಳ ಹಾಡು..ಡ್ಯಾನ್ಸ್..
ಕಲಬುರಗಿ : ಕೊರೊನಾ ಕಡಿಮೆಯಾದ ಹಿನ್ನಲೆಯಲ್ಲಿ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ವೈದ್ಯರು ಕೊರೊನಾ ರೋಗಿಗಳೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.. ಅಂದ ಹಾಗೇ ವರನಟ ಡಾ.ರಾಜಕುಮಾರ್ ಅವರ ಸೂಪರ್ ಹಿಟ್ ಚಿತ್ರಗೀತೆ `ನಗುತ್ತಾ..ನಗುತ್ತಾ..ಬಾಳು ನೀನು ಎಂಬ ಹಾಡಿಗೆ’ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ಸಖತ್ ಸ್ಟೇಫ್ ಹಾಕಿದ್ದಾರೆ.. ಸದ್ಯ ಆಸ್ಪತ್ರೆ ವೈದ್ಯರ ಹಾಡುಗಾರಿಗೆ ಹಾಗೂ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ಸಹ ಫುಲ್ ಖುಷ್ ಆಗಿದ್ದಾರೆ. ಇನ್ನು ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ೩೦ನೇ ಸ್ಥಾನಕ್ಕೆ ಕಲಬುರಗಿ ಜಿಲ್ಲೆ ಇಳಿದಿದೆ.ಜೊತೆಗೆ ಬೀದರ್ ಬಿಟ್ಟರೆ ಕಲಬುರಗಿಯಲ್ಲೇ ಅತೀ ಕಡಿಮೆ ಅಂದರೆ ಕೇವಲ ೩.೮%ಗೆ ಪಾಸಿಟಿವ್ ಸಂಖ್ಯೆ ಇಳಿದಿದೆ.. ಉಮೇಶ್ ಅಚಲೇರಿ ಎಕ್ಸ್ ಪ್ರೆಸ್ ಟಿವಿ ಕಲಬುರಗಿ
Read Moreಹತ್ತಲ್ಲ, ಇಪ್ಪತ್ತಲ್ಲ ಐವತ್ತು ಲಕ್ಷ ರೂ. ಬೆಲೆಬಾಳುವ ಔಷಧಿ ದಾನ ಮಾಡಿದ ಅಪರಿಚಿತ..!
ಹಾವೇರಿ(ರಾಣೆಬೆನ್ನೂರು):ಕೊರೊನಾ ಸಂದರ್ಭದಲ್ಲಿ ರೋಗಿಗಳಿಂದ ಹಿಡಿದು ಬಡವ, ಶಮ್ರಿಕ ಸೇರಿ ಇತರೆ ವರ್ಗದವರಿಗೆ ದಾನಿಗಳು ಮುಂದೆ ಬಂದು ದಾನ ಮಾಡುವುದನ್ನು ನೋಡಿದ್ದೇವೆ.ಆದರೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾತ್ರ ಅನಾಮಧೇಯ ವ್ಯಕ್ತಿಯೊಬ್ಬರು ಸುಮಾರು ೫೦ ಲಕ್ಷ ರೂಪಾಯಿ ಬೆಲಬಾಳುವ ಔಷಧಿಗಳ ದಾನ ಮಾಡಿ ತೆರೆಮರೆಗೆ ಉಳಿದಿದ್ದಾರೆ. ಅಂದ ಹಾಗೇ ಕೋವಿಡ್‌ಗೆ ಸಂಬAಧಿಸಿದAತೆ ಸುಮಾರು ೫೦ ಲಕ್ಷ ರೂಪಾಯಿ ಮೌಲ್ಯದ ಔಷಧಿಗಳು, ಮಾಸ್ಕ್, ಫೇಸ್ ಶೀಲ್ಡ್, ಮತ್ತು ಇಂಜೆಕ್ಷನ್‌ಗಳನ್ನು ಹೆಸರು ಹೇಳಲು ಇಚ್ಛಿಸದ ದಾನಿಯೊಬ್ಬರು ಹಾವೇರಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ… ಸದ್ಯ ಹಾವೇರಿ ಜಿಲ್ಲಾಡಳಿತವು ಶೀಘ್ರದಲ್ಲೇ ಇದನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ನೀಡಲಿದ್ದು,ಹಾವೇರಿ ಜಿಲ್ಲಾಧಿಕಾರಿ ಆ ಅಪರಿಚಿತ ದಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬಸವನಗೌಡ ಎಕ್ಸ್ ಪ್ರೆಸ್ ಟಿವಿ (ರಾಣೆಬೆನ್ನೂರು) ಹಾವೇರಿ
Read Moreಕೊರೊನಾ ಸೋಂಕಿತ ಕುಟುಂಬಗಳಿಗೆ ಔಷಧಿ ಕಿಟ್ ಹಸ್ತಾಂತರ..
