`ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ’

ಹಾಸನ (ಅರಸೀಕೆರೆ):ಅರಸೀಕೆರೆ ತಾಲೂಕಿನಾದ್ಯಂತ ಒಂದು ವರ್ಷಗಳಿಂದ ಪರಿಸರ ಪ್ರೇಮಿ ವಿಜಯ್ ಕುಮಾರ್ ಗಿಡ ನೆಟ್ಟು ಪೋಷಣೆ ಮಾಡುತ್ತಾ ಬಂದಿದ್ದಾರೆ. ಸದ್ಯ ಇಂದು ಪರಿಸರ ದಿನಾಚರಣೆ ಅಂಗವಾಗಿ ಮತ್ತೊಂದು ಸಸಿ ನೆಟ್ಟು ಸುಮಾರು ಇಲ್ಲಿಯವರೆಗೂ ೨ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಈ ಗಿಡ ನೆಡುವ ಕಾರ್ಯಕ್ರಮದಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ವಿ.ಟಿ.ಬಸವರಾಜ್ ಮಾತನಾಡಿ, ಗಿಡಮರಗಳಿಂದ ನಮ್ಮ ಪರಿಸರ ತಂಪಾಗಿರುತ್ತದೆ.ಮರಗಳು ಬಿಡುವ ಆಮ್ಲಜನಕದಿಂದ ಜನಸಾಮಾನ್ಯರಿಗೆ ಒಳ್ಳೆಯ ಗಾಳಿ ಸಿಗುತ್ತದೆ.ಈಗಾಗಲೇ ಆಕ್ಸಿಜನ್ ಗೋಸ್ಕರ ಜನರು ಪರದಾಡುವ ಪರಿಸ್ಥಿತಿ ಬಂದಿದೆ.ಗಿಡಮರಗಳು ಬೆಳೆದರೆ ನಮಗೆ ನಮ್ಮ  ಪರಿಸರಕ್ಕೆ ಒಳ್ಳೆಯದು ಎಂದರಲ್ಲದೆ, ಇಂದು ಪರಿಸರ ದಿನಾಚರಣೆ ಅಂಗವಾಗಿ ಮನೆಗೊಂದು ಮರ, ಊರಿಗೊಂದು ವನ ಎಂಬAತೆ ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ ಎಂದು ಕರೆ ನೀಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಅವಿನಾಶ್ ನಾಯ್ಡು,…

Read More

ಗೆದ್ದ ಅಭ್ಯರ್ಥಿಗಳನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ಪಕ್ಷದಿಂದ ಹೊಸ ತಂತ್ರ..!

ಅರಸೀಕೆರೆ: ಜೇನುಕಲ್ಲು ಸಿದ್ದೇಶ್ವರ ಪಾದುಕೆ ಆಣೆಗೂ ನಾವು ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ, ನೀವು ಹೇಳಿದಾಗೆ ಕೇಳ್ತೀವಿ ಅಂತ ವಿಭಿನ್ನವಾಗಿ ಪ್ರಮಾಣ ಮಾಡಿಸುವ ಮುಖಾಂತರ ಗ್ರಾಮ ಪಂಚಾಯಿತಿಯಲ್ಲಿ ವಿಜೇತರಾದ ಬೆಂಬಲಿತ ಸದಸ್ಯರುಗಳನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ವಿಚಿತ್ರ ಪದ್ಧತಿಯನ್ನು ಶಾಸಕರು ಮಾಡುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದಾರೆ. ಇಂತಹದೊಂದು ಘಟನೆ ಸಾಕ್ಷಿಯಾಗಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಬೆಟ್ಟದ ಮೇಲಿರುವ ಜೇನುಕಲ್ಲು ಸಿದ್ದೇಶ್ವರ ಸನ್ನಿಧಿಯಲ್ಲಿ. ಶೇಕಡ 80ಕ್ಕೂ ಅಧಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಕೆಲವು ಮುಖಂಡರುಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕರೆ ಮಾಡಿ ದೂರವಾಣಿ ಮುಖಾಂತರ ಆಮಿಷವೊಡ್ಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ, ಗೆಲುವು ಸಾಧಿಸಿರುವ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅರಸೀಕೆರೆ ನಗರದ ಹೊರಭಾಗದಲ್ಲಿರುವ ಜೇನುಕಲ್ಲು…

Read More

ಜೆಡಿಎಸ್ ಬೆಂಬಲಿಗರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ..!

