ಆಳಂದ(ಕಲಬುರಗಿ):ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸುಕ್ಷೇತ್ರ ಮಾದನಹಿಪ್ಪರಗಿಯ ಶ್ರೀ ಶಿವಲಿಂಗೇಶ್ವರ ಮಹಾ ರಥೋತ್ಸವವನ್ನು ರದ್ದು ಮಾಡಲಾಗಿದೆ. ಇದೆ ಮೇ.೭ರಂದು ಆಗಿ ಹುಣ್ಣಿಮೆ ಯಂದು ರಥೋತ್ಸವ ನಡೆಯಬೇಕಾಗಿತ್ತು.ಆದರೆ ಕೊರೊನಾದಿಂದ ಇಡಿ ದೇಶದ ಜನತೆ ಸಂಕಟ ಎದುರಿಸುತ್ತಿದ್ದಾರೆ.ಯಾವುದೇ ಜಾತ್ರೆ ರಥೋತ್ಸವಗಳನ್ನು ಮಾಡದಂತೆ ಸರಕಾರ ಸೂಚನೆ ನೀಡಿದೆ.ಹೀಗಾಗಿ ಸಾವಿರಾರು ಜನರು ಸೇರುವ ಈ ರಥೋತ್ಸವವನ್ನು ರದ್ದು ಮಾಡಲಾಗಿದೆ. ಇನ್ನು ಮಠದ ಒಡೆಯರಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿ ಸರಕಾರದ ಆದೇಶ ಪಾಲನೆ ಮಾಡಬೇಕೆಂದು ಜಾತ್ರೆ ರದ್ದು ಪಡಿಸಿರುದಾಗಿ ತಿಳಿಸಿದರು. ಅಲ್ಲದೆ, ಜಾತ್ರೆ ದಿನ ಯಾರು ಮನೆಯಿಂದ ಮಠದ ಕಡೆಗೆ ಬರದೆ ಮನೆಯಲ್ಲಿ ಜಾತ್ರೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ(ಕಲಬುರಗಿ)
Read MoreCategory: ಜ್ಯೋತಿಷ್ಯ
ಮಕರ ರಾಶಿಯವರಿಗೆ ಗುರು-ಶನಿ ನೀಡುತ್ತಿರುವ ಕೊನೆ ಅವಕಾಶ ಏನು ಗೊತ್ತೆ?
ಮಕರ ರಾಶಿಯವರಿಗೆ ಈಗೊಂದು ನೀತಿ ಪಾಠ ಹೇಳಿ, ಆ ನಂತರ ಲೇಖನ ಆರಂಭಿಸುತ್ತೇನೆ. ಇರುವೆಗಳು ಬೇಸಿಗೆಕಾಲದಲ್ಲಿ ಉಳಿದ ಕಾಲ, ಅಂದರೆ ಚಳಿ ಹಾಗೂ ಮಳೆಗಾಲಕ್ಕಿಂತ ಹೆಚ್ಚು ಶ್ರಮಪಟ್ಟು ಆಹಾರ ಸಂಗ್ರಹ ಮಾಡುತ್ತವೆ. ಏಕೆಂದರೆ, ಮುಂದಿನ ಕಾಲ ಅದೆಂಥ ಸನ್ನಿವೇಶ ಎದುರಾಗಬಹುದೋ ಗೊತ್ತಿಲ್ಲ. ದುಡಿಯುವ ಶಕ್ತಿ ಇದ್ದಾಗ, ಆಹಾರ ಕಣ್ಣಿಗೆ ಕಾಣುವಾಗ ಆಪತ್ಕಾಲಕ್ಕೆ ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು. ಕಳೆದ ಅಕ್ಟೋಬರ್ ಹನ್ನೊಂದನೇ ತಾರೀಕು ನಿಮ್ಮ ಜನ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತಿದೆ. ಹನ್ನೆರಡನೇ ಮನೆಯಲ್ಲಿ ನಿಮ್ಮದೇ ರಾಶ್ಯಾಧಿಪತಿ ಶನಿಯು ಸ್ಥಿತನಾಗಿದ್ದಾನೆ. ಈ ಎರಡು ಗ್ರಹದ ಫಲ ನಿಮ್ಮ ಪಾಲಿಗೆ ಹೇಗೆ ಸಿಗಬಹುದು. ಮುಂದಿನ ವರ್ಷದ ನವೆಂಬರ್ ಐದನೇ ತಾರೀಕಿನ ತನಕ ಗುರು ಅದೇ ಹನ್ನೊಂದನೇ ಮನೆಯಲ್ಲಿ ಇರುತ್ತದೆ.