ಮೈಸೂರು(ಪಿರಿಯಾಪಟ್ಟಣ):ಗ್ರಾಮಾAತರ ಪ್ರದೇಶದ ಕೊರೊನಾ ಸೋಂಕಿತ ವ್ಯಕ್ತಿ ಹಾಗೂ ಅವರ ಕುಟುಂಬಗಳಿಗೆ ಔಷಧಿ ಕಿಟ್ ವಿತರಿಸಿ ಆತ್ಮಸ್ಥೈರ್ಯ ತುಂಬಲು ಗ್ರಾಮ ಪಂಚಾಯಿತಿವಾರು ತೆರಳುತ್ತಿದ್ದೇನೆ ಎಂದು ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ತಿಳಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಪುರಸಭಾ ಕಚೇರಿಯಲ್ಲಿ ಸಾರ್ವಜನಿಕರಿಗೆ ವಿತರಿಸಲು ಪುರಸಭಾ ಸಾಮಾನ್ಯ ನಿಧಿಯಿಂದ ಸುಮಾರು ೩ ಲಕ್ಷ ರೂಪಾಯಿ ವೆಚ್ಚದ ಔಷಧಿ ಕಿಟ್‌ಗಳನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಕಾಲದಲ್ಲಿ ಪಕ್ಷಭೇದ ಮರೆತು ರಾಜಕೀಯ ಮಾಡದೆ ಈ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇನ್ನು ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ,ಕೊರೊನಾ ರೋಗವನ್ನು ನಿರ್ಮೂಲ ಮಾಡಲು ಸರ್ಕಾರದ ಜೊತೆ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು. ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ಮಾತನಾಡಿ, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರು ಪಂಚ ಸೂತ್ರಗಳನ್ನು ಪಾಲಿಸಿದರೆ ಯಾವುದೇ ರೋಗ ಬಾಧಿಸುವುದಿಲ್ಲ ಆ ನಿಟ್ಟಿನಲ್ಲಿ ಪುರಸಭೆಯ…
Read Moreಗದಗ ಬ್ರೇಕಿಂಗ್ BIG IMPACT…… ವೃದ್ಧೆಯ ಕತ್ತಲ ಬದುಕಿಗೆ ಬೆಳಕಾದ ಎಕ್ಸ್ ಪ್ರೆಸ್ ಟಿವಿ
ಗದಗ: ಗದಗ ತಾಲೂಕಿನ ಕಲ್ಲೂರು ಗ್ರಾಮದ ವೃದ್ಧೆ ಯಲ್ಲಮ್ಮ ಪಾಟೀಲ್ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಎಕ್ಸ್ ಪ್ರೆಸ್ ಟಿವಿ ಪ್ರಸಾರ ಮಾಡಿದ್ದ ವರದಿ ಫಲಶೃತಿಗೊಂಡಿದೆ. ಸದ್ಯ ಕಳೆದ ೨೦ ವರ್ಷಗಳಿಂದ ಸೂರು ಇಲ್ಲದೆ ವೃದ್ಧೆ ಯಲ್ಲಮ್ಮ ಪಾಟೀಲ್ ಕಣ್ಣೀರಲ್ಲಿ ಕೈ ತೊಳೆಯುವಂತಾಗಿತ್ತು, ಇದರ ಹಿನ್ನೆಲೆಯಲ್ಲಿ ಇದರ ಬಗ್ಗೆ ಎಕ್ಸ್ ಪ್ರೆಸ್ ಟಿವಿ ವಿಸ್ತೃತವಾದ ವರದಿ ಪ್ರಸಾರ ಮಾಡಿತ್ತು. ಹೀಗಾಗಿ ಈ ವರದಿಯಿಂದ ತಕ್ಷಣ ಎಚ್ಚೆತ್ತುಕೊಂಡ ಗದಗದ ಏಕಲವ್ಯ ಟ್ರಸ್ಟ್ , ಜಿಲ್ಲಾ ಪಂಚಾಯತ್ ಅಧಿಕಾರಗಳು ಹಾಗೂ ಧರ್ಮಸ್ಥಳ ಸಂಘ ಮತ್ತು ಇದೇ ಗ್ರಾಮದ ಚಂದ್ರಶೇಖರ ಹರಿಜನ ಹಾಗೂ ಸ್ನೇಹಿತರು ವೃದ್ಧೆ ಯಲ್ಲಮ್ಮಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅAದ ಹಾಗೇ ಅಜ್ಜಿಗೆ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಮನೆ ನಿರ್ಮಾಣ ಮಾಡಲು ಚಂದ್ರಶೇಖರ ಹರಿಜನ ಮತ್ತವರ ಯುವ ಪಡೆ ಪಣ ತೊಟ್ಟರೇ, ಜಿಲ್ಲಾ ಪಂಚಾಯತ್ ಅಧಿಕಾರಿಗಳೂ ಪ್ರಧಾನ ಮಂತ್ರಿ ಗ್ರಾಮೀಣ…