ಅರಸೀಕೆರೆ: ಅರಸೀಕೆರೆ ತಾಲೂಕಿನ ಪಡುವನಹಳ್ಳಿ ಗೊಲ್ಲರಹಟ್ಟಿ ಯಲ್ಲಿ ತಡರಾತ್ರಿ ಚುನಾವಣೆ ಮತ ಎಣಿಕೆ ಮುಗಿದ ನಂತರ ಊರಿಗೆ ತೆರಳಿದ ಜೆಡಿಎಸ್ ಬೆಂಬಲಿಗರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ, ತೋಟದ ಮನೆಯಿಂದ ಬರುವ ಹಾದಿಯಲ್ಲಿ 5ರಿಂದ 6 ಜನ ಖಾರದಪುಡಿ ಎರಚಿ ಮಚ್ಚು-ಲಾಂಗು ನಿಂದ ಹಲ್ಲೆ ನಡೆಸಿದ್ದಾರೆ. ಪ್ರಾಣ ಭಯದಿಂದ ನಾನು ಊರಿನ ಕಡೆ ಓಡಿ ಬಂದೇ ಎಂದು ಹಲ್ಲೆಗೆ ಒಳಗಾದ ವ್ಯಕ್ತಿ ಶಿವಣ್ಣ ತಿಳಿಸಿದ್ದಾರೆ. ವರದಿ- ಜೀವನ್ ಎಕ್ಸ್ ಪ್ರೆಸ್ ಟಿವಿ ಅರಸೀಕೆರೆ

Read More

ರಾಜರೋಷವಾಗಿ ಲಂಚ ಸ್ವೀಕರಿಸುತ್ತಿರುವ ಪೊಲೀಸ್ ಪೇದೆ..-ವಿಡೀಯೊ ವೈರಲ್..!

ಅರಸೀಕೆರೆ: ಅರಸೀಕೆರೆಯಲ್ಲಿ ನಗರ ಪೋಲಿಸ್ ಠಾಣೇಯ ಮುಖ್ಯಪೇದೆ ಜೇನುಕಲ್ ಗೌಡ ಎಂಬಾತ ರಾಜರೋಷವಾಗಿ ಲಂಚ ಸ್ವೀಕರಿಸುತ್ತಿರುವ ವಿಡೀಯೊ ಇದೀಗ ಇಲ್ಲೇಡೆ ವೈರಲ್ ಆಗುತ್ತಲಿದೆ.ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕಾಗಿ ಹೋರಾಡ್ತಾಯಿದ್ರೆ ಇತ್ತ ಜನಗಳಿಗೆ ರಕ್ಷಣೆ ನೀಡಬೇಕಾದಂತಹ ಕೆಲ ಅಧಿಕಾರಿಗಳೇ ಲಂಚ ಸ್ವೀಕರಿಸುತ್ತಿದ್ದಾರೆ. ಈ ರೀತಿಯ ಕೆಲವು ಅಧಿಕಾರಿಗಳಿಂದ ನಿಷ್ಠಾವಂತ ಅಧಿಕಾರಿಗಳಿಗೂ ರೋಲ್ ಕಾಲ್ ಪಟ್ಟ ಬರುವಂತಾಗಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುತ್ತಾರ ಎಂದು ಕಾದು ನೋಡಬೇಕಾಗಿದೆ. ವರದಿ- ಜೀವನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಅರಸೀಕೆರೆ

Read More

ಸಾಲ ಬಾಧೆ ತಾಳಲಾಗದೇ ಆತ್ಮಹತ್ಯೆಗೆ ಶರಣಾದ ರೈತ..!

ಅರಸೀಕೆರೆ:60 ವರ್ಷದ ರೈತ ಸೋಮಶೇಖರ್ ಎಂಬಾತ ನಿನ್ನೇ ಸಂಜೆ 7ಗಂಟೆಯ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ನಾಗತಿಹಳ್ಳಿ ಎಂಬಾ ಗ್ರಾಮದಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗಿನ ಜಾವ ಸುಮಾರು 4ಗಂಟೆಗೆ ಮೃತಪಟ್ಟಿದ್ದಾರೆ. ಬ್ಯಾಂಕ್ ನಲ್ಲಿ ಒಂದು ಲಕ್ಷ ಸಾಲ ಪಡೆದಿದ್ದ ಆತ ಸಾಲತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಈ ಸಂಬಂಧ ಗಂಡಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವರದಿ- ಜೀವನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಅರಸೀಕೆರೆ

Read More