ಉಡುಪಿ: ಪಕ್ಕದ ಮನೆ ಕೋಳಿ ಪದೇ ಪದೇ ಮನೆ ಅಂಗಳಕ್ಕೆ ಬರುತ್ತೆ ಅನ್ನೋ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಉಳ್ಳೂರು ಇಂಥದ್ದೊಂದು ಗಲಾಟೆ ನಡೆದಿದೆ.ಇಲ್ಲಿನ ರವಿರಾಜ್ ಎಂಬವರ ಕೋಳಿ ವಾರಿಜಾ ಅವರ ಅಂಗಳಕ್ಕೆ ಹೋಗಿದೆ. ಅದನ್ನು ವಾರಿಜ ಓಡಿಸಿದ್ದಾರೆ. ಅಲ್ಲದೆ ಕೋಳಿ ಪದೇ ಪದೇ ಬರುತ್ತದೆ ಎಂದು ವಾರಿಜಾ ಬೈದಿದ್ದಾರೆ. ಇದರಿಂದ ಕೆರಳಿದ ರವಿರಾಜ್ ಶೆಟ್ಟಿ ಎಂಬವರು ದೊಣ್ಣೆ ತೆಗೆದುಕೊಂಡು ವಾರಿಜಾ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಮಹಿಳೆಯರನ್ನು ಎಳೆದಾಡಿ ಅವಾಚ್ಯವಾಗಿ ಬೈದಿದ್ದಾರೆ. ಅವರಿಗೆ ಮಹಿಳೆಯೊಬ್ಬರು ಬೆಂಬಲ ನೀಡಿದ್ದು, ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯ ಮೇಲೂ ಹಲ್ಲೆಯಾಗಿದೆ.ಕೋಳಿ ಜಗಳದ ಹಿಂದೆ ಹಳೆಯ ವೈಷಮ್ಯ ಜಮೀನಿನ ತಗಾದೆ ಇರಬಹುದು ಎನ್ನಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಎರಡೂ ಕುಟುಂಬವನ್ನು…
Read MoreCategory: ಉಡುಪಿ
ಹಾಡುಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಕೊಲೆ..!
ಉಡುಪಿ: ಹಾಡುಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿಯ ಹಿರಿಯಡ್ಕ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ಕೊಲೆ ನಡೆದಿದ್ದು, ಕೊಲೆಯಾದವನು ಕಿಶನ್ ಹೆಗ್ಡೆ ಎಂದು ಗುರುತಿಸಲಾಗಿದೆ. ಕಿಶನ್ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು ಅಪರಾಧ ಚಟುವಟಿಕೆಗಳಲ್ಲೂ ಕೂಡ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreಇದಕ್ಕಿದಂತೆ ಊರೊಳಗೆ ಬಂತು ಕಾಡುಕೋಣ..!
ಉಡುಪಿ: ಲಾಕ್‌ಡೌನ್ ನಿಂದಾಗಿ ಎಲ್ಲರೂ ಮನೆ ಸೇರಿದ್ರೆ, ಕಾಡು ಪ್ರಾಣಿಗಳು ಮಾತ್ರ ಕಾಡಿನಿಂದ ನಾಡು ಸೇರಿ ರಸ್ತೆಯಿಂದ ಹಿಡಿದು ಗಲ್ಲಿ,ಗಲ್ಲಿಗಳಲ್ಲಿ ಓಡಾಟ ಆರಂಭಿಸಿವೆ.ಅದರಲ್ಲೂ ಆನೆ,ಚಿರತೆ,ಹಾವು, ಹುಲಿ,ನವಿಲು ಹೀಗೆ ಸಾಕಷ್ಟು ಪ್ರಾಣಿ ಪಕ್ಷಿಗಳು ನಗರ ಪ್ರದೇಶಗಳಲ್ಲಿ ಓಡಾಟ ನಡೆಸುತ್ತಿದೆ. ಸದ್ಯ ಉಡುಪಿಯ ಕುಕ್ಕೆಹಳ್ಳಿ ಗ್ರಾಮದಲ್ಲಿ ಕಾಡುಕೊಣವೊಂದು ಊರ ಪ್ರವೇಶ ಮಾಡಿ ಗ್ರಾಮಸ್ಥರು ಕೊಂಚ ಭಯಭೀತರಾಗುವಂತೆ ಮಾಡಿದ ಘಟನೆ ನಡೆದಿದೆ. ಅಂದ ಹಾಗೇ ಬೆಳ್ಳಂಬೆಳಗ್ಗೆ ಈ ಕಾಡುಕೋಣ ಗ್ರಾಮದೊಳಗೆ ಬಂದಿರುವುದನ್ನು ನೋಡಿ ಕೆಲವರು ಗಾಬರಿಯಾದರೆ, ಇನ್ನು ಕೆಲವರು ನೋಡಿ ಓಡಿ ಹೋಗಿದ್ದಾರೆ.ಆದರೆ ಯಾರ ತಂಟೆಗೂ ಹೋಗದೇ ಕಾಡುಕೋಣ ಮಾತ್ರ ತನ್ನ ಪಾಡಿಗೆ ತಾನು ಬಂದ ಹಾಗೆ ಹೊರಟು ಹೋಗಿದೆ. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಉಡುಪಿ
Read Moreನನಗೆ ಪೊಲೀಸ್ ಭದ್ರತೆ ಬೇಡ..