Read Moreಗದಗದಲ್ಲಿ ಡಿಎಪಿ ರಸಗೊಬ್ಬರಕ್ಕಾಗಿ ರೈತರ ಪರದಾಟ…
ಗದಗ: ಗದಗ ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರಕ್ಕಾಗಿ ರೈತರು ಪರದಾಟ ಆರಂಭಿಸಿದ್ದಾರೆ. ಸದ್ಯ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಿತ್ತನೆ ಮಾಡಲು ಡಿಎಪಿ ರಸಗೊಬ್ಬರ ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಈ ಗೊಬ್ಬರಕ್ಕಾಗಿ ರೈತರು ಪರದಾಟ ನಡೆಸುತ್ತಿದ್ದಾರೆ. ಇನ್ನು ಡಿಎಪಿ ರಸಗೊಬ್ಬರ ಇದ್ದರು ಅದನ್ನು ಕೊಡುವುದಕ್ಕೆ ಅಂಗಡಿ ಮಾಲೀಕರು ನಿರಾಕರಿಸುತ್ತಿದ್ದಾರೆ. ಅಲ್ಲದೆ, ೧೦ ಗಂಟೆ ನಂತರ ಬನ್ನಿ ಗೊಬ್ಬರ ನೀಡುತ್ತೇವೆ ಎಂಬ ಸಬೂಬು ಹೇಳುತ್ತಿದ್ದಾರೆ ಅಂತ ಗದಗ ತಾಲೂಕಿನ ಹರ್ತಿ ಗ್ರಾಮದ ರೈತರು ಆಕ್ರೋಶ ವ್ತಕ್ತಪಡಿಸಿದ್ದಾರೆ. ಇದರ ಜೊತೆಗೆ ತಾಂತ್ರಿಕ ಕಾರಣದಿಂದ ಬಯೋಮೆಟ್ರಿಕ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಗೊಬ್ಬರ ಖರೀದಿಗೆ ಬಂದ ರೈತರು ಖಾಲಿ ಕೈಯಲ್ಲಿ ವಾಪಸ್ ತೆರಳುವಂತಾಗಿದೆ. ರಾಕೇಶ್ ಎಕ್ಸ್ ಪ್ರೆಸ್ ಟಿವಿ ಗದಗ
Read Moreಮಹಿಳೆ ಮೇಲೆ ಹಲ್ಲೆ ; ಆರೋಪಿಗಳ ಬಂಧನಕ್ಕೆ ರೈತ ಸಂಘ ಆಗ್ರಹ
ರಾಯಚೂರು(ಲಿಂಗಸೂಗೂರು): ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬಯ್ಯಾಪೂರ ಗ್ರಾಮದ ಆಶಾ ಕಾರ್ಯಕರ್ತೆ ಅಂಬುಜಾ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕೆAದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಒತ್ತಾಯಿಸಿದ್ದಾರೆ. ಅಂದ ಹಾಗೇ ಬಯ್ಯಾಪೂರ ಗ್ರಾಮಕ್ಕೆ ಮತ್ತು ಮುದಗಲ್ ಠಾಣೆಗೆ ಭೇಟಿ ವೇಳೆ ಮಾತನಾಡಿದ ರೂಪಾ ಶ್ರೀನಿವಾಸ ನಾಯಕ, ಬಯ್ಯಾಪೂರ ಗ್ರಾಮದಲ್ಲಿ ಮಹಿಳೆ ಅಂಬುಜಾಗೆ ಯಾರು ಇಲ್ಲ.ಸದ್ಯ ಈ ಮಹಿಳೆ ಮೇಲೆ ಅದೇ ಗ್ರಾಮದ ಹನುಮನಗೌಡ ಹಾಗೂ ಆತನ ಕುಟುoಬಸ್ಥರು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ.ಈ ಸಂಬAಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೀಗಾಗಿ ಮಹಿಳೆಯ ಸುರಕ್ಷತೆಗಾಗಿ ಕೂಡಲೇ ಪೊಲೀಸ್ ಇಲಾಖೆ ಅಧಿಕಾರಿಗಳು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಬೇಕು ಅಂತ ಆಗ್ರಹಿಸಿದ್ರು.. ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ (ಲಿಂಗಸೂಗೂರು) ರಾಯಚೂರು
Read More