ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶರವೇಗದಲ್ಲಿ ರನ್‌ಗಳಿಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿದ್ದಾರೆ.ಇದೀಗ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕಾಂಗರೂ ನಾಡಿನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ.ಆಸ್ಟ್ರೇಲಿಯಾ ನೆಲದಲ್ಲಿ ಮೂರು ಸಾವಿರ ರನ್‌ಗಳನ್ನು ದಾಖಲಿಸಿದ ಎರಡನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read MoreCategory: ಕ್ರೀಡೆ
ಐಪಿಎಲ್ ಟೂರ್ನ್ ನಿಂದ ಹೊರ ನಡೆದ ಸುರೇಶ್ ರೈನಾ..!
ದುಬೈ : ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಚೆನ್ನೈ ಸೂಪರ್ಕಿಂಗ್ಸ್ ಅನುಭವಿ ಆಟಗಾರ ಸುರೇಶ್ ರೈನಾ ಟೂರ್ನಿಯಿಂದ ಹೊರ ಬಂದಿದ್ದಾರೆ. ಈ ಬಾರಿ ದುಬೈನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಗೆ ಈಗಾಗಲೇ ಎಲ್ಲಾ ತಂಡಗಳು ಹಾಜರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೀಪಕ್ ಚಹರ್ ಹಾಗು ತಂಡದ ಕೆಲ ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು ಎಂದು ಸುದ್ದಿಯಾಗಿತ್ತು. ಇದೀಗ ಸುರೇಶ್ ರೈನಾ ಟೂರ್ನಿಯಿಂದ ಹೊರ ಬಂದಿದ್ದಾರೆಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವೇ ಹೇಳಿಕೊಂಡಿದೆ. ಈ ಬಗ್ಗೆ ಸ್ವತಃ ಸಿಇಒ ವಿಶ್ವನಾಥ್, ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ವಾಪಸ್ ತೆರಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸುರೇಶ್ ರೈನಾ ಮತ್ತು ಅವರ ಕುಟುಂಬಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಟ್ವೀಟ್…
Read Moreಗಣರಾಜ್ಯೋತ್ಸವಕ್ಕೆ ಟೀಂ ಇಂಡಿಯಾ ಗಿಫ್ಟ್ – ಕಿವೀಸ್ ವಿರುದ್ಧ ಭರ್ಜರಿ ಗೆಲುವು
ಮೌಂಟ್ ಮೌಂಗಾನೆ : ಮೊದಲ ಏಕದಿನ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿ ಜಯ ಪಡೆದಿದ್ದ ಟೀಂ ಇಂಡಿಯಾ, ಇದೀಗ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ತೋರಿದು 90 ರನ್ ಅಂತರದಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದೆ. ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 325 ರನ್ ಗಳ ಬೃಹತ್ ಮೊತ್ತವನ್ನು ನೀಡಿ ಕೇವಲ 234 ರನ್ ಗಳಿಗೆ ಕಿವೀಸ್ ತಂಡವನ್ನು ಆಲೌಟ್ ಮಾಡುವ ಮೂಲಕ 5 ಪಂದ್ಯಗಳ ಟೂರ್ನಿಯಲ್ಲಿ 2-0 ಮುನ್ನಡೆ ಪಡೆದಿದ್ದಾರೆ. ಇನ್ನೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಟೀಂ ಇಂಡಿಯಾ ನಾಯಕ ಕೊಹ್ಲಿ ನಿರ್ಧಾರವನ್ನು ಸಮರ್ಥಿಸುವಂತೆ ಆರಂಭಿಕರು ಬ್ಯಾಟ್ ಬೀಸಿದರು. ಆರಂಭಿಕರಾದ ರೋಹಿತ್ ಶರ್ಮಾ 87 (96 ಎಸೆತ, 9 ಬೌಂಡರಿ, 3 ಸಿಕ್ಸರ್) ರನ್ ಸಿಡಿಸಿ ವೃತ್ತಿ ಜೀವನದ 38ನೇ ಅರ್ಧ ಶತಕ ಪೂರೈಸಿದರೆ,…
Read Moreಪಾಂಡ್ಯ, ರಾಹುಲ್ಗೆ ರಿಲೀಫ್ ಕೊಟ್ಟ ಬಿಸಿಸಿಐ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಮೇಲಿದ್ದ ಅಮಾನತ್ತಿನ ಶಿಕ್ಷೆಯನ್ನು ಇದೀಗ ಬಿಸಿಸಿಐ ಹಿಂಪಡೆದಿದೆ. ಬಾಲಿವುಡ್ ನಿರ್ದೇಶಕ, ನಟ ಮತ್ತು ನಿರೂಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಇಬ್ಬರೂ ಆಟಗಾರರು ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸಂದರ್ಶನದಲ್ಲಿ ಇಬ್ಬರೂ ಆಟಗಾರರು ಆಡಿದ ಮಾತುಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಓಪನರ್ ಕೆ.ಎಲ್. ರಾಹುಲ್ ಅವರಿಗೆ ಬಿಸಿಸಿಐ ಕೊಂಚ ರಿಲೀಫ್ ನೀಡಿದೆ. ಬಿಸಿಸಿಐನ ನಿರ್ವಾಹಕ ಸಮಿತಿ ಇಬ್ಬರು ಆಟಗಾರರ ಮೇಲಿದ್ದ ಮಧ್ಯಂತರ ಅಮಾನತ್ತು ಆದೇಶವನ್ನು ತಕ್ಷಣಕ್ಕೆ ಆಚರಣೆಗೆ ಬರುವಂತೆ ಹಿಂಪಡೆದಿದೆ.
Read More31 ವರ್ಷಗಳ ಬಳಿಕ ತವರು ನೆಲದಲ್ಲಿ ಫಾಲೋಆನ್ ಎದುರಿಸಿದ ಆಸೀಸ್ – ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಟೀಂ ಇಂಡಿಯಾ
ಟೀಂ ಇಂಡಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಗಿರುವ ಆಸೀಸ್ ತಂಡ ಫಾಲೋಆನ್‍ಗೆ ಒಳಗಾಗಿದ್ದು, 31 ವರ್ಷಗಳ ಬಳಿಕ ತವರು ನೆಲದಲ್ಲಿ ಆಸೀಸ್ ಫಾಲೋಆನ್ ಎದುರಿಸಿದೆ. ಟೆಸ್ಟ್ ಪಂದ್ಯದ 4ನೇ ದಿನದಾಟದ ವೇಳೆ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಯ್ತು, ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿ 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 322 ರನ್ ಗಳ ಮುನ್ನಡೆಯನ್ನು ಪಡೆದಿತ್ತು. ಈ ಮೊತ್ತ ಆಸೀಸ್ ನೆಲದಲ್ಲಿ ಇದುವರೆಗೂ ಪಡೆದ ತಂಡ ಪಡೆದಿರುವ ಬಹೃತ್ ಮುನ್ನಡೆಯಾಗಿದೆ. ಸದ್ಯ ಅಂತಿಮ ದಿನದಾಟದಲ್ಲಿ ಆಸೀಸ್ ಇನ್ನಿಂಗ್ಸ್ ಮುನ್ನಡೆಗೆ 10 ವಿಕೆಟ್ ಗಳಲ್ಲಿ 316 ರನ್ ಗಳ ಅಗತ್ಯವಿದೆ.
