ಕೊರೊನಾ ಸೋಕಿಂತೆ ಸಾವು, ದಕ್ಷಿಣ ಕನ್ನಡದಲ್ಲಿ ಅಂತ್ಯಸ0ಸ್ಕಾರದ ಹೈಡ್ರಾಮಾ..

ಪಚ್ಚನಾಡಿ (ದಕ್ಷಿಣ ಕನ್ನಡ) ಕೊರೊನಾ ಸೋಂಕಿನಿ0ದ ನಿನ್ನೆ ಮೃತಪಟ್ಟ ಮಹಿಳೆಯ ಅಂತ್ಯಸ0ಸ್ಕಾರ ನಡೆಸಲು ಎಲ್ಲಡೆ ಜನರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊನೆಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಆಕೆಯ ಹುಟ್ಟೂರಲ್ಲಿ ಅಂತಿಮ ವಿಧಿವಿಧಾನ ಪೂರೈಸಿದೆ. ಕೊರೊನಾದಿಂದ ನಿನ್ನೆ ಮೃತಪಟ್ಟ ಮಹಿಳೆಯ ಅಂತ್ಯಸ0ಸ್ಕಾರವನ್ನು ಮೊದಲು ಪಚ್ಚನಾಡಿಯಲ್ಲಿರುವ ರುದ್ರಭೂಮಿಯಲ್ಲಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆತ್ತು. ಇದಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಮಂಜೂರಿನ ಚಿತಾಗಾರದಲ್ಲಿ ಅಂತ್ಯಸ0ಸ್ಕಾರ ನಡೆಸಲು ಮುಂದಾದಾಗ ಅಲ್ಲಿಯೂ ನೂರಾರು ಸಂಖ್ಯೆ ಜನರು ಜಮಾಯಿಸಿ ಗಲಾಟೆ ನಡೆಸಿದರು. ಇದಕ್ಕೆ ಅಲ್ಲಿನ ಶಾಸಕ ಡಾ.ವೈ. ಭರತ್ ಶೆಟ್ಟಿ, ಜನರ ಒಪ್ಪಿಗೆಯಿಲ್ಲದೆ ಅಂತ್ಯಸ0ಸ್ಕಾರ ನಡೆಸಲು ತಾವೂ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ. ಸ್ಥಳೀಯರು, ಶಾಸಕರ ವಿರೋಧಕ್ಕೆ ಮಣಿದ ಜಿಲ್ಲಾಡಳಿತ, ಮೂಡುಶೆಡ್ಡೆ ಪ್ರದೇಶದಲ್ಲಿ ಅಂತ್ಯಸ0ಸ್ಕಾರ ನಡೆಸಲು ನಿರ್ಧರಿಸಿತ್ತು. ಆದರೆ ಅಲ್ಲಿಯೂ ಅಂತ್ಯ ಸಂಸ್ಕಾರ ನಡೆಸದಂತೆ ಜನ…

Read More

ಕೈ ಪಕ್ಷ ಮುಗಿಸಲೆಂದೇ ಸಿದ್ದು ಪಕ್ಷಕ್ಕೆ ಎಂಟ್ರಿ : ಜನಾರ್ದನ ಪೂಜಾರಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್​​ ಮುಗಿಸುವ ಉದ್ದೇಶದಿಂದಲೇ ಪಕ್ಷಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್​​​ ನಾಯಕ ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ. ಆಪರೇಷನ್​ ಕಮಲದ ವಿಚಾರ ಪದೇ ಪದೆ ಸುಳಿದಾಡುತ್ತಿದ್ದರೂ, ಮೈತ್ರಿ ಸರ್ಕಾರಕ್ಕೆ ಯಾವುದೇ ಕುತ್ತು ಬಂದಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ಭಾರೀ ಕಸರತ್ತು ನಡೆಸಿದ್ದರು. ಆದರೆ, ಸಿದ್ದರಾಮಯ್ಯ ಅವರಿಂದ ಸರ್ಕಾರ ಉಳಿದುಕೊಂಡಿಲ್ಲ ಎಂದು ಜನಾರ್ದನ ಪೂಜಾರಿ ನೇರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮೈತ್ರಿ ಸರ್ಕಾರ ಉಳಿದುಕೊಂಡಿದೆ ಎಂಬುದು ಸುಳ್ಳು. ಸರ್ಕಾರ ಸುಗಮವಾಗಿ ಸಾಗುತ್ತಿದೆ ಎಂದರೆ ಅದಕ್ಕೆ ಕಾರಣ, ಜೆಡಿಎಸ್​ನ ಹಿರಿಯ ನಾಯಕ ದೇವೇಗೌಡರು. ಅವರ ಪಾತ್ರ ಇಲ್ಲಿ ದೊಡ್ಡದು ಎಂದು ಹೇಳಿದ್ದಾರೆ.

Read More

ರಸ್ತೆ ಕಾಮಗಾರಿಗೆಂದು ತಂದಿದ್ದ ಡಾಂಬರನ್ನು ಕದ್ದ ಖದೀಮರು

ಮಂಗಳೂರು, ಡಿಸೆಂಬರ್ 30 : ರಸ್ತೆ ನಿರ್ಮಾಣಕ್ಕೆ ಬಳಸುವ ಡಾಂಬರನ್ನು ಕಳ್ಳತನ ಮಾಡಿದ ಪ್ರಸಂಗ ಬೆಳಕಿಗೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಸಜಿಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ನವೆಂಬರ್ ತಿಂಗಳಿನಲ್ಲಿ ಡಾಂಬರ್ ಕಳವು ಮಾಡಿದ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಕ್ವೀನ್ಸ್ ರಸ್ತೆಯ ಬಿಬಿಎಂಪಿ ಕಚೇರಿಯಲ್ಲಿ ಕಳವು ಬಂಧಿತ ಆರೋಪಿಗಳನ್ನು ಪುತ್ತೂರು ತಾಲೂಕು ನೆಕ್ಕಿಲಾಡಿ ನಿವಾಸಿ ಉಮ್ಮರುಲ್ ಫಾರೂಕ್ (24), ವಿಟ್ಲ ಕಸಬಾ ನಿವಾಸಿ ಮಹಮ್ಮದ್ ಅಶ್ರಫ್ (24) ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು 43 ಬ್ಯಾರೆಲ್ ಡಾಂಬರ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 3 ಲಕ್ಷ ರೂಪಾಯಿ. ಈ…

Read More