Read Moreಗುರು- ಶನಿಯ ಪ್ರಭಾವ ಕುಂಭ ರಾಶಿಯವರಿಗೆ ಹೇಗಿರುತ್ತದೆ?
ಕುಂಭ ರಾಶಿಯವರಿಗೆ ಪ್ರಮುಖ ಗ್ರಹಗಳಾದ ಗುರು-ಶನಿಯ ಅನುಗ್ರಹ ಹೇಗಿದೆ ಎಂದು ತಿಳಿಸಿಕೊಡುವ ಲೇಖನ ಇದು. ಇಷ್ಟು ಸಮಯ ಅಂದರೆ ಅಕ್ಟೋಬರ್ ಹನ್ನೊಂದನೇ ತಾರೀಕಿನ ತನಕ ಒಂಬತ್ತನೇ ಸ್ಥಾನದಲ್ಲಿದ್ದ ಗುರು ಗ್ರಹವು ಹತ್ತನೇ ಮನೆಗೆ ಪ್ರವೇಶ ಆಗಿದೆ. ಮುಂದಿನ ವರ್ಷದ ಅಂದರೆ 2019ರ ನವೆಂಬರ್ ತನಕ ಅಲ್ಲೇ ಇರುತ್ತದೆ. ಹತ್ತನೇ ಸ್ಥಾನವು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರವನ್ನು ತಿಳಿಸುತ್ತದೆ. ಇಷ್ಟು ಸಮಯ ಗುರುವಿನ ಅನುಗ್ರಹ ಸಂಪೂರ್ಣವಾಗಿತ್ತು. ಅಂದರೆ ಅದೃಷ್ಟ ಸ್ಥಾನದಲ್ಲಿ ಇದ್ದ ಗುರು ಗ್ರಹವು ಅಲ್ಲಲ್ಲಿ ತಡವಾದರೂ ಉತ್ತಮ ಫಲಗಳನ್ನೇ ನೀಡುತ್ತಿದ್ದ. ಅದರಲ್ಲೂ ಸಂತಾನ ಅಪೇಕ್ಷಿತರಿಗೆ, ವಿವಾಹಕ್ಕೆ ಪ್ರಯತ್ನಿಸುತ್ತಿದ್ದವರಿಗೆ, ವಿದೇಶ ವ್ಯಾಸಂಗ ಸೇರಿದಂತೆ ಹಲವು ಉತ್ತಮ ಫಲಗಳನ್ನೇ ನೀಡಿದೆ.
Read Moreಸಂಸತ್ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ? ಅಮ್ಮಣ್ಣಾಯ ಭವಿಷ್ಯ
ಮುಂದಿನ ವರ್ಷದ ಫೆಬ್ರವರಿ ತನಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಯ ಚೆನ್ನಾಗಿಲ್ಲ. ಆ ಬಗ್ಗೆ ಈ ಹಿಂದೆ ಕೂಡ ತಿಳಿಸಿದ್ದೆ. ಕರ್ನಾಟಕ ವಿಧಾನಸಭೆ ಸೇರಿದ ಹಾಗೆ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಅವರಿಗೆ ಪೂರಕ ಆಗಿಲ್ಲ. ಹಾಗೂ ಕೆಲ ಮಟ್ಟಿಗಿನ ಅವಮಾನ ಎದುರಿಸಬೇಕಾಗುತ್ತದೆ ಅಂತ ಕೂಡ ಹೇಳಿದ್ದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಅವಕಾಶ ಹೆಚ್ಚಿದೆ. ಇನ್ನು ಮುಂದಿನ ಫೆಬ್ರವರಿ ನಂತರ ಮೋದಿ ಅವರಿಗೆ ಉತ್ತಮ ಕಾಲ ಬರಲಿದೆ. ಮುಂಬರುವ ಲೋಕಸಭಾ ಚುನಾವಣೆಯು ಬಿಜೆಪಿಯ ಪರವಾಗಿಯೇ ಇರುತ್ತದೆ. ಕನಿಷ್ಠ ವಿರೋಧ ಪಕ್ಷಗಳು ಈಗಿನ ಪರಿಸ್ಥಿತಿಯನ್ನೇ ವಾಸ್ತವ ಎಂದುಕೊಂಡು, ಮೈ ಮರೆಯದೆ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
Read More