Read Moreಐದನೇ ದಿನ ಮಳೆಗೆ ಆಹುತಿ: ಭಾರತಕ್ಕೆ ಸರಣಿ ಜಯದ ಕೀರ್ತಿ
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ ಅಂತಿಮ ದಿನ ಮಳೆಗೆ ಬಲಿಯಾಗುವುದರೊಂದಿಗೆ ಪಂದ್ಯಕ್ಕೆ ಡ್ರಾ ಮುದ್ರೆ ಬಿದ್ದಿದೆ. ಇದರೊಂದಿಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ ಭಾರತ ಐತಿಹಾಸಿಕ ಸರಣಿ ಗೆದ್ದು ಬೀಗಿದೆ. ಕೊಹ್ಲಿ ಹುಡುಗರು ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಸರಣಿ ಗೆದ್ದ ಸಾಧನೆ ಮಾಡಿದ್ದಾರೆ. ನಾಲ್ಕನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದ್ದ ಆಸ್ಟ್ರೇಲಿಯಾ ಅಂತಿಮ ದಿನ ಸೋಲು ತಪ್ಪಿಸಾಲು ಹೋರಾಡಬೇಕಿತ್ತು. ಆದರೆ ವರುಣನ ಕೃಪೆ ಪೈನ್ ಬಳಗದ ಮೇಲೆ ಇದ್ದರಿಂದ ಮತ್ತೊಂದು ಸೋಲು ಡ್ರಾಗೆ ಪರಿವರ್ತನೆಯಾಯಿತು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ622 ರನ್ ಗಳಿಸಿ ಡಿಕ್ಲರ್ ಮಾಡಿಕೊಂಡಿತ್ತು. ಭಾರತದ ಪರ ಚೇತೇಶ್ವರ ಪೂಜಾರ 193 ರನ್, ರರಿಷಭ್ ಪಂತ್ ಅಜೇಯ159 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ತಂಡ ಕೇವಲ 300 ರನ್ ಗಳಿಗೆ ಅಲ್ ಔಟ್ ಆಗುವುದರೊಂದಿಗೆ…
Read Moreಮೈದಾನದಲ್ಲೇ ಕಿತ್ತಾಡಿಕೊಂಡ ಜಡೇಜಾ-ಇಶಾಂತ್..! ವಿಡಿಯೋ ವೈರಲ್
ಪರ್ತ್(ಡಿ.19): ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಹಾಗೂ ಸ್ಪಿನ್ನರ್ ರವೀಂದ್ರ ಜಡೇಜಾ, ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನ 4ನೇ ದಿನದಾಟದ ವೇಳೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ಇಬ್ಬರೂ ಏನೇನು ಮಾತನಾಡಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಇಬ್ಬರೂ ಫೀಲ್ಡಿಂಗ್‌ನಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ವಾಗ್ವಾದಕ್ಕಿಳಿದಿದ್ದರು. ಜಡೇಜಾ, ಬೇಡಿಕೆಯನ್ನು ಇಶಾಂತ್ ತಿರಸ್ಕರಿಸಿದ್ದೇ ವಾಗ್ವಾದಕ್ಕೆ ಕಾರಣ ಎನ್ನಲಾಗಿದೆ. ವಾಗ್ವಾದ ಹೆಚ್ಚಾಗುವ ವೇಳೆಗೆ ವೇಗಿ ಮೊಹಮದ್ ಶಮಿ ಮತ್ತು ಕುಲ್ದೀಪ್ ಯಾದವ್ ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ. ಪರ್ತ್ ಟೆಸ್ಟ್’ನಲ್ಲಿ ಇಶಾಂತ್ ಶರ್ಮಾ 5 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಜಡೇಜಾ ಸಬ್’ಸ್ಟಿಟ್ಯೂಟ್ ಫೀಲ್ಡರ್ ಆಗಿ ಕಣಕ್ಕಿಳಿದಿದ್ದರು. ಪರ್ತ್ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸುವುದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. ಇದೀಗ ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ಮೆಲ್ಬೊರ್ನ್’ನಲ್ಲಿ…
Read Moreಅಲ್ಪಮೊತ್ತಕ್ಕೆ ಉರುಳಿದ ಖ್ವಾಜಾ, ಹ್ಯಾಂಡ್ಸ್‌ಕಾಂಬ್