ಕುಂದಾಪುರ(ಉಡುಪಿ): ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆ ಎಂದು ವಿದೇಶದಿಂದ ಬೆದರಿಕೆ ಕರೆ ಬೆನ್ನಲ್ಲೇ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. ವಿದೇಶಿ ಕರೆಗಳ ಬಗ್ಗೆ ಕುಂದಾಪುರದಲ್ಲಿ ಮಾತನಾಡಿದ ಸಂಸದೆ, ನಿತ್ಯವೂ ಹಲವು ಬೆದರಿಕೆ ಕರೆ ಬರುತ್ತಿವೆ. ಈ ಬಗ್ಗೆ ತನಿಖೆಯಾಗಲಿ. ಬೆದರಿಕೆ ಕರೆ ಬಗ್ಗೆ ಡಿಜಿಐಜಿ ಪ್ರವೀಣ್ ಸೂದ್ ಬಳಿ ಮಾತನಾಡಿ, ವಿದೇಶದಿಂದ ಕರೆ ಬರುತ್ತಿರುವ ಸಂಖ್ಯೆಯನ್ನು ನೀಡಿದ್ದೇನೆ. ಪಿಎಫ್‌ಐ ಹಾಗೂ ಎಸ್‌ಡಿಪಿಐ ವಿರುದ್ಧ ಮಾತನಾಡಿದಾಗ ಇಂತಹ ಕರೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. ಕಳೆದ ೨ ವರ್ಷದಿಂದ ಇಂತಹ ಕರೆ ಬರುತ್ತಿದ್ದ ಬಗ್ಗೆ ಈ ಹಿಂದೆಯೂ ದೂರು ಕೊಟ್ಟಿದ್ದೆ.ಇತ್ತೀಚೆಗೆ ತಬ್ಲಿಘಿ ಬಗ್ಗೆ ಮಾತನಾಡಿದ್ದಕ್ಕೆ ಹೀಗೆ ಕರೆಗಳು ಬರುತ್ತಿದೆ ಹಾಗೂ ಇಂತಹ ಕರೆ ಮಾಡುವರ ಪತ್ತೆ ಮಾಡುವ ಕಾರ್ಯವಾಗಬೇಕು.ನನಗೆ ಪೊಲೀಸರ ಭದ್ರತೆ ಬೇಡ, ಕಾರ್ಯಕರ್ತರು ನನ್ನ ಜೊತೆಗಿದ್ದಾರೆ.ಅಲ್ಲದೆ, ಕೊರೋನಾ ಸಂದರ್ಭ ಪೊಲೀಸರ ಶ್ರಮ ಹೆಚ್ಚಿರುತ್ತೆ ಅದಕ್ಕೆ…
Read Moreಕೊರೊನಾ ಟೈಂನಲ್ಲಿ ಉಡುಪಿ ಡಿಸಿ ಮೇಲೆ ಯಾರಾ ಒತ್ತಡ?
ಉಡುಪಿ: ಕೇಂದ್ರ ಸರಕಾರ ಆದೇಶದ ಅನ್ವಯ ಜಿಲ್ಲೆಗೆ ಯಾರನ್ನು ಕೂಡ ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಉಡುಪಿ ಡಿಸಿ ಜಗದೀಶ್ ತಿಳಿಸಿದ್ದು,ಸದ್ಯಕ್ಕೆ ನೀವೆಲ್ಲ ಎಲ್ಲಿದ್ದೀರೋ ಅಲ್ಲೇ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರು, ಪುಣೆ ಮುಂಬೈನಲ್ಲಿರುವ ಉಡುಪಿಜಿಲ್ಲೆಯ ನಾಗರೀಕರಲ್ಲಿ ಮನವಿ ಮಾಡಿದ ಅವರು,ಈಗಾಗಲೇ ಜಿಲ್ಲೆಯಲ್ಲಿ ೩ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಗುಣ ಮುಖರಾಗಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರುಗಳು,ಸಂಸದರು ನನ್ನ ಮೇಲೆ ನಿಮ್ಮನ್ನು ಕರೆಸಿಕೊಳ್ಳುವಂತೆ ಒತ್ತಡವಿದೆ.ಆದರು ನಿಮ್ಮನ್ನು ಕೊರೋನಾ ಲಾಕ್ ಡೌನ್ ಮುಗಿಯುವವರೆಗೂ ಇಲ್ಲಿಗೆ ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದರು. ಜೊತೆಗೆ ಲಾಕ್ ಡೌನ್ ಮುಗಿದ ಬಳಿಕ ನೀವು ಬರಬಹುದು, ಬಂಧುಗಳನ್ನು ಸೇರಬಹುದು. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಬರುವುದರಿಂದ ತಮಗೂ ಹಾಗೂ ಇಲ್ಲಿ ಇರುವವರೆಗೂ ತೊಂದರೆಯಾಗುತ್ತದೆ. ನಿಮಗೆ ತೊಂದರೆ ಕೊಡುವ ಉದ್ದೇಶ ನನ್ನಲ್ಲಿ ಇಲ್ಲ, ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ದಯವಿಟ್ಟು ತಾವು ಎಲ್ಲಿ ಇದ್ದಿರೋ ಅಲ್ಲಿಯೇ ಇರಿ,…
Read More