ಪಿಕಪ್ ಹಾಗೂ ಓಮ್ನಿ ನಡುವೆ ಭೀಕರ ಅಪಘಾತ- ಇಬ್ಬರು ಸಾವು..!

ಕೊಡಗು: ಪಿಕಪ್ ಮತ್ತು ಓಮ್ನಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಭೇತ್ರಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಹರೀಶ್ ಎಂದು ಗುರುತಿಸಲಾಗಿದೆ. ಪಿಕಪ್ ಬಂದು ಗುದ್ದಿದ ರಭಸಕ್ಕೆ ಓಮ್ನಿ ನಜ್ಜುಗುಜ್ಜಾಗಿದೆ. ಓಮ್ನಿ ಚಾಲಕ ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಗಾಯಗೊಂಡ ಸುಬ್ರಮಣಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಸಾನ್ನಪ್ಪಿದ್ದಾರೆ. ಈ ಮೂಲಕ ಅಪಘಾತದಲ್ಲಿ ಮೃತರಾದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಮೃತಪಟ್ಟವರಿಬ್ಬರು ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದವರಾಗಿದ್ದಾರೆ. ಈ ಅಪಘಾತ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಕೊಡಗಿನಲ್ಲಿ ನಿಯಮ ಉಲ್ಲಂಘನೆ ಬಾರಿ ಮೊತ್ತದ ದಂಡ ವಸೂಲಿ…!

ವಿಶ್ವವನ್ನೇ ದಂಗು ಬಡಿಸಿದ ಕೊರೊನಾದಿಂದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ತತ್ತರಿಸಿದವರೇ. ಇದರ ನಡುವೆ ಕೊರೊನಾ ಕಂಟಕದಿಂದ ಮುಕ್ತರಾಗಲು ಸರಕಾರ, ಆಡಳಿತ ವ್ಯವಸ್ಥೆ ಕೂಡ ಸಾಕಷ್ಟು ಶ್ರಮ ವಹಿಸಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ಹಲವು ಮಾರ್ಗಸೂಚಿಗಳನ್ನು ಹೊರಡಿಸಿ, ಮೂರ್ನಾಲ್ಕು ತಿಂಗಳಿನವರೆಗೆ ಲಾಕ್ಡೌನ್ ಹೇರಿತ್ತು. ಈ ನಡುವೆ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಕೊಡಗನಲ್ಲಿ ಉಲ್ಲಂಘನೆ ಮಾಡಿದವರಿಂದ ಪೊಲೀಸರು 7.75 ಲಕ್ಷ ರೂ. ಹಾಗೂ ಗ್ರಾಪಂಗಳು 1.54 ಲಕ್ಷ ರೂ ದಂಡ ವಸೂಲಿ ಮಾಡಿವೆ. ಒಟ್ಟು 9,30,200ರೂ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More