ಪರ್ತ್: ಆರಂಭಿಕರಿಬ್ಬರ ಶತಕದ ಜತೆಯಾಟದಿಂದ ಮುನ್ನುಗ್ಗುತ್ತಿದ್ದ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ತಿರುಗೇಟು ನೀಡಿದೆ. ಮೊದಲ ವಿಕೆಟ್’ಗೆ 112 ರನ್’ಗಳ ಜತೆಯಾಟವಾಡಿದ್ದ ಆಸಿಸ್’ಗೆ ಬುಮ್ರಾ ಮೊದಲ ಆಘಾತ ನೀಡಿದರು. 50 ರನ್ ಬಾರಿಸಿದ್ದ ಫಿಂಚ್ ಅವರನ್ನು ಎಲ್’ಬಿ ಬಲೆಗೆ ಕೆಡುವಿದ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ನಂತರ ಉಸ್ಮಾನ್ ಖ್ವಾಜ್ ಅವರನ್ನು ಪೆವಿಲಿಯನ್’ಗೆ ಅಟ್ಟುವಲ್ಲಿ ವೇಗಿ ಉಮೇಶ್ ಯಾದವ್ ಯಶಸ್ವಿಯಾದರು. ಹನುಮ ವಿಹಾರಿ ಉತ್ತಮವಾಗಿ ಆಡುತ್ತಿದ್ದ ಮಾರ್ಕಸ್ ಹ್ಯಾರಿಸ್[70] ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಬಲ ತುಂಬಿದರು. ಹ್ಯಾರಿಸ್ 141 ಎಸೆತಗಳಲ್ಲಿ 10 ಬೌಂಡರಿ ಸಹಿತ 70 ರನ್ ಬಾರಿಸಿ ರಹಾನೆಗೆ ಕ್ಯಾಚಿತ್ತು ಹೊರ ನಡೆದರು. ಬಳಿಕ ಶಾನ್ ಹ್ಯಾಂಡ್ಸ್ ಕಾಂಬ್, ಇಶಾಂತ್ ಬೌಲಿಂಗ್ ನಲ್ಲಿ ಕೊಹ್ಲಿ ಹಿಡಿದ ಕ್ಯಾಚ್ ಗೆ ಬಲಿಯಾದರು. ಇದೀಗ, ಆಸ್ಟ್ರೇಲಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 180 ರನ್ ಬಾರಿಸಿದ್ದು, ಶಾನ್ ಮಾರ್ಷ್…
Read Moreಮತ್ತೆ ಫೇಲ್ ಆದ ಆರಂಭಿಕ ಜೋಡಿ: ಕೊಹ್ಲಿ-ಪೂಜಾರ ಆಸರೆ
ಪರ್ತ್: ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ಆರಂಭಿಕರು ವಿಫಲವಾಗಿದ್ದು, ಇದೀಗ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾವನ್ನು 326 ರನ್’ಗಳಿಗೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಆರಂಭದಲ್ಲೇ ಮುಗ್ಗರಿಸಿತು. ಮಿಚೆಲ್ ಸ್ಟಾರ್ಕ್ ಬೌಲಿಂಗ್’ನಲ್ಲಿ ಮುರುಳಿ ವಿಜಯ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಬೆನ್ನಲ್ಲೇ ಕೆ.ಎಲ್ ರಾಹುಲ್ 17 ಎಸೆತಗಳನ್ನೆದುರಿಸಿ ಕೇವಲ 2 ರನ್ ಬಾರಿಸಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಅನುಭವಿಸಿದರು. ಇತ್ತೀಚಿನ ವರದಿ ಪ್ರಕಾರ, ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ‍್ ಪೂಜಾರ ರಕ್ಷಣಾತ್ಮಕ ಬ್ಯಾಟಿಂಗಿಗೆ ಮೊರೆ ಹೋಗಿದ್ದು, ಕ್ರಮವಾಗಿ 22 ಮತ್ತು 15 ರನ್ ಗಳಿಸಿ ಇನ್ನಿಂಗ್ಸ್ ಮುಂದುವರೆಸಿದ್ದಾರೆ.
Read Moreಟೀ ಟೈಮ್: ಭಾರತ 70ಕ್ಕೆ ಎರಡು
ಪರ್ತ್: ಆರಂಭಿಕರನ್ನು ಬೇಗನೆ ಕಳೆದುಕೊಂಡ ಆಘಾತದಲ್ಲಿರುವ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಚೇತರಿಕೆ ನೀಡಿದ್ದಾರೆ. ಇಬ್ಬರು ಮೂರನೇ ವಿಕೆಟ್‌ಗೆ ಈಗಾಗಲೇ 62 ರನ್ ಪೇರಿಸಿದ್ದಾರೆ. ಭೋಜನ ವಿರಾಮದ ನಂತರ ಭಾರತ 29 ಓವರ‍್ ಎದುರಿಸಿ ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ. ಇನ್ನೂ 256 ರನ್ನುಗಳ ಹಿನ್ನಡೆಯಲ್ಲಿರುವ ಭಾರತಕ್ಕೆ ದೀರ್ಘ ಜತೆಯಾಟದ ಅಗತ್ಯವಿದೆ.
Read More