ಈ ಟೈಂನಲ್ಲಿ ಎಣ್ಣೆ ಅಂಗಡಿ ಓಪನ್..ನೋ ಚಾನ್ಸ್..

ಚಾಮರಾಜನಗರ:ಮೇ.೩ರವರೆಗೆ ರಾಜ್ಯದ ಎಲ್ಲೂ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ರಾಜ್ಯಕ್ಕೆ ಇದರಿಂದ ನಷ್ಟವಾಗುತ್ತಿದ್ದರೂ ರಾಜ್ಯದ ಜನತೆ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು. ಚಾಮರಾಜನಗರದ ಎಪಿಎಂಸಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ,ಸಾಮಾಜಿಕ ಅಂತರವನ್ನು ಎಲ್ಲ ಕಡೆಯೂ ಕಾಯ್ದುಕೊಳ್ಳಲು ಎಷ್ಟೇ ಮನವಿ ಮಾಡಿದರೂ ಕೆಲವು ಕಡೆ ವಿಫಲವಾಗುತ್ತಿದೆ. ಇಂಥ ಸಂದರ್ಭದಲ್ಲಿ ಬಾರ್‌ಗಳನ್ನು ತೆರೆದರೆ ಕಥೆ ಏನು? ಈ ನಿಟ್ಟಿನಲ್ಲಿ ಸದ್ಯಕ್ಕೆ ಈ ನಿರ್ಧಾರ ಮಾಡಲಾಗಿಲ್ಲ ಅಂತ ಸಚಿವರು ತಿಳಿಸಿದರು. ಇನ್ನು ಕೇಂದ್ರ ಸರ್ಕಾರ ೧ ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಬೆಂಬಲ ಬೆಲೆ ಆಧಾರದಲ್ಲಿ ಖರೀದಿಸಲು ಅನುಮತಿ ನೀಡಿದೆ ಅಂತ ಸ್ಪಷ್ಟಪಡಿಸಿದ್ರು.. ಇದೇ ವೇಳೆ ಪಾದರಾಯನಪುರ ಪ್ರಕರಣಕ್ಕೆ ಸಂಬAಧಿಸಿದAತೆ ಮಾತನಾಡಿ, ಇಡೀ ಪ್ರಪಂಚವೇ ಕೊರೊನಾಗೆ ಸಿಲುಕಿದೆ. ಕೋವಿಡ್ ಬಂದAತಹ…

Read More

ವಿಷಪ್ರಸಾದ ಆರೋಪಿ ಮಹದೇವಸ್ವಾಮಿ ಗೂಂಡಾಗಿರಿ ವೀಡಿಯೋ ವೈರಲ್

ಮೈಸೂರು, ಡಿಸೆಂಬರ್ 19 : ವಿಷಪ್ರಸಾದ ಪ್ರಕರಣದಲ್ಲಿ ಮೊದಲು ಹೆಸರು ಥಳಕು ಹಾಕಿಕೊಂಡಿದ್ದು ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿಯವರದ್ದು. ಇವರ ಹೆಸರು ಕುಕೃತ್ಯದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಅವರು ರೌಡಿಸಂ ನಡೆಸಿದ್ದರು ಎನ್ನಲಾಗಿದೆ. ಮಹದೇವಸ್ವಾಮಿ ವಿರುದ್ಧ ಸಂಗಮೇಶ್ ಎಂಬುವವರು ಆರೋಪಿಸಿದ್ದು, ಸಂಗಮೇಶ್ ಎಂಬುವವರಿಗೆ ಸ್ವಾಮೀಜಿ ಕಳೆದ ಕೆಲವು ದಿನಗಳ ಕೆಳಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾದ ವೀಡಿಯೋವೊಂದು ವೈರಲ್ ಆಗಿದೆ. ಸಂಗಮೇಶ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಮಠದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಷಪ್ರಸಾದ ಪ್ರಕರಣ: ತಡರಾತ್ರಿ ಸಾಲೂರು ಮಠದ ಶ್ರೀಗಳು ಪೊಲೀಸ್ ಕಸ್ಟಡಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಮಠದಲ್ಲಿ ಮಹದೇವಸ್ವಾಮಿ ಗುಂಡಾಗಿರಿ ನಡೆಸಿ, ಸಾರ್ವಜನಿಕವಾಗಿ ಹಲ್ಲೆ ಮಾಡಿ ಎಳೆದಾಡಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸಾಕಷ್ಟು ಅನುಮಾನ ಮೂಡಿಸಿದೆ. ಸಂಗಮೇಶ್ ಎಂಬುವವರು ಸಾಲೂರು ಮಠಕ್ಕೆ ಹಣಕಾಸು ಸಹಾಯ ಮಾಡುತ್ತಿದ್ದರು. ಅಲ್ಲದೇ ಹಿರಿಯ…

Read More

ವಿಷ ಪ್ರಸಾದ ದುರಂತ : ಸಚಿವ ಪುಟ್ಟರಂಗ ಶೆಟ್ಟಿ ನಡೆಗೆ ಖಂಡನೆ

ಚಾಮರಾಜನಗರ : ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಧನ ನೀಡಲು ತಮ್ಮ ಬಳಿಗೆ ಕರೆಸಿಕೊಳ್ಳಲು ಮುಂದಾಗಿರುವ ಸಚಿವ ಪುಟ್ಟರಂಗಶೆಟ್ಟಿ ಅವರ ನಡೆಗೆ ಖಂಡನೆ ವ್ಯಕ್ತವಾಗಿದೆ. ಇಂದು ಮಧ್ಯಾಹ್ನ 2.30 ಕ್ಕೆ ಹನೂರಿನ ಪ್ರವಾಸಿ ಮಂದಿರದಲ್ಲಿ ಪರಿಹಾರ ಧನ ವಿತರಣಾ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದು, ಪರಿಹಾರ ಪಡೆಯಲು ಮೃತರ ಕುಟುಂಬಸ್ಥರು ಸುಮಾರು 50 ಕಿ.ಮೀ ಪ್ರಯಾಣಿಸಬೇಕಾಗಿದೆ. ಮತ ಕೇಳುವಾಗ ಜನಪ್ರತಿನಿಧಿಗಳು ಮನೆ ಬಾಗಿಲಿಗೆ ಬರುತ್ತಾರೆ. ಆದರೆ, ಪರಿಹಾರ ಪಡೆಯಲು ಸಚಿವರ ಬಳಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವಿಷ ಪ್ರಸಾದ ಸೇವಿಸಿ ಒಂದೇ ಗ್ರಾಮ ಬಿದರಹಳ್ಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಗ್ರಾಮಕ್ಕೆ ಸಚಿವರು ಬರುವ ಬದಲು ಜನರನ್ನೇ ತಮ್ಮ ಬಳಿ ಕರೆಸಿಕೊಳ್ಳುತ್ತಿದ್ದಾರೆ. ಕುಟುಂಬದವರು ಮೊದಲೇ ಕುಟುಂಬಸ್ಥರನ್ನು ಕಳೆದುಕೊಂಡು ದುಃಖಿತರಾಗಿದ್ದು, ಪರಿಹಾರ ಹಣ ಪಡೆಯಲು 50…

Read More